Free LPG cylinders ಅಂತ್ಯೋದಯ ಕಾರ್ಡ್‌ದಾರರಿಗೆ ಉಚಿತ ಗ್ಯಾಸ್ ಸಿಲಿಂಡರ್ ಘೋಷಣೆ!
- ಚುನಾವಣೆ ಸಮೀಪಿಸುತ್ತಿದ್ದಂತೆ ಫ್ರೀ ಯೋಜನೆಗಳ ಘೋಷಣೆ
- 3 ಉಚಿತ ಗ್ಯಾಸ್ ಸಿಲಿಂಡರ್ ಘೋಷಿಸಿದ ಉತ್ತರಖಂಡ ಸರ್ಕಾರ
- ಉಚಿತ ಯೋಜನೆ ಬೇಡ ಎನ್ನುತ್ತಿರುವ ಬಿಜೆಪಿಯಿಂದಲೇ ಯೋಜನೆ
ಉತ್ತರಖಂಡ(ಮೇ.12): ಚುನಾವಣೆ ಸಮೀಪಿಸುತ್ತಿದ್ದಂತೆ ಉಚಿತ ಯೋಜನೆ ಘೋಷಣೆ ಭಾರತದಲ್ಲಿಸಾಮಾನ್ಯ. ಆದರೆ ಈ ಉಚಿತ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಬಿಜೆಪಿಯೇ ಇದೀಗ ವರ್ಷದಲ್ಲಿ 3 ಉಚಿತ ಗ್ಯಾಸ್ ಸಿಲಿಂಡರ್ ನೀಡುವ ಯೋಜನೆ ಘೋಷಿಸಿದೆ. ಉತ್ತರಖಂಡ ಸಿಎಂ ಪುಷ್ಕರ್ ಸಿಂಗ್ ಧಮಿ ನೇತೃತ್ವದ ಸರ್ಕಾರ ಅಂತ್ಯೋದಯ ಕಾರ್ಡ್‌ದಾರರಿಗೆ ವರ್ಷದಲ್ಲಿ ಮೂರು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ನೀಡಲು ನಿರ್ಧರಿಸಿದೆ.
ಗ್ಯಾಸ್ ಸಿಲಿಂಡರ್ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ.ಇದರಿಂದ ಹೈರಗಾಣಿಗಿರುವ ಜನತೆಗೆ ಇದೀಗ ಉತ್ತರಖಂಡ ಸರ್ಕಾರ ಬಹುದೊಡ್ಡ ಗಿಫ್ಟ್ ನೀಡಿದೆ. ಸಂಪುಟ ಸಭೆಯಲ್ಲಿ ಈ ಕುರಿತು ಮಹತ್ವದ ಚರ್ಚೆ ನಡೆಸಿದ ಪುಷ್ಕರ್ ಸಿಂಗ್ ಧಮಿ ಉಚಿತ ಗ್ಯಾಸ್ ಸಿಲಿಂಡರ್ ಘೋಷಣೆ ಮಾಡಿದ್ದಾರೆ.
ಬಡ ಹಾಗೂ ಮಧ್ಯಮ ವರ್ಗದ ಕಷ್ಟ ಆಲಿಸಿದ್ದು ಕಾಂಗ್ರೆಸ್ ಮಾತ್ರ!
ಉತ್ತರಖಂಡದಲ್ಲಿ 1,84,142 ಅಂತ್ಯೋದಯ ಸೌಲಭ್ಯಪಡೆಯುವವರಿದ್ದಾರೆ.ಅಂತ್ಯೋದಯ ಕಾರ್ಡ್‌ದಾರರು ವರ್ಷದಲ್ಲಿ 3 ಉಚಿತ ಗ್ಯಾಸ್ ಸಿಲಿಂಡರ್ ಸೌಲಭ್ಯ ಪಡೆಯಲಿದ್ದಾರೆ ಎಂದು ಉತ್ತರಖಂಡ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್ ಎಸ್ ಸಂಧು ಹೇಳಿದ್ದಾರೆ.
ಇದೇ ವೇಳೆ ರೈತರಿಗ ನೀಡುತ್ತಿದ್ದ ಬೋನಸ್ ವಿಸ್ತರಿಸಲು ನಿರ್ಧರಿಸಲಾಗಿದೆ. ಕಳೆದ ವರ್ಷ ರೈತರ ಗೋಧಿ ಬೆಳೆಗೆ ಪ್ರತಿ ಕಿಂಟ್ವಾಲ್‌ಗೆ 20 ರೂಪಾಯಿ ಬೋನಸ್ ಈ ವರ್ಷವೂ ವಿಸ್ತರಣೆಯಾಗಲಿದೆ ಎಂದು ಉತ್ತರಖಂಡ ಸರ್ಕಾರ ಘೋಷಿಸಿದೆ.
ಪುಷ್ಕರ್ ಸಿಂಗ್ ಧಮಿ ಸರ್ಕಾರದ ಉಚಿತ ಗ್ಯಾಸ್ ಸಿಲಿಂಡರ್ ಘೋಷಣೆಯನ್ನು ಬಿಜೆಪಿ ಸ್ವಾಗತಿಸಿದೆ. ಬಡವರಿಗೆ ಸರ್ಕಾರದ ಸಿಲಿಂಡರ್ ಯೋಜನೆ ನೆರವಾಗಲಿದೆ ಎಂದು ಉತ್ತರಖಂಡ ಬಿಜೆಪಿ ಹೇಳಿದೆ.
ಗ್ಯಾಸ್ ಸಿಲಿಂಡರ್ ದರದಲ್ಲಿ ಮತ್ತೆ ಏರಿಕೆ: ಕಂಗಾಲಾದ ಗ್ರಾಹಕ..!
ಅಡುಗೆ ಅನಿಲ ದರ ಏರಿಕೆ, ದೇಶದೆಲ್ಲಡೆ ಪ್ರತಿಭಟನೆ
ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ ದರ ಶನಿವಾರ 50 ರು. ಏರಿಕೆಯಾಗಿದೆ. ಅದರೊಂದಿಗೆ ದೇಶದಲ್ಲಿ ಒಂದು ಎಲ್‌ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ ಬರೋಬ್ಬರಿ 999.50 ರು.ಗೆ ಮತ್ತು ಬೆಂಗಳೂರಿನಲ್ಲಿ 1002.50 ರು.ಗೆ ತಲುಪಿದಂತಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯೇರಿಕೆ ಮತ್ತು ಹಣದುಬ್ಬರದಿಂದ ತತ್ತರಿಸುತ್ತಿರುವ ಜನಸಾಮಾನ್ಯರಿಗೆ ಇದು ಗಾಯದ ಮೇಲೆ ಬರೆ ಎಳೆದಿದೆ. ಕಳೆದ ಮಾಚ್‌ರ್‍ನಲ್ಲಷ್ಟೇ ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್ ದರ 50 ರು. ಏರಿಕೆ ಮಾಡಿದ್ದವು. ಈಗ ಮತ್ತೆ 50 ರು. ಏರಿಕೆ ಮಾಡಿವೆ. ರಷ್ಯಾ-ಉಕ್ರೇನ್ ನಡುವಿನ ಯುದ್ಧದಿಂದಾಗಿ ಜಗತ್ತಿನಾದ್ಯಂತ ನೈಸರ್ಗಿಕ ಅನಿಲದ ಪೂರೈಕೆ ವ್ಯತ್ಯಯವಾಗಿದ್ದು, ಅದರಿಂದಾಗಿ ಬೆಲೆ ಏರಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಅಡುಗೆ ಅನಿಲ ದರ ಏರಿಕೆ ಖಂಡಿಸಿ ಮಹಿಳಾ ಕಾಂಗ್ರೆಸ್ ಪ್ರತಿಭಟನೆ
ಅಡುಗೆ ಅನಿಲ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಮಹಿಳಾ ಘಟಕದ ಪದಾಧಿಕಾರಿಗಳು ಒಲೆಯಲ್ಲಿ ಟೀ ಮಾಡುವ ಮೂಲಕ ಪ್ರತಿಭಟಿಸಿದರು. ನಗರದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಅಡುಗೆ ಸಿಲಿಂಡರ್ ಬದಿಗಿರಿಸಿ, ಇಟ್ಟಿಗೆ ಇಟ್ಟು ಬೆಂಕಿ ಹಚ್ಚಿ ಟೀ ತಯಾರಿಸುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.
ಕೇವಲ 500 ರಿಂದ 600 ಇದ್ದ ಅಡುಗೆ ಸಿಲಿಂಡರ್ ಬೆಲೆ ಈಗ 1002 ಆಗಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಿಲಿಂಡರ್ ಸೇರಿದಂತೆ ಅನೇಕ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ ಎಂದು ಆರೋಪಿಸಿದರು. ಅಂತೆಯೇ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೂ ಹೆಚ್ಚಾಗಿದೆ. ಕೂಡಲೇ ಬೆಲೆ ಇಳಿಸಬೇಕು. ದೇಶದ ಬಡವರು ಮತ್ತು ಮಧ್ಯಮ ವರ್ಗದವರು ಹೆಚ್ಚಿನ ದರ ನೀಡಿ ಅಡುಗೆ ಅನಿಲ ಖರೀದಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ದೂರಿದರು.