ದೇಶದ 11ನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದ್ದಾರೆ. ಮಧ್ಯಪ್ರದೇಶದ ಭೋಪಾಲ್‌ನ ರಾಣಿ ಕಮಲಾಪತಿ ಸ್ಟೇಷನ್‌ನಲ್ಲಿ ದೇಶದ ಆಕರ್ಷಕ ಸೆಮಿಹೈಸ್ಪೀಡ್‌ ರೈಲಿಗೆ ಚಾಲನೆ ನೀಡಿದರು. 

ಭೋಪಾಲ್‌ (ಏ.1): ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಭೋಪಾಲ್‌ನ ರಾಣಿ ಕಮಲಾಪತಿ ನಿಲ್ದಾಣದಲ್ಲಿ ಭೋಪಾಲ್-ನವದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದರು. ಭೋಪಾಲ್ ಮತ್ತು ರಾಷ್ಟ್ರ ರಾಜಧಾನಿ ನಡುವಿನ 11 ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು 7.45 ಗಂಟೆಗಳಲ್ಲಿ 708 ಕಿಮೀ ದೂರವನ್ನು ಕ್ರಮಿಸುತ್ತದೆ. ಐಆರ್‌ಸಿಟಿಸಿ ಪ್ರಕಾರ, ನವದೆಹಲಿ-ಭೋಪಾಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ಶನಿವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ನಗರಗಳ ನಡುವೆ ಚಲಿಸುತ್ತದೆ. ರೈಲು ಬೆಳಗ್ಗೆ 5:40 ಕ್ಕೆ ಭೋಪಾಲ್‌ನಿಂದ ಹೊರಡಲಿದ್ದು.ಮಧ್ಯಾಹ್ನ 1:10 ಕ್ಕೆ ನವದೆಹಲಿಯ ನಿಜಾಮುದ್ದೀನ್ ನಿಲ್ದಾಣವನ್ನು ತಲುಪುತ್ತದೆ. ವರದಿಗಳ ಪ್ರಕಾರ, ಅರ್ಧಗಂಟೆ ಉಳಿಸುವ ಸಲುವಾಗಿ ರೈಲನ್ನು ಭೋಪಾಲ್‌ನ ರಾಣಿ ಕಮಲಪತಿ ನಿಲ್ದಾಣದಿಂದ ನವದೆಹಲಿ ರೈಲು ನಿಲ್ದಾಣದ ಬದಲಿಗೆ ಹಜರತ್ ನಿಜಾಮುದ್ದೀನ್ ನಿಲ್ದಾಣದ ನಡುವೆ ಸಂಚಾರ ಮಾಡಲು ನಿಗದಿ ಮಾಡಲಾಗಿದೆ. ತನ್ನ ಪ್ರಯಾಣದ ಸಮಯದಲ್ಲಿ, ರೈಲು ವೀರಾಂಗಣೆ ಲಕ್ಷ್ಮೀಬಾಯಿ ಝಾನ್ಸಿ, ಗ್ವಾಲಿಯರ್ ಮತ್ತು ಆಗ್ರಾ ಕಂಟೋನ್ಮೆಂಟ್‌ ರೈಲು ನಿಲ್ದಾಣದ ಮೂಲಕ ಹಾದುಹೋಗುತ್ತದೆ.

ಟಿಕೆಟ್‌ ದರ: ಭೋಪಾಲ್ ಮತ್ತು ದೆಹಲಿ ನಡುವಿನ ರೈಲಿನ ದರದ ಬಗ್ಗೆ ಈವರೆಗೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ವರದಿಗಳ ಪ್ರಕಾರ, ಹಜರತ್ ನಿಜಾಮುದ್ದೀನ್ ಮತ್ತು ರಾಣಿ ಕಮಲಾಪತಿ ನಿಲ್ದಾಣದ ನಡುವಿನ ದರವು 1665 ರೂ ಆಗಿರುತ್ತದೆ. ಇದರಲ್ಲಿ ಆಪ್ಶನಲ್‌ ಆಗಿರುವ 308 ರೂಪಾಯಿ ಕೇಟರಿಂಗ್ ಚಾರ್ಜ್‌ ಕೂಡ ಇದೆ. ಇನ್ನು ಎಕ್ಸ್ಯುಕ್ಯುಟಿವ್‌ ಕ್ಲಾಸ್‌ ಟಿಕೆಟ್‌ಗೆ 3120 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಅದರೊಂದಿಗೆ ಚೇರ್ ಕಾರ್ ಟಿಕೆಟ್‌ ದರ 1735 ರೂಪಾಯಿ ಆಗಿದ್ದು, ಇದರಲ್ಲಿ 379 ರೂಪಾಯಿ ಕೇಟರಿಂಗ್‌ ಚಾರ್ಜ್‌ ಕೂಡ ಸೇರಿಸಿದೆ. ಇಲ್ಲಿ ಎಕ್ಸ್ಯುಕ್ಯುಟಿವ್‌ ಕ್ಲಾಸ್‌ ಟಿಕೆಟ್‌ಗೆ 3185 ರೂಪಾಯಿ ಆಗಿದೆ.

ದೇಶದ ವಂದೇ ಭಾರತ್‌ ರೈಲಿನ ಮೇಲೆ ಇರಲಿದೆ ಇನ್ನು ಟಾಟಾ ಹೆಸರು!

ವಂದೇ ಭಾರತ್ ಎಕ್ಸ್‌ಪ್ರೆಸ್ ದೇಶದಲ್ಲಿ ಪ್ರಯಾಣಿಕರ ಪ್ರಯಾಣದ ಅನುಭವವನ್ನು ಈಗಾಗಲೇ ಉತ್ತಮಗೊಳಿಸಿದೆ. ಭೋಪಾಲ್‌ನ ರಾಣಿ ಕಮಲಾಪತಿ ರೈಲು ನಿಲ್ದಾಣ ಮತ್ತು ನವದೆಹಲಿ ರೈಲು ನಿಲ್ದಾಣಗಳ ನಡುವೆ ಪರಿಚಯಿಸಲಾಗುತ್ತಿರುವ ಹೊಸ ರೈಲು ದೇಶದ ಹನ್ನೊಂದನೇ ವಂದೇ ಭಾರತ್ ರೈಲು ಆಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ರೈಲು ಆಗಿದ್ದು, ಸೆಟ್ ಅತ್ಯಾಧುನಿಕ ಪ್ರಯಾಣಿಕ ಸೌಕರ್ಯಗಳನ್ನು ಹೊಂದಿದೆ.

ವಂದೇ ಭಾರತ್‌ ರೈಲಿನಲ್ಲಿ ಕಳಪೆ ಆಹಾರ ಪೂರೈಕೆ ಬಗ್ಗೆ ದೂರು: ನೆಟ್ಟಿಗರ ಆಕ್ರೋಶ; IRCTC ಪ್ರತಿಕ್ರಿಯೆ

ಇದು ರೈಲು ಬಳಕೆದಾರರಿಗೆ ವೇಗವಾದ, ಆರಾಮದಾಯಕ ಮತ್ತು ಅನುಕೂಲಕರ ಪ್ರಯಾಣದ ಅನುಭವವನ್ನು ನೀಡುತ್ತದೆ, ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಮತ್ತು ಪ್ರದೇಶದಲ್ಲಿ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.