ದುಡ್ಡಿಲ್ಲದೆ ಗೋಣಿ ಚೀಲದಲ್ಲಿ ಕ್ರಿಕೆಟ್ ಕಿಟ್ ಕೊಂಡೊಯ್ಯುವ ಯುವ ಕ್ರಿಕೆಟಿಗ, ವಿಡಿಯೋ ವೈರಲ್
ಸಾಧನೆಗೆ ಕಷ್ಟ, ಬಡತನ ಯಾವುದೂ ಅಡ್ಡಿಯಾಗಲ್ಲ ಅಂತಾರೆ. ಅದು ಅಕ್ಷರಶಃ ನಿಜ ಅನ್ನೋದನ್ನು ಇಲ್ಲೊಬ್ಬಾತ ಸಾಬೀತುಪಡಿಸಿದ್ದಾನೆ. ಕಾಶ್ಮೀರದ ಯುವ ಕ್ರಿಕೆಟಿಗ ಅಕ್ಕಿ ಚೀಲದಲ್ಲಿ ಕ್ರಿಕೆಟ್ ಕಿಟ್ ಕೊಂಡೊಯ್ಯುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ತರ್ಹಾಮಾ ಕುಂಜರ್ ಪ್ರದೇಶದ 13 ವರ್ಷದ ಕ್ರಿಕೆಟ್ ಉತ್ಸಾಹಿ ಉಝೈರ್ ನಬಿ ಕ್ರೀಡೆಯ ಮೇಲಿರುವ ತಮ್ಮ ಪ್ರೀತಿಯಿಂದಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಉಝೈರ್ ಅವರ ಕ್ರಿಕೆಟ್‌ನಲ್ಲಿನ ಉತ್ಸಾಹ, ಬಾರಾಮುಲ್ಲಾವನ್ನು ಪ್ರತಿನಿಧಿಸುವ ಭರವಸೆ ಎಲ್ಲರ ಮನಗೆದ್ದಿದೆ. ಬಡತನದಲ್ಲಿ ಬೆಳೆದಿರುವ ತರ್ಹಾಮಾ ಗೋಣಿ ಚೀಲದಲ್ಲಿ ಕ್ರಿಕೆಟ್ ಪರಿಕರಗಳನ್ನು ತುಂಬಿಕೊಂಡಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಜನರು ಕ್ರೀಡೆಯಲ್ಲಿ ಅವರ ಸಮರ್ಪಣೆಯನ್ನು ಶ್ಲಾಘಿಸಿದ್ದಾರೆ.
ಮನೆಯಲ್ಲಿ ಬಡತನ, ಕ್ರಿಕೆಟ್ ಮೇಲೆ ಪ್ರೀತಿ
ಹಣಕಾಸಿನ ಅಡೆತಡೆಗಳನ್ನು ಎದುರಿಸುತ್ತಿದ್ದರೂ ಉಝೈರ್ ಅವರ ಕ್ರಿಕೆಟ್ ಮೇಲಿನ ಪ್ರೀತಿ ಎಂದಿಗೂ ಕಡಿಮೆಯಾಗಲಿಲ್ಲ. ಅತ್ಯಾಧುನಿಕ ಕ್ರಿಕೆಟ್ ಕಿಟ್ ಬ್ಯಾಗ್‌ಗಳೊಂದಿಗೆ ತನ್ನ ಸಹ ಆಟಗಾರರನ್ನು (Players) ನೋಡಿದರೂ ತಾನು ಅಂಥದ್ದನ್ನು ಕೊಳ್ಳುವಷ್ಟು ಹಣವಿರಲ್ಲಿಲ್ಲ. ಹೀಗಾಗಿ ಗೋಣಿಚೀಲದಲ್ಲಿ ಕ್ರಿಕೆಟ್ ಉಪಕರಣಗಳನ್ನು ತೆಗೆದುಕೊಂಡು ಹೋಗುತ್ತಾನೆ. 'ಮೊದಲು ನಾನು ನನ್ನ ಕೈಯಲ್ಲಿ ಕ್ರಿಕೆಟ್ ಉಪಕರಣಗಳನ್ನು ತೆಗೆದುಕೊಂಡು ಹೋಗುತ್ತಿದ್ದೆ. ನಂತರ, ನಾನು ಗೋಣಿ ಚೀಲವನ್ನು (Rice bag) ತೆಗೆದುಕೊಂಡು ಅದರಿಂದ ಕ್ರಿಕೆಟ್ ಬ್ಯಾಗ್ ಅನ್ನು ರಚಿಸಿದೆ. ನನ್ನ ಚಿತ್ರ ವೈರಲ್ ಆಗುತ್ತದೆ ಮತ್ತು ಇಷ್ಟೊಂದು ಖ್ಯಾತಿಯನ್ನು ಪಡೆಯುತ್ತದೆ ಎಂದು ನನಗೆ ತಿಳಿದಿರಲಿಲ್ಲ' ಎಂದು ಆರನೇ ತರಗತಿಯ ಉಝೈರ್ ವಿದ್ಯಾರ್ಥಿ, ನಗುತ್ತಾ ಹೇಳುತ್ತಾನೆ.
ದಿನಗೂಲಿ ಮಾಡುತ್ತಿದ್ದಾಕೆ ಈಗ ಡಾಕ್ಟರ್ ಭಾರತಿ
ಕ್ರಿಕೆಟ್ ಕಿಟ್ ನೀಡಿ ನೆರವಾದ ಜಿಲ್ಲಾಡಳಿತ
'ಅತ್ಯಾಧುನಿಕ ಕ್ರಿಕೆಟ್ ಕಿಟ್ ಬ್ಯಾಗ್‌ಗಳೊಂದಿಗೆ ಇತರ ತಂಡದ ಆಟಗಾರರನ್ನು ನೋಡುವಾಗ ನನಗೆ ತುಂಬಾ ನೋವಾಗುತ್ತಿತ್ತು. ಆದರೆ ನನಗೆ ನನ್ನ ಕುಟುಂಬದ ಆರ್ಥಿಕ ಪರಿಸ್ಥಿತಿಯ ಬಗ್ಗೆ ತಿಳಿದಿತ್ತು' ಎಂದು ಉಝೈರ್ ಹೇಳುತ್ತಾನೆ. ಮೈದಾನದಲ್ಲಿ (Ground) ಆಲ್‌ರೌಂಡರ್ ಆಗಿದ್ದ ಉಝೈರ್‌ನ ಪ್ರತಿಭೆ ಅವರು ಆಡುವ ರೀತಿಯಲ್ಲಿ ಸ್ಪಷ್ಟವಾಗಿತ್ತು. ಕ್ರಿಕೆಟ್‌ನಲ್ಲಿ ಉಜೀರ್ ಅವರ ಸಾಮರ್ಥ್ಯ ಮತ್ತು ಅವರ ಅಚಲ ನಿರ್ಣಯವನ್ನು ಗುರುತಿಸಿದ ಅವರ ಕುಟುಂಬವು (Family) ಬೆಂಬಲಕ್ಕಾಗಿ ಜಿಲ್ಲಾಡಳಿತದ ಸಹಾಯವನ್ನು ಕೋರಿತು.
ಕೂಡಲೇ ಸ್ಪಂದಿಸಿದ ಜಿಲ್ಲಾಡಳಿತ ಜಿಲ್ಲಾಧಿಕಾರಿ ಸೈಯದ್ ಸೆಹರೀಷ್ ಅಸ್ಗರ್ ನೇತೃತ್ವದಲ್ಲಿ ಕ್ಷಿಪ್ರ ಕ್ರಮ ಕೈಗೊಂಡು ಯುವ ಕ್ರಿಕೆಟಿಗನಿಗೆ ಹೊಚ್ಚಹೊಸ ಕ್ರಿಕೆಟ್ ಕಿಟ್ ಉಡುಗೊರೆ ನೀಡಿದೆ. ಈ ಉಡುಗೊರೆ ನಾನು ನನ್ನ ಕನಸುಗಳನ್ನು ಇನ್ನಷ್ಟು ಉತ್ಸಾಹದಿಂದ ಮುಂದುವರಿಸಲು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಉಝೈರ್ ಹೇಳುತ್ತಾರೆ. ಉಝೈರ್ ಅವರ ಕಥೆಯು ಸಾಧನೆ ಸಾಧ್ಯವಿಲ್ಲ ಎಂದು ಕೈ ಕಟ್ಟಿ ಕುಳಿತುಕೊಳ್ಳುವವರಿಗೆ ಸ್ಫೂರ್ತಿಯಾಗಿದೆ.
ಮಗನ ಜೊತೆ 8400 ಕಿ.ಮೀ ಬೈಕಲ್ಲಿ ಸಂಚರಿಸಿದ ತಾಯಿಯ ಯಶಸ್ಸಿಗೆ ಯೋಗ ಕಾರಣ!
ಕ್ರಿಕೆಟ್ ಕಿಟ್ ಬ್ಯಾಗ್ ಅನ್ನು ಗೋಣಿ ಚೀಲದಿಂದ ರಚಿಸುವುದರಿಂದ ಹಿಡಿದು ಇಲ್ಲಿಯವರೆಗೆ ಸರಿಯಾದ ಕ್ರಿಕೆಟ್ ಕಿಟ್ ಹೊಂದಿರುವ ಉಝೈರ್ ಅವರ ಪ್ರಯಾಣವು ಯುವ ಮಹತ್ವಾಕಾಂಕ್ಷಿಗಳಿಗೆ ಅವರು ಎದುರಿಸಬಹುದಾದ ಸವಾಲುಗಳ ಹೊರತಾಗಿಯೂ ಅವರ ಕನಸುಗಳನ್ನು ಅನುಸರಿಸಲು ಪ್ರೇರೇಪಿಸುತ್ತದೆ.