ಕಿರುತೆರೆ ನಟಿ ವೈಷ್ಣವಿ ಗೌಡ ತಮ್ಮ ಪತಿ ಅನುಕೂಲ್ ಜೊತೆ 117 ಅಡಿ ಎತ್ತರದಿಂದ ಪ್ರಪಾತಕ್ಕೆ ಧುಮುಕಿ ಸಾಹಸ ಮೆರೆದಿದ್ದಾರೆ. ಈ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಬೆಂಗಳೂರು: ಕಿರುತೆರೆ ನಟಿ ವೈಷ್ಣವಿ ಗೌಡ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಗಂಡ ಅನುಕೂಲ್ ಜೊತೆಯಲ್ಲಿ ಪ್ರಪಾತಕ್ಕೆ ಧುಮುಕಿದ್ದಾರೆ. ವೈಷ್ಣವಿ ಗೌಡ ಮದುವೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದಿತ್ತು. ವೈಷ್ಣವಿ ಗೌಡ ನಟಿಸುತ್ತಿದ್ದ ಸೀರಿಯಲ್ ಸಹ ಮುಕ್ತಾಯಗೊಂಡಿದ್ದು, ಪತಿ ಅನುಕೂಲ್ ಮಿಶ್ರಾ ಜೊತೆ ಕ್ವಾಲಿಟಿ ಸಮಯವನ್ನು ವೈಷ್ಣವಿ ಗೌಡ ಕಳೆಯುತಿದ್ದಾರೆ. ವೈಷ್ಣವಿ ಗೌಡ ಮತ್ತು ಅನುಕೂಲ್ ಸಾಹಸಿಗಳಾಗಿದ್ದು, 117 ಅಡಿ ಎತ್ತರದಿಂದ ಧುಮುಕಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಸಾಹಸ ಕ್ರೀಡೆಗಳಲ್ಲಿ ಭಾಗಿಯಾಗುವ ಟ್ರೆಂಡ್ ಶುರುವಾಗಿದೆ. ಆದ್ರೆ ಇಂತಹ ಸಾಹಸ ಚಟುವಟಿಕೆಯಲ್ಲಿ ಭಾಗಿಯಾಗುವ ಧೈರ್ಯ ಬೇಕಾಗುತ್ತದೆ. ವೈಷ್ಣವಿ ಪತಿ ಅನುಕೂಲ್ ಏರ್‌ಫೋರ್ಸ್ ನಲ್ಲಿರೋದರಿಂದ ಅವರಿಗೆ ಈ ರೀತಿಯ ಚಟುವಟಿಕೆಗಳಿರುತ್ತವೆ. ವೈಷ್ಣವಿ ಗೌಡ ಅವರು ಇಂಡಿಯನ್‌ ಆರ್ಮಿಯಲ್ಲಿ ಕೆಲಸ ಮಾಡುತ್ತಿದ್ದು, ಲೆಫ್ಟಿನೆಂಟ್‌ ಆಗಿ ಕೆಲಸ ಮಾಡುತ್ತಿದ್ದಾರೆ.

ಸೀರಿಯಲ್‌ನಲ್ಲಿ ಸಾಫ್ಟ್‌ ಹುಡುಗಿಯಾಗಿ ಕಾಣಿಸಿಕೊಳ್ಳುವ ವೈಷವಿ ಸಾಹಸಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಆದ್ರೆ ಈ ಸ್ಥಳ ಎಲ್ಲಿಯದು ಎಂದು ತಿಳಿದು ಬಂದಿಲ್ಲ.

View post on Instagram

ಉತ್ತರ ಪ್ರದೇಶ ಸಂಪ್ರದಾಯದಂತೆ ಮದುವೆ

ಮೇ 5ರ ತಡರಾತ್ರಿಯೇ ವೈಷ್ಣವಿ ಗೌಡ ಮತ್ತು ಅನುಕೂಲ್ ಮಿಶ್ರಾ ಮದುವೆ ನಡೆದಿತ್ತು. ವೈಷ್ಣವಿ ಗೌಡ ಅವರ ಮದುವೆ ಕಾರ್ಯಗಳು ರಾತ್ರಿಯಿಂದಲೇ ಶುರುವಾಗಿದ್ದವು. ಉತ್ತರ ಪ್ರದೇಶದಂತೆ ಅವರು ಕೆಂಪು ಬಣ್ಣದ ಲೆಹೆಂಗಾ ಧರಿಸಿ ಮಂಟಪಕ್ಕೆ ಬಂದಿದ್ದರು. ಇನ್ನು ಅವರ ಹುಡುಗ ಅನುಕೂಲ್ ಮಿಶ್ರಾ ಬಿಳಿ ಬಣ್ಣದ ಶೇರ್ವಾನಿ ಧರಿಸಿದ್ದರು. ವೈಷ್ಣವಿ ಗೌಡ ಮದುವೆಯಲ್ಲಿ ಅಮೂಲ್ಯ, ಕೆಪಿ ಅರವಿಂದ್‌, ದಿವ್ಯಾ ಉರುಡುಗ, ನೇಹಾ ಗೌಡ, ಅನುಪಮಾ ಗೌಡ, ಮುಖ್ಯಮಂತ್ರಿ ಚಂದ್ರು, ಇಷಿತಾ ವರ್ಷ ಸೇರಿದಂತೆ ಸೀತಾರಾಮ ಧಾರಾವಾಹಿಯ ಎಲ್ಲ ಕಲಾವಿದರು ಕೂಡ ಆಗಮಿಸಿದ್ದರು.

ಸೀತಾರಾಮಾ ಸೀರಿಯಲ್‌ಗೂ ಮುನ್ನ ವೈಷ್ಣವಿ ಗೌಡ ಕಲರ್ಸ್ ಕನ್ನಡ ವಾಹಿನಿಯ ಅಗ್ನಿಸಾಕ್ಷಿ ಸೀರಿಯಲ್ ನಲ್ಲಿ ಸನ್ನಿಧಿಯಾಗಿ ನಟಿಸಿದ್ದರು. ಸನ್ನಿಧಿ ಪಾತ್ರ ಎಷ್ಟು ಫೇಮಸ್ ಆಗಿತ್ತು ಅಂದರೆ ಜನರು ತಮ್ಮ ಮುದ್ದು ಮಕ್ಕಳಿಗೆ ಸನ್ನಿಧಿ ಎಂದು ಹೆಸರಿಡಲು ಆರಂಭಿಸಿದ್ದರು.