Asianet Suvarna News Asianet Suvarna News

'ವಂದೇ ಮಾತರಂ ಹಾಗೂ ರಾಷ್ಟ್ರಗೀತೆ ಎರಡಕ್ಕೂ ಸಮಾನ ಸ್ಥಾನಮಾನವಿದೆ..' ಹೈಕೋರ್ಟ್‌ ಪ್ರಶ್ನೆಗೆ ಕೇಂದ್ರದ ಉತ್ತರ!

ತನ್ನಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ವೇಳೆ ಕೇಂದ್ರದಿಂದ ಉತ್ತರ ಕೇಳಿ ದೆಹಲಿ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿತ್ತು. ಈ ಕುರಿತಾಗಿ ಉತ್ತ ನೀಡಿರುವ ಕೇಂದ್ರ ಗೃಹ ಸಚಿವಾಲಯ, ವಂದೇ ಮಾತರಂ ಹಾಗೂ ರಾಷ್ಟ್ರಗೀತೆಗೆ ಸಮಾನ ಸ್ಥಾನಮಾನವಿದೆ ಎಂದು ಹೇಳಿದೆ.
 

vande Mataram and national anthem have equal status Center responds to HC notice san
Author
First Published Nov 5, 2022, 5:53 PM IST

ನವದೆಹಲಿ (ನ. 5): ರಾಷ್ಟ್ರಗೀತೆ 'ಜನ ಗಣ ಮನ' ಮತ್ತು ರಾಷ್ಟ್ರ ಹಾಡು 'ವಂದೇ ಮಾತರಂ' ಎರಡಡೂ ಹಾಡುಗಳಿಗೆ ದೇಶದಲ್ಲಿ ಸಮಾನ ಸ್ಥಾನಮಾನವಿದೆ ಮತ್ತು ನಾಗರಿಕರು ಎರಡಕ್ಕೂ ಸಮಾನ ಗೌರವವನ್ನು ನೀಡಬೇಕು ಎಂದು ಕೇಂದ್ರವು ದೆಹಲಿ ಹೈಕೋರ್ಟ್‌ಗೆ ಸಲ್ಲಿಕೆ ಮಾಡಿದ ಉತ್ತರದಲ್ಲಿ ತಿಳಿಸಿದೆ. ರಾಷ್ಟ್ರಗೀತೆಗಿಂತ ಭಿನ್ನವಾಗಿ 'ವಂದೇ ಮಾತರಂ' ಹಾಡುವ ಅಥವಾ ನುಡಿಸುವ ಬಗ್ಗೆ ಯಾವುದೇ ದಂಡದ ನಿಬಂಧನೆಗಳು ಅಥವಾ ಅಧಿಕೃತ ಸೂಚನೆಗಳಿಲ್ಲ, ಈ ಹಾಡು ಭಾರತೀಯರ ಭಾವನೆಗಳು ಮತ್ತು ಮನಸ್ಸಿನಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ ಮತ್ತು ಹಾಡಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯಗಳು ಮತ್ತು ಸುಪ್ರೀಂ ಕೋರ್ಟ್‌ನ ಎಲ್ಲಾ ನಿರ್ದೇಶನಗಳು ಅನುಸರಿಸಲಾಗುತ್ತಿದೆ ಎಂದು ಅದು ಹೇಳಿದೆ. ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯೆಯಾಗಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಗೃಹ ಸಚಿವಾಲಯವು 'ವಂದೇ ಮಾತರಂ' ಗೀತೆಗೆ ರಾಷ್ಟ್ರಗೀತೆಯಂತೆಯೇ ಗೌರವ ಮತ್ತು ಸಮಾನ ಸ್ಥಾನಮಾನವನ್ನು ನೀಡಬೇಕು. ಅದರಲ್ಲಿ ಯಾವುದೇ ಅನುಮಾನಗಳು ಬೇಡ ಎಂದು ಉತ್ತರ ನೀಡಿದೆ.

ರಾಷ್ಟ್ರಗೀತೆ ಮತ್ತು ರಾಷ್ಟ್ರ ಹಾಡು ಎರಡಕ್ಕೂ ತನ್ನದೇ ಆದ ಪಾವಿತ್ರ್ಯತೆ ಇದೆ ಮತ್ತು ಸಮಾನ ಗೌರವಕ್ಕೆ ಅರ್ಹವಾಗಿದೆ ಎಂದು ಒತ್ತಿಹೇಳಿರುವ ಕೇಂದ್ರವು, ಪ್ರಸ್ತುತ ಪ್ರಕ್ರಿಯೆಯ ವಿಷಯವು ಎಂದಿಗೂ ರಿಟ್ ಅರ್ಜಿಯ ವಿಷಯವಾಗಲು ಸಾಧ್ಯವಿಲ್ಲ ಎಂದು ಹೇಳಿದೆ. "ಜನ ಗಣ ಮನ ಮತ್ತು ವಂದೇ ಮಾತರಂ ಎರಡೂ ಒಂದೇ ಮಟ್ಟದಲ್ಲಿ ಇರುವಂತೆ ಗೀತೆಗಳು ಮತ್ತು ದೇಶದ ಪ್ರತಿಯೊಬ್ಬ ನಾಗರಿಕನು ಎರಡಕ್ಕೂ ಸಮಾನ ಗೌರವವನ್ನು ತೋರಿಸಬೇಕು. ರಾಷ್ಟ್ರೀಯ ಗೀತೆಯು ಭಾರತದ ಜನರ ಭಾವನೆಗಳು ಮತ್ತು ಮನಸ್ಸಿನಲ್ಲಿ ವಿಶಿಷ್ಟ ಮತ್ತು ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ" ಎಂದು ತನ್ನ ಸಂಕ್ಷಿಪ್ತ ಅಫಡವಿಟ್‌ನಲ್ಲಿ ಕೇಂದ್ರ ಹೇಳಿದೆ. ಕೇಂದ್ರ ಸರ್ಕಾರದ ವಕೀಲ ಮನೀಶ್ ಮೋಹನ್ ಮೂಲಕ ಅಫಿಡವಿಟ್ ಸಲ್ಲಿಕೆ ಮಾಡಲಾಗಿದೆ.

'ವಂದೇ ಮಾತರಂ' ಪ್ರಚಾರದ ವಿಷಯವನ್ನು ಈ ಹಿಂದೆ ಸುಪ್ರೀಂ ಕೋರ್ಟ್ ವಿಚಾರಣೆ ಮಾಡಿತ್ತು ಎಂದು ನ್ಯಾಯಾಲಯಕ್ಕೆ ಈ ವೇಳೆ ತಿಳಿಸಲಾಗಿದೆ. ಸಂವಿಧಾನದಲ್ಲಿ ರಾಷ್ಟ್ರೀಯ ಗೀತೆಯ ಉಲ್ಲೇಖವಿಲ್ಲದ ಕಾರಣ "ಯಾವುದೇ ಚರ್ಚೆಗೆ ಪ್ರವೇಶಿಸಲು" ಸುಪ್ರೀಂ ಕೋರ್ಟ್‌ ನಿರಾಕರಿಸಿತು.

 ಬಳಿಕ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹೈಕೋರ್ಟ್, 'ವಂದೇ ಮಾತರಂ' ಹಾಡಲು ಮತ್ತು ನುಡಿಸಲು ಮಾರ್ಗಸೂಚಿಗಳನ್ನು ಕೋರಿ ಸಲ್ಲಿಸಿದ್ದ ಮತ್ತೊಂದು ಅರ್ಜಿಯನ್ನು ವಜಾಗೊಳಿಸಿತು, ಆದರೆ ಗೀತೆಗೆ ಗೌರವ ಮತ್ತು ಗೌರವಕ್ಕೆ ಅರ್ಹವಾಗಿದೆ ಎಂನ್ನುವ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ' ಎಂದು ಹೇಳಿದೆ.

ಕಂಬಳವಲ್ಲ.. ಕಬಡ್ಡಿ ಕೋರ್ಟ್‌ನಲ್ಲಿ ಕಾಂತಾರ ಟೀಮ್‌, ಬುಲ್ಸ್‌ಗೆ ಬೆಂಬಲಿಸಿದ ರಿಷಬ್ ಶೆಟ್ಟಿ!

"ರಾಷ್ಟ್ರಗೀತೆ ಮತ್ತು ರಾಷ್ಟ್ರ ಹಾಡು ಎರಡೂ ಅವುಗಳ ಪಾವಿತ್ರ್ಯತೆಯನ್ನು ಹೊಂದಿವೆ ಮತ್ತು ಸಮಾನ ಗೌರವಕ್ಕೆ ಅರ್ಹವಾಗಿವೆ. ಪ್ರಸ್ತುತ ಪ್ರಕ್ರಿಯೆಯ ವಿಷಯವು ಎಂದಿಗೂ ನಿರ್ದಿಷ್ಟವಾಗಿ ಇತ್ಯರ್ಥಗೊಂಡ ಸ್ಥಾನದ ದೃಷ್ಟಿಯಿಂದ ಗೌರವಾನ್ವಿತ ಹೈಕೋರ್ಟ್‌ನ ರಿಟ್ ಅನ್ನು ಕೋರುವ ವಿಷಯವಾಗಿರುವುದಿಲ್ಲ. " ಎಂದು ಕೇಂದ್ರದ ಪ್ರತಿಕ್ರಿಯೆ ಹೇಳಿದೆ. "1971 ರಲ್ಲಿ, ರಾಷ್ಟ್ರಗೀತೆಯನ್ನು ಹಾಡುವುದನ್ನು ತಡೆದ  ಕ್ರಮವನ್ನು ಅಥವಾ ಅಂತಹ ಗಾಯನದಲ್ಲಿ ತೊಡಗಿರುವ ಯಾವುದೇ ಸಭೆಗೆ ಅಡಚಣೆ ಉಂಟುಮಾಡುವ ಕ್ರಮವನ್ನು ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ ಕಾಯಿದೆ, 1971 ರ ಮೂಲಕ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗಿತ್ತು.

ರಾಷ್ಟ್ರಗೀತೆಗೆ ಅಪಮಾನ ಆರೋಪ ಆಶ್ಚರ್ಯ ತಂದಿದೆ: ಬರಗೂರು

ಆದರೆ,  ರಾಷ್ಟ್ರೀಯ ಹಾಡು 'ವಂದೇ ಮಾತರಂ' ವಿಷಯದಲ್ಲಿ ಸರ್ಕಾರವು ಇದೇ ರೀತಿಯ ದಂಡದ ನಿಬಂಧನೆಗಳನ್ನು ಮಾಡಿಲ್ಲ ಮತ್ತು ಅದನ್ನು ಯಾವ ಸಂದರ್ಭಗಳಲ್ಲಿ ಹಾಡಬಹುದು ಅಥವಾ ನುಡಿಸಬಹುದು ಎಂದು ಯಾವುದೇ ಸೂಚನೆಗಳನ್ನು ನೀಡಲಾಗಿಲ್ಲ" ಎಂದು ಉತ್ತರದಲ್ಲಿ ತಿಳಿಸಲಾಗಿದೆ. ಕೇಂದ್ರ ಸರ್ಕಾರವು ಕಾಲಕಾಲಕ್ಕೆ ಹೈಕೋರ್ಟ್‌ಗಳು ಮತ್ತು ಭಾರತದ ಸುಪ್ರೀಂ ಕೋರ್ಟ್‌ಗಳು ನೀಡಿದ ನಿರ್ದೇಶನಗಳನ್ನು ಪಾಲಿಸುತ್ತಿದೆ ಎಂದು ಅದು ಹೇಳಿದೆ.

Follow Us:
Download App:
  • android
  • ios