ಭಾರತ್ ಜೋಡೋ ಯಾತ್ರೆಯಲ್ಲಿ ಸಾವರ್ಕರ್ ಫೋಟೋ, ಪ್ರಿಂಟಿಂಗ್ ಮಿಸ್ಟೇಕ್ ಎಂದ ಕಾಂಗ್ರೆಸ್!
ಭಾರತ್ ಜೋಡೋ ಯಾತ್ರೆ ಸ್ವಾಗತಕ್ಕೆ ಕೇರಳ ಕಾಂಗ್ರೆಸ್ ಹಾಕಿದ ಬ್ಯಾನರ್‌ನಲ್ಲಿ ವೀರ ಸಾವರ್ಕರ್ ಫೋಟೋ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ತಕ್ಷಣವೇ ಗಾಂಧಿ ಪೋಟೋ ಅಂಟಿಸಿ ಇದು ಪ್ರಿಂಟಿಂಗ್ ಮಿಸ್ಟೇಕ್ ಎಂದು ತೇಪೆ ಹಚ್ಚಿದೆ.
ಕೇರಳ(ಸೆ.21): ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಸದ್ಯ ಕೇರಳದಲ್ಲಿ ಭಾರಿ ಬೆಂಬಲದೊಂದಿಗೆ ಸಂಚರಿಸುತ್ತಿದೆ. ಆದರೆ ಈ ಯಾತ್ರೆ ಕಾಂಗ್ರೆಸ್ ರಾಜಕೀಯವಾಗಿ ಸಂಚಲನ ಸೃಷ್ಟಿಸುತ್ತಿದೆ. ಆದರೆ ಪಕ್ಷದೊಳಗೆ ತೀವ್ರ ಹಿನ್ನಡೆಗೂ ಕಾರಣವಾಗಿದೆ. ಇದೀಗ ಕೇರಳದ ಕೊಚ್ಚಿಯಲ್ಲಿ ಭಾರತ್ ಜೋಡೋ ಯಾತ್ರೆ ಸ್ವಾಗತಿಸಲು ಸ್ವಾತಂತ್ರ್ಯ ವೀರರ ಬ್ಯಾನರ್ ಹಾಕಲಾಗಿದೆ. ಈ ಬ್ಯಾನರ್‌ನಲ್ಲಿ ವೀರ ಸಾವರ್ಕರ್ ಫೋಟೋ ಹಾಕಲಾಗಿದೆ. ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದು ಡಂಗುರ ಸಾರಿದ್ದ ಕಾಂಗ್ರೆಸ್ ಇದೀಗ ಸಾವರ್ಕರ್ ಫೋಟೋ ಹಾಕಿ ತೀವ್ರ ಮುಖಭಂಗಕ್ಕೆ ಒಳಗಾಗಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಕೇರಳ ಕಾಂಗ್ರೆಸ್ ಸ್ಥಳಕ್ಕೆ ಧಾವಿಸಿ ವೀರ ಸಾವರ್ಕರ್ ಫೋಟೋ ಮೇಲೆ ಮಹಾತ್ಮಾ ಗಾಂಧಿ ಫೋಟೋ ಅಂಟಿಸಿದೆ. ಬಳಿಕ ಇದು ಪ್ರಿಂಟಿಂಗ್ ಮಿಸ್ಟೇಕ್ ಎಂದು ಸ್ಪಷ್ಟನೆ ನೀಡಿದೆ.
ಅಲುವಾದಲ್ಲಿ(Kerala Aluva) ಈ ಬ್ಯಾನರ್ ಹಾಕಲಾಗಿತ್ತು. ದೇಶದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಜೊತೆಯಲ್ಲಿ ವೀರ ಸಾವರ್ಕರ್(veer savarkar Banner) ಫೋಟೋ ಕೂಡ ಹಾಕಲಾಗಿತ್ತು. ಈ ಬ್ಯಾನರ್ ಕುರಿತು ಆಲುವಾದ ಸಿಪಿಎಂ ನಾಯಕ ಪ್ರಶ್ನಿಸಿದ್ದಾರೆ. ವೀರ ಸಾವರ್ಕರ್ ವಿರುದ್ಧವೇ ಹೋರಾಡಿದ ಕಾಂಗ್ರೆಸ್(Congress) ಇದೀಗ ಸಾವರ್ಕರ್ ಫೋಟೋ ಹಾಕಿದೆ ಎಂದಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ಸ್ಪಷ್ಟನೆ ನೀಡಿದೆ. ಆಲವಾದ ಕಾಂಗ್ರೆಸ್ ನಾಯಕರು ಸ್ಥಳೀಯ ಪ್ರಿಂಟಿಂಗ್ ಶಾಪ್‌ನಲ್ಲಿ ಪ್ರಮುಖ ಸ್ವಾತಂತ್ರ್ಯ ವೀರರ ಬ್ಯಾನರ್ ಮಾಡಿಕೊಡುವಂತೆ ಸೂಚನೆ ನೀಡಲಾಗಿತ್ತು. ಪ್ರಿಂಟಿಂಗ್ ಶಾಪ್‌ನವರು ಈ ಫೋಟೋವನ್ನು ಸೇರಿಸಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
News Hour Special: ಸಾವರ್ಕರ್ ಹೋರಾಟಗಾರ ಅಥವಾ ಹೇಡಿ: ಯಾವುದು ಸತ್ಯ?
ಈ ಬ್ಯಾನರ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ. ಸತ್ಯವನ್ನು ಹೆಚ್ಚು ದಿನ ಮುಚ್ಚಿಡಲು ಸಾಧ್ಯವಿಲ್ಲ. ಹೊರಗೆ ಬಂದೇ ಬರುತ್ತೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಇನ್ನೂ ಕೆಲವರು ಕಾಂಗ್ರೆಸ್ ಕೊನೆಗೂ ಸತ್ಯ ಒಪ್ಪಿಕೊಂಡಿದೆ ಎಂದಿದ್ದಾರೆ. ಇತ್ತ ಬಿಜೆಪಿ ಐಟಿ ಸೆಲ್‌ನ ಅಮಿತ್ ಮಾಳವಿಯಾ ಖಡಕ್ ತಿರುಗೇಟು ನೀಡಿದ್ದಾರೆ. ರಾಹುಲ್ ಗಾಂಧಿಗೆ(Rahul Gandhi) ಸತ್ಯದ ಅರಿವಾಗಿದೆ. ಇದು ಉತ್ತಮ ಬೆಳವಣಿಗೆ. ರಾಹುಲ್ ಗಾಂಧಿ ಅಜ್ಜ ನೆಹರೂ ಪಂಜಾಬ್‌ನ ನಭಾ ಜೈಲಿನಲ್ಲಿ ಕೇವಲ ಎರಡು ವಾರ ಕಳೆದ ಬಳಿಕ ಬ್ರಿಟೀಷರಿಗೆ ಕ್ಷಮಾಪಣಾ ಪತ್ರ ಬರೆದು ಹೊರಬಂದಿದ್ದರು ಎಂದು ಟ್ವೀಟ್ ಮಾಡಿದ್ದಾರೆ.
ಸಾವರ್ಕರ್ ಫೋಟೋ ಇದೀಗ ಕಾಂಗ್ರೆಸ್‌ಗೆ ಇರಿಸು ಮುರಿಸು ತಂದಿದೆ. ಭಾರತ್ ಜೋಡೋ ಯಾತ್ರೆಯಲ್ಲಿ(Bharat Jodo Yatra) ಒಂದಲ್ಲ ಒಂದು ಪ್ರಮಾದಗಳು, ಸಂಕಷ್ಟಗಳು ಎದುರಾಗುತ್ತಿರುವುದು ಕಾಂಗ್ರೆಸ್ ಚಿಂತೆ ಹೆಚ್ಚಿಸಿದೆ.
ಹಿಂದೂ ಯುವಕನಿಗ ಚಾಕು ಇರಿತ, ಸಾವರ್ಕರ್ ಫೋಟೋ ವಿವಾದಿಂದ ಶಿವಮೊಗ್ಗದಲ್ಲಿ 144 ಸೆಕ್ಷನ್ ಜಾರಿ!
ರಾಹುಲ್ ಯಾತ್ರೆ ಸಮಿತಿ: ಆರ್‌ವಿಡಿಗೂ ಸಿಕ್ತು ಹುದ್ದೆ
ಭಾರತ್ ಜೋಡೋ ಯಾತ್ರೆ ರಾಜ್ಯ ಯಾತ್ರಿಗಳ ಸಮಿತಿ ಅಧ್ಯಕ್ಷರನ್ನಾಗಿ ಆರ್.ವಿ.ದೇಶಪಾಂಡೆ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇಮಕ ಮಾಡಿದ್ದಾರೆ. ಯಾತ್ರೆಗೆ ಜನ ಕಳಿಸುವುದಕ್ಕೆ ಆಗಲ್ಲ ಎಂದಿದ್ದ ಆರ್.ವಿ.ದೇಶಪಾಂಡೆ ಅವರಿಗೆ ಈ ಹಿಂದೆ ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ರಚಿಸಲಾಗಿದ್ದ 18 ಸಮಿತಿಗಳಲ್ಲಿ ಯಾವುದೇ ಜವಾಬ್ದಾರಿ ನೀಡಿರಲಿಲ್ಲ. ಕೆಪಿಸಿಸಿ ಅಧ್ಯಕ್ಷರ ಈ ನಡೆ ಬಗ್ಗೆ ಪಕ್ಷದ ಶಾಸಕರುಗಳೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ದೇಶಪಾಂಡೆ ಅವರಿಗೆ ರಾಜ್ಯ ಯಾತ್ರಿಗಳ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.