ಯುನಿಫಾರ್ಮ್ ಸಿವಿಲ್ ಕೋಡ್(UCC) ಜಾರಿಗೆ ಪರ ವಿರೋಧಗಳಿವೆ. ಆದರೆ ಜನವರಿ 27 ರಿಂದ ಭಾರತದ ಮೊದಲ ಬಾರಿಗೆ ಯುಸಿಸಿ ಜಾರಿ ಮಾಡುವುದಾಗಿ ಧಮಿ ಖಚಿತಪಡಿಸಿದ್ದಾರೆ.
ಡೆಹ್ರಡೂನ್(ಜ.26) ಕೇಂದ್ರ ಸರ್ಕಾರ ಏಕರೂಪ ನಾಗರೀತ ಸಂಹಿತೆ(UCC) ಜಾರಿ ಕುರಿತು ಹಲವು ಬಾರಿ ಮಾತನಾಡಿದೆ. ಈ ಸಂಹಿತೆ ಜಾರಿಗೆ ತಯಾರಿಗಳು ಮಾಡಿಕೊಳ್ಳುತ್ತಿದೆ. ಆದರೆ ಯೂನಿಫಾರ್ಮ್ ಸಿವಿಲ್ ಕೋಡ್ ಜಾರಿಗೆ ಪರ ವಿರೋಧಗಳಿವೆ. ಇದರ ನಡುವೆ ಉತ್ತರಖಂಡ ಸರ್ಕಾರ ಭಾರತದಲ್ಲೇ ಮೊದಲ ಬಾರಿಗೆ ಯುಸಿಸಿ ಜಾರಿ ಮಾಡುತ್ತಿದೆ. ಉತ್ತರಖಂಡದಲ್ಲಿ ಜನವರಿ 27ರಿಂದ ಯುನಿಫಾರ್ಮ್ ಸಿವಿಲ್ ಕೋಡ್ ಜಾರಿಯಾಗುತ್ತಿದೆ. ಈ ಮೂಲಕ ಉತ್ತರಖಂಡ ಐತಿಹಾಸಿಕ ಹೆಜ್ಜೆ ಇಡುತ್ತಿದೆ.ಮುಖ್ಯಮಂತ್ರಿಗಳ ಕಾರ್ಯದರ್ಶಿ ಶೈಲೇಶ್ ಬಗೋಲಿ ಈ ಕುರಿತು ಮಹತ್ವದ ಘೋಷಣೆ ಮಾಡಿದ್ದಾರೆ.
ಜನವರಿ 27 ರಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಉತ್ತರಖಂಡದಲ್ಲಿ ಯುಸಿಸಿ ಜಾರಿ ಅಧಿಕೃತಗೊಳಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಪುಷ್ಕರ್ ಸಿಂಗ್ ಧಮಿ ಯುಸಿಸಿ ವೆಬ್‌ಸೈಟ್‌ಗೆ ಚಾಲನೆ ನೀಡಲಿದ್ದಾರೆ ಎಂದು ಶೈಲೇಷ್ ಬಗೋಲಿ ಹೇಳಿದ್ದಾರೆ. ಉತ್ತರಖಂಡ ಸರ್ಕಾರ ಐತಿಹಾಸಿಕ ಹೆಜ್ಜೆ ಇಟ್ಟಿದೆ ಎಂದು ಹಲವರು ಬಣ್ಣಿಸಿದ್ದಾರೆ. ಇದೇ ವೇಳೆ ಇಷ್ಟೇ ವಿರೋಧಗಳು ವ್ಯಕ್ತವಾಗಿದೆ.
News Hour: ಕೆಂಪುಕೋಟೆಯಿಂದಲೇ ಯುಸಿಸಿ ಜಾರಿ ಶಪಥಗೈದ ಮೋದಿ!
ಏಕರೂಪ ನಾಗರೀಕ ಸಂಹಿತೆ ಜಾರಿಯಿಂದ ಉತ್ತರ ಪ್ರದೇಶದಲ್ಲಿ ಕೆಲ ನೀತಿಗಳಲ್ಲಿ ಮಹತ್ತರ ಬದಲಾವಣೆಯಾಗಲಿದೆ. ಪ್ರಮುಖವಾಗಿ ಮದುವೆ, ವಿಚ್ಚೇದನ , ಆಸ್ತಿ, ದತ್ತು ಸೇರಿದಂತೆ ಕೆಲ ನಿಯಮಗಳು ಎಲ್ಲಾ ಧರ್ಮ, ಜಾತಿ, ಸಮುದಾಯಗಳಿಗೂ ಒಂದೇ ಆಗಲಿದೆ. ಪ್ರಮುಖವಾಗಿ ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ಧತೆ ಕಾಪಾಡಿಕೊಳ್ಳುವ ಜೊತೆಗೆ ವ್ಯಕ್ತಿಯ ಮೂಲಭೂತ ಹಕ್ಕುಗಳ ರಕ್ಷಣೆಯನ್ನು ಏಕರೂಪ ನಾಗರೀಕ ಸಂಹಿತೆಯ ಮೂಲ ಉದ್ದೇಶವಾಗಿದೆ.
ಉತ್ತರಖಂಡದ ರಾಜ್ಯದಲ್ಲಿ ಯುಸಿಸಿ ಜಾರಿಯಾಗುತ್ತಿದೆ. ಈ ನಿಯಮ ಪರಿಶಿಷ್ಠ ಪಂಗಡ ಹಾಗೂ ಕೆಲ ಸಮುದಾಯಗಳಿಗೆ ಅನ್ವಯವಾಗುವುದಿಲ್ಲ. ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿಗೆ ಭಾರತದಲ್ಲಿ ಯುನಿಫಾರ್ಮ್ ಸಿವಿಲ್ ಕೋಡ್ ಜಾರಿಯಾಗುತ್ತಿದೆ. ಸದ್ಯ ಉತ್ತರಖಂಡ ಸರ್ಕಾರ ಈ ನಿತಿಯನ್ನು ಜಾರಿಗೊಳಿಸುತ್ತಿದೆ. ಯುಸಿಸಿ ಅಡಿಯಲ್ಲಿ ಯಾರೇ ಮದುವೆಯಾದರೂ 60 ದಿಗಗಳಲ್ಲಿ ನೋಂದಣ ಮಾಡಿಕೊಳ್ಳಬೇಕು. ಮದುವೆ ಅವರವರ ಸಂಪ್ರದಾಯ, ಧರ್ಮಕ್ಕೆ ಅನುಸಾರವಾಗಿ ಮಾಡಬಹುದು. ಆದರೆ ನೋಂದಣಿ ಕಡ್ಡಾಯವಾಗಿದೆ. ಈ ಮೂಲಕ ಎಲ್ಲಾ ಮದುವೆಗಳಿಗೆ ಕಾನೂನಾತ್ಮಕ ರಕ್ಷಣೆ ಸಿಗಲಿದೆ.
ಉತ್ತರಖಂಡ ಪ್ರತಿಪಕ್ಷಗಳು ಯುಸಿಸಿ ಜಾರಿಗೆ ವಿರೋಧ ವ್ಯಕ್ತಪಡಿಸಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಲಿದೆ. ಇದು ಭಾರತಕ್ಕೆ ಸೂಕ್ತವಲ್ಲ ಅನ್ನೋ ವಾದವನ್ನು ಮುಂದಿಟ್ಟಿದೆ. ಭಾರಿ ವಿರೋಧ ವ್ಯಕ್ತಪಡಿಸಿದೆ. ಉತ್ತರಖಂಡದಲ್ಲಿ ಪ್ರತಿಭಟನೆಗೆ ಮುಂದಾಗಿದೆ.
ಯಾವುದೇ ಕಾಯ್ದೆ ರದ್ದು ಮಾಡಿ, ಮುಸ್ಲಿಮರಿಗೆ ಷರಿಯಾ ಅಂತಿಮ, ಎಸ್‌ಟಿ ಹಸನ್ ಆಕ್ರೋಶ!
