ಪ್ರಧಾನಿ ಮೋದಿಯಿಂದ ಇಂದು 9 ವಂದೇ ಭಾರತ್‌ ರೈಲುಗಳಿಗೆ ಚಾಲನೆ: ಕರ್ನಾಟಕಕ್ಕೂ ಸಿಗುತ್ತೆ ಮತ್ತೊಂದು ಐಷಾರಾಮಿ ರೈಲು

ಈ 9 ರೈಲುಗಳು 11 ರಾಜ್ಯಗಳಾದ ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಬಿಹಾರ, ಪಶ್ಚಿಮ ಬಂಗಾಳ, ಕೇರಳ, ಒಡಿಶಾ, ಜಾರ್ಖಂಡ್ ಮತ್ತು ಗುಜರಾತ್‌ಗಳಲ್ಲಿ ಸಂಪರ್ಕವನ್ನು ಹೆಚ್ಚಿಸುತ್ತವೆ. ಅಲ್ಲದೆ, ಈ ರೈಲುಗಳಿಂದ ಪ್ರಯಾಣಿಕರಿಗೆ ಸಾಕಷ್ಟು ಸಮಯ ಉಳಿತಾಯವೂ ಆಗುತ್ತದೆ. 

pm modi will flag off 9 vande bharat trains via video conference ash

ನವದೆಹಲಿ (ಸೆಪ್ಟೆಂಬರ್ 24, 2023): ಪ್ರಧಾನಿ ಮೋದಿ ಇಂದು 9 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಕರ್ನಾಟಕ ಸೇರಿದಂತೆ 11 ರಾಜ್ಯಗಳಲ್ಲಿ ಈ ವಂದೇ ಭಾರತ್‌ ರೈಲುಗಳು ಚಲಿಸಲಿವೆ. ಮಧ್ಯಾಹ್ನ 12:30ಕ್ಕೆ ವಿಡಿಯೋ ಕಾನ್ಫರೆನ್ಸ್‌ ಮೂಲಕ 9 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಈ ವಂದೇ ಭಾರತ್ ರೈಲುಗಳು ತಮ್ಮ ಕಾರ್ಯಾಚರಣೆಯ ಮಾರ್ಗಗಳಲ್ಲಿ ಅತ್ಯಂತ ವೇಗದ ರೈಲು ಆಗಿರುತ್ತವೆ ಮತ್ತು ಪ್ರಯಾಣಿಕರ ಗಣನೀಯ ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ.

ಪ್ರಧಾನಿ ಮೋದಿ ಇಂದು ಮಧ್ಯಾಹ್ನ 12:30ಕ್ಕೆ ವಿಡಿಯೋ ಕಾನ್ಫರೆನ್ಸ್‌ ಮೂಲಕ 11 ರಾಜ್ಯಗಳಲ್ಲಿ ಸಂಚರಿಸುವ 9 ವಂದೇ ಭಾರತ್‌ ರೈಲುಗಳಿಗೆ ಚಾಲನೆ ನೀಡಿದ್ದಾರೆ. ಈ ಪೈಕಿ ರಾಜ್ಯದಲ್ಲಿ ಸಂಚರಿಸುವ ಬೆಂಗಳೂರು - ಹೈದರಾಬಾದ್‌ ರೈಲು ಸಹ ಒಂದು. ಈ ಒಂಬತ್ತು ರೈಲುಗಳು ಹನ್ನೊಂದು ರಾಜ್ಯಗಳಾದ ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಬಿಹಾರ, ಪಶ್ಚಿಮ ಬಂಗಾಳ, ಕೇರಳ, ಒಡಿಶಾ, ಜಾರ್ಖಂಡ್ ಮತ್ತು ಗುಜರಾತ್‌ಗಳಲ್ಲಿ ಸಂಪರ್ಕವನ್ನು ಹೆಚ್ಚಿಸುತ್ತವೆ. ಅಲ್ಲದೆ, ಈ ರೈಲುಗಳಿಂದ ಪ್ರಯಾಣಿಕರಿಗೆ ಸಾಕಷ್ಟು ಸಮಯ ಉಳಿತಾಯವೂ ಆಗುತ್ತದೆ. 

ಇದನ್ನು ಓದಿ: ಈ ರಾಜ್ಯದ ಪಾಲಾಯ್ತು ದೇಶದ ಮೊದಲ ಕೇಸರಿ ವಂದೇ ಭಾರತ್‌ ರೈಲು: ನಾಳೆ ಮೋದಿಯಿಂದ ಲೋಕಾರ್ಪಣೆ

ಹೈದರಾಬಾದ್-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಿಂದ ಈ ಮಾರ್ಗದಲ್ಲಿ ಪ್ರಸ್ತುತ ಸಂಚರಿಸುವ ಇತರೆ ರೈಲುಗಳಿಗಿಂತ 2.5 ಗಂಟೆಗಳಿಗಿಂತ ಹೆಚ್ಚು ಸಮಯ ಉಳಿತಾಯ ಆಗುತ್ತದೆ ಎಂದು ತಿಳಿದುಬಂದಿದೆ. ಅಲ್ಲದೆ, ರೂರ್ಕೆಲಾ- ಭುವನೇಶ್ವರ್ - ಪುರಿ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಕಾಸರಗೋಡು - ತಿರುವನಂತಪುರಂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಂದ ಪ್ರಯಾಣಿಕರಿಗೆ ಸುಮಾರು 3 ಗಂಟೆ ಸಮಯ ಉಳಿತಾಯ ಆಗುತ್ತದೆ ಎಂದೂ ವರದಿಯಾಗಿದೆ. ಹಾಗೂ, ತಮಿಳುನಾಡಿನ ತಿರುನಲ್ವೇಲಿ - ಮಧುರೈ - ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಿಂದಲೂ 2 ಗಂಟೆಗಳಿಗೂ ಹೆಚ್ಚು ಸಮಯ ಉಳಿತಾಯ ಆಗುತ್ತದೆ. ಹಾಗೂ, ರಾಂಚಿ - ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್, ಪಾಟ್ನಾ - ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಜಾಮ್‌ನಗರ-ಅಹಮದಾಬಾದ್ ವಂದೇ ಭಾರತ್ ಎಕ್ಸ್‌ಪ್ರೆಸ್ ಸುಮಾರು 1 ಗಂಟೆ; ಮತ್ತು ಉದಯಪುರ - ಜೈಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಿಂದ ಪ್ರಯಾಣಿಕರಿಗೆ ಸುಮಾರು ಅರ್ಧ ಗಂಟೆ ಸಮಯ ಉಳಿತಾಯ ಆಗುತ್ತದೆ ಎಂದ ಭಾರತೀಯ ರೈಲ್ವೆ ಮಾಹಿತಿ ನೀಡಿದೆ. 

ಕೇರಳಕ್ಕೆ ಮೊದಲ ಕೇಸರಿ ವಂದೇ ಭಾರತ್ ರೈಲು 
ಕೇರಳದ ಕಾಸರಗೋಡು - ತಿರುವನಂತಪುರಂ ಮಾರ್ಗದಲ್ಲಿ ಹೊಸ ಕೇಸರಿ ವಂದೇ ಭಾರತ್ ರೈಲು ಚಲಿಸಲಿದ್ದು, ವಂದೇ ಭಾರತ್ ದಕ್ಷಿಣ ರೈಲ್ವೆ ವಲಯದ ಅಡಿಯಲ್ಲಿ ಈ ಮಾರ್ಗದಲ್ಲಿ ಎರಡನೇ ರೈಲು ಆಗಿರುತ್ತದೆ. ಆದರೆ, ಕೊಟ್ಟಾಯಂ ಬದಲಿಗೆ ಅದು ಆಲಪ್ಪುಝ ಮೂಲಕ ಹೋಗುತ್ತದೆ. ಇನ್ನು, ಕಾಸರಗೋಡು-ತಿರುವನಂತಪುರಂ ಮಾರ್ಗದಲ್ಲಿ ಎರಡನೇ ವಂದೇ ಭಾರತ್ ಅನ್ನು ಪರಿಚಯಿಸಲಾಗಿದೆ . ಏಕೆಂದರೆ ಇದು ಪ್ರಾರಂಭವಾದಾಗಿನಿಂದ 170% ಕ್ಕಿಂತ ಹೆಚ್ಚಿನ ಮೊದಲ ರೈಲಿನಲ್ಲಿ ಹೆಚ್ಚಿನ ಆಕ್ಯುಪೆನ್ಸಿಯನ್ನು ಹೊಂದಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್, 160 kmph ಸಾಮರ್ಥ್ಯವಿರುವ ಸೆಮಿ ಹೈ - ಸ್ಪೀಡ್‌ ರೈಲಾಗಿದ್ದು, ಹವಾನಿಯಂತ್ರಿತ ಚೇರ್ ಕಾರ್ ರೈಲು ಸೇವೆಯಾಗಿದೆ ಎಂದು ಭಾರತೀಯ ರೈಲ್ವೆ ಮಾಹಿತಿ ನೀಡಿದೆ. 

ಇದನ್ನೂ ಓದಿ: ಇನ್ಮುಂದೆ ನಾಲ್ಕೇ ಗಂಟೆಯಲ್ಲಿ ರೈಲಿನಲ್ಲಿ ಬೆಂಗಳೂರು - ಚೆನ್ನೈ ಆರಾಮವಾಗಿ ಪ್ರಯಾಣ ಮಾಡಿ!

ಈ ಮಧ್ಯೆ, ಭಾನುವಾರ 9 ವಂದೇ ಭಾರತ್ ರೈಲುಗಳನ್ನು ಮೋದಿ ಪ್ರಾರಂಭಿಸುತ್ತಿದ್ದು, ಒಟ್ಟು ವಂದೇ ಭಾರತ್ ರೈಲುಗಳ ಸಂಖ್ಯೆ 68 ಕ್ಕೆ ಏರಲಿದೆ.

ಇದನ್ನೂ ಓದಿ: ಟಿಕೆಟ್‌ ಇಲ್ದೆ ವಂದೇ ಭಾರತ್ ರೈಲು ಹತ್ತಿದ: ಟಾಯ್ಲೆಟ್‌ ಒಳಗೆ ಬೀಡಿ ಸೇದಿ ತಗ್ಲಾಕ್ಕೊಂಡ ಭೂಪ!

Latest Videos
Follow Us:
Download App:
  • android
  • ios