LPG Cylinder Price Hike: ಗ್ಯಾಸ್‌ ಸಿಲಿಂಡರ್ ದರದಲ್ಲಿ ಮತ್ತೆ ಏರಿಕೆ: ಕಂಗಾಲಾದ ಗ್ರಾಹಕ..!

*  ವಾಣಿಜ್ಯ ಸಿಲಿಂಡರ್‌ ದರ 102 ರೂಪಾಯಿ ಏರಿಕೆ
*  ಕಮರ್ಷಿಯಲ್ ಸಿಲಿಂಡರ್ ‌ಬೆಲೆ 2430.50 ರು. 
*  ಗೃಹೋಪಯೋಗಿ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿಲ್ಲ 
 

Commercial LPG cylinder price hiked by Rs 102 on May 01st in India

ನವದೆಹಲಿ(ಮೇ.01):  ಇಂದಿನಿಂದ(ಮೇ.1) ವಾಣಿಜ್ಯ ಬಳಕೆಯ ಸಿಲಿಂಡರ್ ದರ ಮತ್ತೆ ಏರಿಕೆಯಾಗಿದೆ. ಹೌದು, ವಾಣಿಜ್ಯ ಸಿಲಿಂಡರ್‌ ದರ 102 ರೂಪಾಯಿ ಏರಿಕೆಯಾಗಿದೆ. 19 ಕೆಜಿ ತೂಕದ ವಾಣಿಜ್ಯ ಬಳಕೆ ಸಿಲಿಂಡರ್ ಇಂದಿನಿಂದ ಮೇ 1 ರಿಂದ 102 ರೂಪಾಯಿ ದರ ಏರಿಕೆ ಕಂಡಿದೆ. 

ಸದ್ಯ ಕಮರ್ಷಿಯಲ್ ಸಿಲಿಂಡರ್ ‌ಬೆಲೆ 2430.50 ರು. ಯಾಗಿದ್ದು, ಗೃಹೋಪಯೋಗಿ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿಲ್ಲ. ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಇಂದಿನಿಂದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳಲ್ಲಿ ಹೆಚ್ಚಳವನ್ನು ಮಾಡಿದೆ. 

Gold and Silver Price: ಚಿನ್ನ ದರ ಇಳಿಕೆ, ಬೆಳ್ಳಿ ಏರಿಕೆ: ಪ್ರಮುಖ ನಗರಗಳಲ್ಲಿ ಇಂದಿನ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ

ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ 250 ರೂಪಾಯಿ ಏರಿಕೆ, ಒಂದು ಸಿಲಿಂಡರ್ ಬೆಲೆ 2250 ರೂಪಾಯಿ!

ನವದೆಹಲಿ: ವಾಣಿಜ್ಯ ಸಿಲಿಂಡರ್‌ಗಳ (LPG Cylinder) ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಬೆಲೆಯನ್ನು ಏ.01 ರಂದು 250 ರೂಪಾಯಿ ಹೆಚ್ಚಿಸಲಾಗಿತ್ತು. ಇದರಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ, 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಬೆಲೆ  2,253 ರೂಪಾಯಿಗೆ ಮುಟ್ಟಿತ್ತು. ಆದರೆ,  ಗೃಹಬಳಕೆಯ (domestic gas cylinders) LPG ಸಿಲಿಂಡರ್ ದರಗಳನ್ನು ಯಥಾಸ್ಥಿತಿಯಲ್ಲಿ ಇರಿಸಲಾಗಿತ್ತು. 

ಕರ್ನಾಟಕದ ಜಿಲ್ಲೆಗಳಲ್ಲಿ ಇಂಧನ ದರ ಏರಿಳಿತ:

ಒಂದೆಡೆ ಅಂತಾರಾಷ್ಟ್ರೀಯ ಕಚ್ಚಾತೈಲ (International Crude Oil Price Today) ಬೆಲೆ ಗಗನಕ್ಕೇರಿದೆ. ಇತ್ತ ಭಾರತದಲ್ಲಿ ಮಧ್ಯಮವರ್ಗದ ಜನರಿಗೆ ಪೆಟ್ರೋಲ್‌ - ಡೀಸೆಲ್‌ (Petrol – Diesel) ಖರೀದಿ ಮಾಡುವುದೂ ಕಷ್ಟ ಎನ್ನುವ ಕಾಲ ಸನ್ನಿಹಿತವಾಗಿದೆ. ಇನ್ನು ದೇಶದಲ್ಲಿ ಕೊರನಾ 4ನೇ ಅಲೆ ಭೀತಿ ಎದುರಾಗಿದೆ. ಈ ಬೆನ್ನಲ್ಲೇ ಹಲವು ರಾಜ್ಯಗಳನ್ನು ಕೊರೋನಾ ಗೈಡ್‌ಲೈನ್ಸ್ ಜಾರಿಗೊಳಿಸಿವೆ. ಈ ನಡುವೆ ಪೆಟ್ರೋಲ್‌ ಬೆಲೆ 100ರ ಗಡಿದಾಟಿ 110 ರೂಪಾಯಿಗಳನ್ನೂ ಮುಟ್ಟಿದೆ. ಡೀಸೆಲ್‌ ದರ ಕೂಡ ಇನ್ನೇನು ರೂ. 100 ಮುಟ್ಟಲು ಸಿದ್ಧವಾಗಿದೆ. 

Semicon India 2022: ಸೆಮಿಕಂಡಕ್ಟರ್‌ ಉದ್ದಿಮೆ ಉತ್ತೇಜನಕ್ಕೆ 6 ಒಪ್ಪಂದ

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಹೆಚ್ಚಿದಂತೆಲ್ಲಾ ಎಲ್ಲಾ ವಸ್ತುಗಳ ಬೆಲೆಯೂ ಏರಿಕೆಯಾಗುತ್ತವೆ. ಇದರಿಂದ ಸಾಮಾನ್ಯ ಬಡ ಮತ್ತು ಮಧ್ಯಮವರ್ಗದ ಜನರ ಜೀವನ ದುಸ್ಥರವಾಗುತ್ತದೆ. ಇಂದು, ಮೇ 1, ರವಿವಾರದಂದು ಬಿಜಾಪುರ, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್ ಹಾಗೂ ಡಿಸೇಲ್‌ ಬೆಲೆ ಏರಿಕೆಯಾಗಿದೆ. ಚಿತ್ರದುರ್ಗ ಹಾಗೂ ದಾವಣಗೆರೆ  ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಪೆಟ್ರೋಲ್‌ ಬೆಲೆಯಲ್ಲಿ ಇಳಿಕೆಯಾಗಿದೆ. ವಾಹನ ಇಂಧನದ ಬೆಲೆಗಳು ಹಲವಾರು ತಿಂಗಳುಗಳಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿವೆ ಮತ್ತು ದೇಶಾದ್ಯಂತ ದಾಖಲೆಯ ಹಣದುಬ್ಬರದ ನಡುವೆ ಕಾರ್ಯನಿರ್ವಹಿಸುತ್ತಿವೆ. 

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಅನೇಕ ಅಂಶಗಳನ್ನು ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಇವುಗಳಲ್ಲಿ ಕೆಲವು ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳಲ್ಲಿ ದೈನಂದಿನ ಬದಲಾವಣೆಗಳು ಮತ್ತು ವಿದೇಶಿ ವಿನಿಮಯ ಏರಿಳಿತಗಳು ಮತ್ತು ವಿವಿಧ ರಾಜ್ಯಗಳಲ್ಲಿ ವಿಭಿನ್ನ ತೆರಿಗೆ ದರಗಳನ್ನು ಒಳಗೊಂಡಿವೆ. ದೇಶದಾದ್ಯಂತ ಇಂಧನ ಬೆಲೆಗಳು ಬದಲಾಗುತ್ತಿರುವುದಕ್ಕೆ ಸಾರಿಗೆ ವೆಚ್ಚವೂ ಒಂದು ಪ್ರಮುಖ ಕಾರಣ.
 

Latest Videos
Follow Us:
Download App:
  • android
  • ios