ರಾಹುಲ್‌ ಗಾಂಧಿ ವಿಮಾನ ಲ್ಯಾಂಡಿಂಗ್‌ ಅನುಮತಿ ನಿರಾಕರಣೆ, ಮತ್ತೊಮ್ಮೆ ಕಥೆ ಕಟ್ಟಿದ ಕಾಂಗ್ರೆಸ್‌!

ಕೋಲು ಕೊಟ್ಟು ಹೊಡೆಸಿಕೊಳ್ಳೋದು ಕಾಂಗ್ರೆಸ್‌ ಪಾಲಿಗೆ ಸಾಮಾನ್ಯವಾದಂತಾಗಿದೆ. ರಾಹುಲ್‌ ಗಾಂಧಿ ಅವರಿದ್ದ ವಿಮಾನಕ್ಕೆ ವಾರಾಣಸಿ ಏರ್‌ಪೋರ್ಟ್‌ನಲ್ಲಿ ಲ್ಯಾಂಡಿಂಗ್‌ ಮಾಡಲು ಅವಕಾಶ ನಿರಾಕರಿಸಲಾಗಿದೆ ಎಂದು ಕಾಂಗ್ರೆಸ್‌ ಮಾಡಿದ್ದ ಆರೋಪವನ್ನು ಸ್ವತಃ ವಾರಣಾಸಿ ಏರ್‌ಪೋರ್ಟ್‌ ತಿರಸ್ಕರಿಸಿದೆ.

Varanasi airport official deny charge Congress claims Rahul Gandhi plane denied permission to land san

ನವದೆಹಲಿ (ಫೆ.14): ಮುತ್ತಜ್ಜಿ ಕಮಲಾ ನೆಹರು ಸ್ಮಾರಕ ಆಸ್ಪತ್ರೆಯ ಕಾರ್ಯಕ್ರಮಕ್ಕಾಗಿ ವಾರಣಾಸಿಗೆ ಬರಬೇಕಿದ್ದ ಕಾಂಗ್ರೆಸ್‌ ಮುಖಂಡಂ ರಾಹುಲ್‌ ಗಾಂಧಿಗೆ ಏರ್‌ಪೋರ್ಟ್‌ನಲ್ಲಿ ಇಳಿಯಲು ವಿಮಾನ ನಿಲ್ದಾಣದ ಅಧಿಕಾರಿಗಳು ಅನುಮತಿಯನ್ನು ನೀಡಿರಲಿಲ್ಲ ಎಂದು ಕಾಂಗ್ರೆಸ್‌ ಆರೋಪ ಮಾಡಿತ್ತು. ಸರ್ಕಾರದ ವಿರುದ್ಧ ಕಿಡಿಕಾರಿದ್ದ ಕಾಂಗ್ರೆಸ್‌ಗೆ ವಾರಣಾಸಿ ಏರ್‌ಪೋರ್ಟ್‌ನ ಅಧಿಕಾರಿಗಳು ಸಾಕ್ಷಿ ಸಮೇತ ತಿರುಗೇಟು ನೀಡಿದ್ದಾರೆ. ನಿಗದಿಯಂತೆ ಸೋಮವಾರ ರಾತ್ರಿ ರಾಹುಲ್‌ ಗಾಂಧಿ ಪ್ರಯಾಗ್‌ ರಾಜ್‌ನಲ್ಲಿನ ಕಾರ್ಯಕ್ರಮಕ್ಕಾಗಿ ವಾರಣಾಸಿ ಏರ್‌ಪೋರ್ಟ್‌ಗೆ ಬರಬೇಕಿತ್ತು. ಆದರೆ, ರಾಹುಲ್‌ ಗಾಂಧಿ ಅವರಿದ್ದ ವಿಮಾನಕ್ಕೆ ಏರ್‌ಪೋರ್ಟ್‌ನಲ್ಲಿ ಇಳಿಯಲು ಅನುಮತಿ ನಿರಾಕರಿಸಲಾಗಿತ್ತು ಎಂದು ಕಾಂಗ್ರೆಸ್‌ ಆರೋಪ ಮಾಡಿತ್ತಲ್ಲದೆ, ರಾಹುಲ್‌ ಅವರ ಜನಪ್ರಿಯತೆಯನ್ನು ಸಹಿಸದೇ ಬಿಜೆಪಿ ಈ ರೀತಿ ಮಾಡುತ್ತಿದೆ ಎಂದು ಆರೋಪ ಮಾಡಿತ್ತು. ಈ ವಿಚಾರದ ಕುರಿತು ಸ್ಪಷ್ಟೀಕರಣ ನೀಡಿರುವ ವಾರಣಾಸಿ ಏರ್‌ಪೋರ್ಟ್‌ ಅಧಿಕಾರಿಗಳು, ಅವರು ಬರಬೇಕಿದ್ದ ವಿಮಾನ ಅದಾಗಲೇ ಕ್ಯಾನ್ಸಲ್‌ ಆಗಿತ್ತು ಎಂದು ಹೇಳಿದೆ. ಕೇರಳದ ವಯನಾಡಿನಿಂದ ವಾಪಸಾಗುವಾಗ ಇಲ್ಲಿನ ಬಾಬತ್ ವಿಮಾನ ನಿಲ್ದಾಣದಲ್ಲಿ ರಾಹುಲ್‌ ಗಾಂಧಿಯವರ ವಿಮಾನ ಇಳಿಯಬೇಕಿತ್ತು ಎಂದು ಕಾಂಗ್ರೆಸ್ ಹಿರಿಯ ನಾಯಕ ಅಜಯ್ ರೈ ಮಂಗಳವಾರ ಆರೋಪಿಸಿದ್ದರು.

ತಾವು ಮತ್ತು ಪಕ್ಷದ ಇತರ ನಾಯಕರು ರಾಹುಲ್‌ ಗಾಂಧಿಯನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣದಲ್ಲಿದ್ದರು ಆದರೆ "ಕೊನೆಯ ಗಳಿಗೆಯಲ್ಲಿ" ಅವರ ವಿಮಾನಕ್ಕೆ ಇಳಿಯಲು ಅನುಮತಿ ಸಿಗಲಿಲ್ಲ ಎಂದು ರೈ ಹೇಳಿದರು. ಇದರಿಂದಾಗಿ ರಾಹುಲ್‌ ಗಾಂಧಿ ರಾಜಧಾನಿಗೆ ವಾಪಸಾಗಿದ್ದರು.ಪ್ರಯಾಗ್‌ರಾಜ್‌ನಲ್ಲಿರುವ ಕಮಲಾ ನೆಹರು ಸ್ಮಾರಕ ಆಸ್ಪತ್ರೆಯಲ್ಲಿ ಮಂಗಳವಾರ ನಡೆಯಬೇಕಿದ್ದ ಕಾರ್ಯಕ್ರಮದ ಉದ್ಘಾಟನೆಗಾಗಿ ರಾಹುಲ್‌ ಗಾಂಧಿ ಬರಬೇಕಿತ್ತು. ಕಮಲಾ ನೆಹರು ರಾಹುಲ್‌ ಗಾಂಧಿಯವರ ಮುತ್ತಜ್ಜಿ.

ವಾರಣಾಸಿ ಏರ್‌ಪೋರ್ಟ್‌ನ ನಿರ್ದೇಶಕ ಆರ್ಯಮಾ ಸನ್ಯಾಲ್‌ ಈ ಕುರಿತಾಗಿ ಪಿಟಿಐಗೆ ಪ್ರತಿಕ್ರಿಯೆ ನೀಡಿದ್ದು, ರಾಹುಲ್‌ ಗಾಂಧಿ ಬರುತ್ತಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ ಎಂದಿದ್ದಾರೆ. ಏರ್‌ಪೋರ್ಟ್‌ ಅಧಿಕಾರಿಗಳು ರಾಹುಲ್‌ ಗಾಂಧಿ ವಿಮಾನಕ್ಕೆ ಇಳಿಯುವ ಅನುಮತಿ ನಿರಾಕರಿಸಿದರು ಎನ್ನುವ ಆರೋಪವನ್ನು ಅವರು ಸ್ಪಷ್ಟವಾಗಿ ತಿರಸ್ಕರಿಸಿದರು. ವಾರಣಾಸಿ ವಿಮಾನನಿಲ್ದಾಣಕ್ಕೆ ಇಳಿಯಲು ಬರುತ್ತಿರುವ ವಿಮಾನ ಅದಾಗಲೇ ರದ್ದಾಗಿತ್ತು ಎನ್ನುವ ಮಾಹಿತಿ ಏರ್‌ ಟ್ರಾಫಿಕ್‌ ಕಂಟ್ರೋಲರ್‌ಗೆ ನೀಡಲಾಗಿತ್ತು ಎಂದು ಸನ್ಯಾಲ್‌ ತಿಳಿಸಿದ್ದಾರೆ.

ಪ್ರಧಾನಿ ವಿರುದ್ಧ ಹೇಳಿಕೆ: ರಾಹುಲ್‌ಗೆ ಹಕ್ಕುಚ್ಯುತಿ ನೋಟಿಸ್‌

ಬಿಜೆಪಿ ಸರ್ಕಾರ (BJP Governament) ರಾಹುಲ್‌ ಗಾಂಧಿಯವರಿಗೆ (Rahul Gandhi) ಹೆದರುತ್ತಿದೆ ಆ ಕಾರಣಕ್ಕಾಗಿ ಅವರ ವಿಮಾನಕ್ಕೆ ವಾರಣಾಸಿಯಲ್ಲಿ (Varanasi) ಇಳಿಯಲು ಅನುಮತಿ ನೀಡಲಾಗಿಲ್ಲ. ಭಾರತ್‌ ಜೋಡೋ ಯಾತ್ರೆಯ (bharat jodo yatra) ಬಳಿಕ ರಾಹುಲ್‌ ಗಾಂಧಿಯವರ ಜನಪ್ರಿಯತೆ ಬಹಳ ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿ  (Prime Miniser Narendra Modi ) ಅವರಿಗೆ ಇದು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ರಾಹುಲ್‌ ಗಾಂಧಿಗೆ ಸಮಸ್ಯೆ ನೀಡುತ್ತಿದ್ದಾರೆ ಎಂದು ಅಜಯ್‌ ರೈ ಆರೋಪಿಸಿದ್ದಾರೆ.

ಮಂಡಿನೋವು: ಭಾರತ್‌ ಜೋಡೋ ಕೈಬಿಡಲು ಚಿಂತಿಸಿದ್ದ ರಾಹುಲ್‌!

ಕಮಲಾ ನೆಹರು ಸ್ಮಾರಕ ಆಸ್ಪತ್ರೆಯ ಕಾರ್ಯಕ್ರಮದ ಬಳಿಕ, ಕಾಶಿ ವಿಶ್ವನಾಥ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸುವ ಕಾರ್ಯಕ್ರಮ ಕೂಡ ನಿಗದಿಯಾಗಿತ್ತು. ವಿಶೇಷವೇನೆಂದರೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಸಂಜೆ ಕಾಶಿ ವಿಶ್ವನಾಥ ಮಂದಿರಲ್ಲಿ (Shri Kashi Vishwanath Temple ) ಪೂಜೆ ಸಲ್ಲಿಸಿದ್ದಲ್ಲದೆ, ವಾರಣಾಸಿಯ ಕೋಟ್ವಲ್‌ ಬಾಬಾ ಕಾಲಭೈರವ ದೇವಸ್ಥಾನದಲ್ಲೂ ಪೂಜೆ ಸಲ್ಲಿಸಿದ್ದರು. ರಾಷ್ಟ್ರಪತಿಯವರು ಮೊದಲ ಬಾರಿಗೆ ಕಾಶಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಸಂಜೆ ದಶಾಶ್ವಮೇಧ ಘಾಟ್‌ನಲ್ಲಿ ನಡೆದ ಭವ್ಯ ಗಂಗಾ ಆರತಿಯಲ್ಲಿ ಪಾಲ್ಗೊಂಡರು ಎಂದು ಮುಖ್ಯಮಂತ್ರಿ ಕಚೇರಿಯ ಹೇಳಿಕೆ ತಿಳಿಸಿದೆ.

Latest Videos
Follow Us:
Download App:
  • android
  • ios