ನವದೆಹಲಿ(ಏ.07): ಎಲ್ಲಾ ವಯೋಮಾನದವರಿಗೂ ಕೊರೋನಾ ಲಸಿಕೆ ವಿತರಿಸಬೇಕೆಂಬ ಮಹಾರಾಷ್ಟ್ರ ಮತ್ತು ದೆಹಲಿ ಮುಖ್ಯಮಂತ್ರಿಗಳ ಬೇಡಿಕೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಅಜಯ್‌ ಭೂಷಣ್‌, ‘ಸೋಂಕಿನಿಂದ ಮರಣಹೊಂದುವ ಸಾಧ್ಯತೆ ಹೆಚ್ಚಿರುವ ವ್ಯಕ್ತಿಗಳಿಗೆ ಲಸಿಕೆ ನೀಡುವುದು ನಮ್ಮ ಮೊದಲ ಆದ್ಯತೆ. ಅವರ ರಕ್ಷಣೆ ನಮ್ಮ ಮೊದಲ ಗುರಿ. ಯಾರಿಗೆ ಅಗತ್ಯವಿದೆಯೋ ಅವರಿಗೆ ಲಸಿಕೆ ನೀಡುವುದು ನಮ್ಮ ಗುರಿಯೇ ಹೊರತೂ ಬೇಕಾದವರಿಗೆಲ್ಲಾ ಲಸಿಕೆ ನೀಡುವುದು ಎಂದಿಗೂ ನಮ್ಮ ಗುರಿಯಾಗಿರಲಿಲ್ಲ’ ಎಂದಿದ್ದಾರೆ.

ಇನ್ನು ಸರ್ಕಾರದ ಗುರಿ ಸೋಂಕು ನಿಯಂತ್ರಣ. ಯಾವುದೇ ದೇಶದಲ್ಲಾದರೂ 45 ವರ್ಷಕ್ಕಿಂತ ಕೆಳಗಿನ ವಯಸ್ಸಿನವರಿಗೆ ಲಸಿಕೆ ನೀಡಿದ್ದನ್ನು ಕೇಳಿರುವಿರಾ’ ಎಂದು ನೀತಿ ಅಯೋಗದ ಸದಸ್ಯ ವಿ.ಕೆ.ಪೌಲ್‌ ಪ್ರಶ್ನಿಸಿದ್ದಾರೆ.