Asianet Suvarna News Asianet Suvarna News

ಶಿವಲಿಂಗ ದೊರೆತ ಪ್ರದೇಶಕ್ಕೆ 9 ಬೀಗ, ಸಿಆರ್ ಪಿಎಫ್ ಜಮಾವಣೆ, ಸಕಲ ಭದ್ರತೆಯಲ್ಲಿದ್ದಾನೆ ಗ್ಯಾನವಾಪಿಯ 'ಶಿವ'!

ವಾರಣಾಸಿಯ ಗ್ಯಾನವಾಪಿ ಮಸೀದಿಯ ವಝುಖಾನಾಕ್ಕೆ 9 ಬೀಗಗಳನ್ನು ಅಳವಡಿಸಿ ಸೀಲ್ ಮಾಡಲಾಗಿದೆ. ವಿಡಿಯೋ ಸಮೀಕ್ಷೆಯ ವೇಳೆ ಈ ಪ್ರದೇಶದಲ್ಲಿ ಶಿವಲಿಂಗವಿದೆ ಎನ್ನುವುದು ಪತ್ತೆಯಾಗಿತ್ತು. ಶಿವಲಿಂಗ ಪತ್ತೆಯಾದ ಬೆನ್ನಲ್ಲಿಯೇ ಇಡೀ ವಝುಕಾನಾವನ್ನು ಮೊಹರು ಹಾಕಿ ಸೀಲ್ ಮಾಡುವಂತೆ ಕೋರ್ಟ್ ಹೇಳಿತ್ತು.

Vazukhana sealed with 9 locks the responsibility of security handed over to CRPF in Gyanvapi Mosque san
Author
Bengaluru, First Published May 18, 2022, 3:57 PM IST

ಲಕ್ನೋ (ಮೇ. 18): ವಾರಣಾಸಿಯ ಗ್ಯಾನವಾಪಿ ಮಸೀದಿಯ (Gyanvapi Mosque) ವಝುಖಾನಾವನ್ನು (Vazukhana) ಆಡಳಿತವು 9 ಬೀಗಗಳನ್ನು ಹಾಕಿ ಲಾಕ್ ಮಾಡಿದೆ. ಇದರೊಂದಿಗೆ ವಝುಖಾನಾ ಭದ್ರತೆಯ ಹೊಣೆಯನ್ನು ಸಿಆರ್‌ಪಿಎಫ್‌ಗೆ (CRPF) ವಹಿಸಲಾಗಿದೆ. ಇಬ್ಬರು ಸಿಆರ್‌ಪಿಎಫ್ ಸಿಬ್ಬಂದಿ 24 ಗಂಟೆಗಳ ಕಾಲ ಸೀಲ್ ಮಾಡಿದ ವಜುಖಾನಾವನ್ನು ಕಾವಲು ಕಾಯಲಿದ್ದಾರೆ. ಇಬ್ಬರೂ ಸಿಆರ್‌ಪಿಎಫ್ ಸಿಬ್ಬಂದಿ ಪಾಳಿ ಪ್ರಕಾರ ಹಗಲಿರುಳು ಕರ್ತವ್ಯ ನಿರರ್ವಹಿಸುತ್ತಿದ್ದಾರೆ.

ಅಂದರೆ, ಪ್ರತಿ ಶಿಫ್ಟ್‌ನಲ್ಲಿ, ಇಬ್ಬರು ಸೈನಿಕರು ಅಲ್ಲಿ ನಿಲ್ಲುತ್ತಾರೆ, ಇದರಿಂದ ಶಿವಲಿಂಗದ ಸ್ಥಳಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಪ್ರತಿ ಪಾಳಿಯಲ್ಲಿ ದೇವಾಲಯದ ಭದ್ರತಾ ಮುಖ್ಯಸ್ಥರು, ಉಪ ಎಸ್ಪಿ ಶ್ರೇಣಿಯ ದೇವಾಲಯದ ಭದ್ರತಾ ಅಧಿಕಾರಿ ಮತ್ತು ಸಿಆರ್‌ಪಿಎಫ್‌ನ ಕಮಾಂಡೆಂಟ್ ಅವರು ಶಿವಲಿಂಗದ ಸ್ಥಳದಲ್ಲಿ ಹಠಾತ್ ತಪಾಸಣೆ ನಡೆಸಬಹುದು ಮತ್ತು ಭದ್ರತೆಯನ್ನು ಪರಿಶೀಲನೆ ಮಾಡಬಹುದು. ನ್ಯಾಯಾಲಯದ ಆದೇಶದ ಬಳಿಕ ಆಡಳಿತ ಮಂಡಳಿ ಈ ನಿರ್ಧಾರ ಕೈಗೊಂಡಿದೆ.

ವಾರಣಾಸಿ ಆಡಳಿತದ (varanasi authorities) ಪ್ರಕಾರ, ವಝುಖಾನಾ ಸ್ಥಳದಲ್ಲಿ ಒಂದು ಸಣ್ಣ ಸರೋವರವಿದ್ದು, ಈ ಪ್ರದೇಶವು ಈಗಾಗಲೇ ಕಬ್ಬಿಣದ ಬ್ಯಾರಿಕೇಡ್‌ಗಳು ಮತ್ತು ಬಲೆಗಳಿಂದ ಆವೃತವಾಗಿರುವ ಕಾರಣ ಅದನ್ನು ಮುಚ್ಚಲಾಗಿದೆ. ಇದೇ ಸ್ಥಳದಲ್ಲಿ ಹಿಂದೂಗಳು ಶಿವಲಿಂಗವನ್ನು (Shivaling) ಕಂಡುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ವಝುಖಾನಾದಲ್ಲಿ ಶಿವಲಿಂಗವಲ್ಲ ಕಾರಂಜಿ ಪತ್ತೆಯಾಗಿದೆ ಎಂದು ಮುಸ್ಲಿಂ ಕಡೆಯವರು ಹೇಳುತ್ತಿದ್ದಾರೆ. ಈ ಮಧ್ಯೆ ಮಸೀದಿಯ ವಝುಖಾನಕ್ಕೆ ಸಂಬಂಧಿಸಿದ ಮತ್ತೊಂದು ವಿಡಿಯೋ ಹೊರಬಿದ್ದಿದೆ. ಈ ಎರಡನೇ ವಿಡಿಯೋ ಕೂಡ ಹಳೆಯದೆಂದು ಹೇಳಲಾಗುತ್ತಿದೆ. ಇಲ್ಲಿಯವರೆಗೆ, ಈ ಬಗ್ಗೆ ಒಟ್ಟು ಎರಡು ವೀಡಿಯೊಗಳು ವೈರಲ್ ಆಗಿವೆ. ಎರಡೂ ವೀಡಿಯೊಗಳು ಒಂದು ಅಥವಾ ಎರಡು ತಿಂಗಳ ಹಳೆಯವು ಎಂದು ಆಡಳಿತ ಹೇಳಿದೆ. ಸರಿ ಈಗ ಎಲ್ಲರ ಮನದಲ್ಲೂ ಒಂದು ಪ್ರಶ್ನೆ ಮೂಡಿದ್ದು ವಜುಖಾನದಲ್ಲಿ ಕಂಡುಬರುವ ಕಲ್ಲಿನ ಆಕಾರದ ಆಕೃತಿ ನಿಜವಾಗಿಯೂ ಶಿವಲಿಂಗವೋ ಅಥವಾ ಕಾರಂಜಿಯೋ? ಎನ್ನುವ ಪ್ರಶ್ನೆ ಮೂಡಿದೆ.

ಇದು ನಿಜವಾಗಿಯೂ ಶಿವಲಿಂಗ ಎಂದು ಸಾಬೀತಾದರೆ, ದೇವಾಲಯದ ಅಸ್ತಿತ್ವದ ಬಗ್ಗೆ ಇದ್ದ ಗೊಂದಲಗಳು ಕೊನೆಗೊಳ್ಳುತ್ತದೆ, ಆದರೆ ಅದನ್ನು ನಿರ್ಧರಿಸುವುದು ಸುಲಭವಲ್ಲ. ಇದನ್ನು ವೈಜ್ಞಾನಿಕ ಮತ್ತು ಪುರಾತತ್ತ್ವ ಶಾಸ್ತ್ರದ ಪ್ರಮಾಣದಲ್ಲಿ ಪರೀಕ್ಷಿಸಬೇಕಾಗುತ್ತದೆ. ಹಿಂದೂ ಕಡೆಯವರು ಇದನ್ನು ಶಿವಲಿಂಗ ಎಂದು ಕರೆಯುತ್ತಿದ್ದರೆ, ಮುಸ್ಲಿಮರು ಇದನ್ನು ಕಾರಂಜಿ ಎಂದು ಕರೆಯುತ್ತಿದ್ದಾರೆ.

Gyanvapi Mosque ಶಿವಲಿಂಗ ಪತ್ತೆಯಾದ ಗ್ಯಾನವಾಪಿ ಮಸೀದಿ ಆವರಣ ವಶಕ್ಕೆ ಪಡೆಯಲು ಕೋರ್ಟ್ ಆದೇಶ!

ವಾಸ್ತವವಾಗಿ ಇದು ಶಿವಲಿಂಗ  ಆಕೃತಿ ಎಂದು ಸ್ಪಷ್ಟವಾಗಿ ಹೇಳುತ್ತಿದೆ ಎಂದು ಹಿಂದೂ ಕಡೆಯವರು ಹೇಳಿದ್ದರೆ,  ಇದು ಮೇಲಿನ ಭಾಗದ ರಚನೆಯನ್ನು ತೋರಿಸುವ ಕಾರಂಜಿ ಎಂದು ಮುಸ್ಲಿಂ ಕಡೆಯವರು ಹೇಳುತ್ತಿದ್ದಾರೆ. ಇದು ಕೇವಲ ಒಂದೇ ಕಲ್ಲಿನಿಂದ ಮಾಡಿದ ರಚನೆ, ಶಿವಲಿಂಗವನ್ನು ಹೀಗೆ ಮಾಡಲಾಗುತ್ತದೆ ಎಂದು ಹಿಂದೂ ಕಡೆಯವರು ವಾದಿಸುತ್ತಿದ್ದಾರೆ. ಈ ರಚನೆಯನ್ನು ಒಂದೇ ಕಲ್ಲಿನಿಂದ ಮಾಡಲಾಗಿದೆ ಎಂದು ಈಗಲೇ ಹೇಗೆ ನಿರ್ಧಾರ ಮಾಡಲಾಗುತ್ತಿದೆ ಎನ್ನುವುದು ಮುಸ್ಲಿಂ ಕಡೆಯವರ ವಾದವಾಗಿದೆ. ಹಾಗೇನಾದರೂ ಇದು ಕಾರಂಜಿಯೇ ಆಗಿದ್ದರೆ ನೀರು ಏಕೆ ಬರುತ್ತಿಲ್ಲ ಎಂಬುದು ಹಿಂದೂಗಳ ಪ್ರಶ್ನೆ. ನೀರಿನ ಹರಿವು ಏಕೆ ಇಲ್ಲ? ಇದಕ್ಕೆ ಮುಸ್ಲಿಮರು ಆಳವಾದ ರಂಧ್ರಗಳು ಗೋಚರಿಸುತ್ತವೆ, ಆದ್ದರಿಂದ ಇದು ಕಾರಂಜಿಯಾಗಿದೆ ಎಂದು ಉತ್ತರ ನೀಡಿದ್ದಾರೆ. ಅಲ್ಲದೇ, ಬಾಬಾ ಅವರನ್ನು ಗ್ಯಾನವಾಪಿಯಲ್ಲಿ ಇದ್ದಾರೋ ಇಲ್ಲವೋ ಅನ್ನೋದು ಕೋರ್ಟ್ ಗೆ ಬಿಟ್ಟಿದ್ದು, ಇದರ ನಡುವೆ ಗ್ಯಾನವಾಪಿ ಮಸೀದಿಯಲ್ಲಿ ಸರ್ವೆ ಮಾಡುವಂತೆ ಕೋರಿದ ಮಹಿಳೆಯರು ಕೋರ್ಟ್ ಗೆ ಹೊಸ ಅರ್ಜಿ ಸಲ್ಲಿಸಿದ್ದಾರೆ.

Gyanvapi Mossque Case ಮಂದಿರ ಕೆಡವಿ ಗ್ಯಾನವಾಪಿ ಮಸೀದಿ ನಿರ್ಮಾಣ, ಸಿಕ್ತು ಮತ್ತಷ್ಟು ಸಾಕ್ಷ್ಯ!

ಗ್ಯಾನವಾಪಿ ಮಸೀದಿಯ ಪೂರ್ವ ಭಾಗದಲ್ಲಿರುವ ನಂದಿಯ ಮುಂಭಾಗದಲ್ಲಿ ವ್ಯಾಸಜೀ ಅವರ ನೆಲಮಾಳಿಗೆಯಲ್ಲಿ ತಾತ್ಕಾಲಿಕ ಗೋಡೆಯಿದ್ದು, ಅದನ್ನು ತೆಗೆದು ಶಿವಲಿಂಗ ತಲುಪಲು ದಾರಿ ಮಾಡಿಕೊಡಬೇಕು ಎಂದು ಹೊಸ ಅರ್ಜಿಯಲ್ಲಿ ಹೇಳಲಾಗಿದೆ. ಅಲ್ಲದೆ, ಶಿವಲಿಂಗದ ಸುತ್ತಲಿನ ಅವಶೇಷಗಳನ್ನು ತೆಗೆದುಹಾಕಬೇಕು. ಗ್ಯಾನವಾಪಿಯಲ್ಲಿ ಬಾಬಾ ಪತ್ತೆಯಾಗಿರುವುದರಿಂದ ಪೂಜೆಗೆ ಅನುಮತಿ ನೀಡಬೇಕು ಎಂದು ಮಹಿಳಾ ಅರ್ಜಿದಾರರು ಹೇಳಿದ್ದಾರೆ.

Follow Us:
Download App:
  • android
  • ios