Asianet Suvarna News Asianet Suvarna News

ಉತ್ತರಾಖಂಡ ಕಾಡಿನಲ್ಲಿ ಪ್ರಾಣಿಗಳಿಗೆ ಸೇತುವೆ!

ಉತ್ತರಾಖಂಡ ಕಾಡಿನಲ್ಲಿ ಪ್ರಾಣಿಗಳಿಗೆ ಫ್ಲೈಓವರ್‌!| ಅಪಘಾತ ತಡೆಗೆ ವಿನೂತನ ಸೌಲಭ್ಯ

Uttarakhand unique bridge to help reptiles cross busy jungle road
Author
Bangalore, First Published Dec 1, 2020, 7:47 AM IST

ನೈನಿತಾಲ್(ಡಿ.01)‌: ವಾಹನ ದಟ್ಟಣೆಯ ರಸ್ತೆಗಳಲ್ಲಿ ಜನರ ಸುಗಮ ಸಂಚಾರಕ್ಕೆ ಮೇಲುಸೇತುವೆ (ಫುಟ್‌ಓವರ್‌ ಬ್ರಿಡ್ಜ್‌) ನಿರ್ಮಾಣ ಸಾಮಾನ್ಯ. ಆದರೆ ಉತ್ತರಾಖಂಡದಲ್ಲಿ ಪ್ರಾಣಿಗಳು, ಸರಿಸೃಪಗಳಿಗೆಂದೇ ವಿಶೇಷ ಮೇಲುಸೇತುವೆ ನಿರ್ಮಿಸಲಾಗಿದೆ.

ಗೋವುಗಳ ರಕ್ಷಣೆಗಾಗಿ ಸಚಿವ ಸಂಪುಟ ರಚನೆ!

ರಾಮನಗರ ಜಿಲ್ಲೆಯ ಕಾಲಧುಂಗಿ-ನೈನಿತಾಲ್‌ ರಾಷ್ಟ್ರೀಯ ಹೆದ್ದಾರಿ ಅತ್ಯಂತ ವಾಹನ ದಟ್ಟಣೆಯ ಮಾರ್ಗ. ರಸ್ತೆಯ ಅಕ್ಕಪಕ್ಕದ ದಟ್ಟಅರಣ್ಯದಲ್ಲಿ ಚಿರತೆ, ಮಂಗ, ಹೆಬ್ಬಾವು, ವಿವಿಧ ರೀತಿಯ ಹಾವುಗಳು ಸೇರಿದಂತೆ ನಾನಾ ರೀತಿಯ ಪ್ರಾಣಿಗಳು ವಾಸಿಸುತ್ತವೆ. ಆದರೆ ಕೆಲವೊಂದು ಸಂದರ್ಭದಲ್ಲಿ ವಾಹನಗಳಿಗೆ ಸಿಕ್ಕಿ ಪ್ರಾಣಿಗಳು ಸಾವನ್ನಪ್ಪುತ್ತಿರುತ್ತವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸ್ಥಳೀಯ ಗುತ್ತಿಗೆದಾರರು, 10 ದಿನಗಳ ಅವಧಿಯಲ್ಲಿ 5 ಅಡಿ ಅಗಲ, 40 ಅಡಿ ಎತ್ತರ ಮತ್ತು 90 ಅಡಿ ಉದ್ದದ ಮೇಲುಸೇತುವೆಯನ್ನು 2 ಲಕ್ಷ ರು.ನಲ್ಲಿ ನಿರ್ಮಿಸಿದ್ದಾರೆ.

ಇದಕ್ಕಿದ್ದಂತೆ ಕೆಂಪಾಯ್ತು ಪೂರ್ತಿ ನದಿ..!ಇಲ್ಲಿ ನೋಡಿ ವಿಡಿಯೋ

ಬಿದಿರು, ಸೆಣಬು ಮತ್ತು ಹುಲ್ಲನ್ನು ಬಳಸಿ ಈ ಸೇತುವೆ ನಿರ್ಮಿಸಲಾಗಿದೆ. ಈ ಸೇತುವೆಗೆ ಪಕ್ಷಿ, ಪ್ರಾಣಿ, ಸರಿಸೃಪಗಳನ್ನು ಆಕರ್ಷಿಸಲು ಬಳ್ಳಿಗಳನ್ನು ಬೆಳೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios