ನವದೆಹಲಿ (ಏ. 12)  ಪ್ರತಿಯೊಬ್ಬರಿಗೂ ಸುರಕ್ಷಿತ ಜೀವನದ ಅಗತ್ಯವಿದೆ. ಹೀಗಾಗಿ ದೇಶದಲ್ಲಿ ಕೊರೋನಾ ಲಸಿಕೆ ಬೇಕಿದ್ದು ಅದು ಎಲ್ಲರಿಗೂ ಸಿಗುವಂತೆ ಆಗಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ  ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಸ್ಟಿಕ್ ಅಪ್ ಫಾರ್ ವಾಕ್ಸಿನ್ ಫಾರ್ ಆಲ್' ಎಂಬ ಅಭಿಯಾನ ಆರಂಭ ಮಾಡಿದೆ.  ದೇಶದ ಪ್ರತಿಯೊಬ್ಬ ಪ್ರಜೆಗೂ ಕೊರೋನಾ ಲಸಿಕೆ ಸಿಗಬೇಕು ಎಂದು ತಿಳಿಸಿದರು. ಒಂದು ವಿಡಿಯೋವನ್ನು ರಾಹುಲ್ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. 

ದೇಶದಲ್ಲಿ ಲಸಿಕೆ ವಿತರಣೆ ಯಾವ ಹಂತದಲ್ಲಿದೆ?

ಭಾರತವು ಏಪ್ರಿಲ್ 12 ರಂದು ದೇಶದಲ್ಲಿ 1,68,912 COVID-19 ಸೋಂಕುಗಳು  ಇವೆ.  ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು 12 ಲಕ್ಷಕ್ಕೂ ಹೆಚ್ಚಿದೆ.