ಉತ್ತರಖಂಡ(ಮಾ.08): ಉತ್ತರಖಂಡ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಕಳೆದ ಕೆಲ ದಿನಗಳಿಂದ ಉತ್ತರಖಂಡ ಬಿಜೆಪಿ ಸರ್ಕಾರದಲ್ಲಿ ತಳಮಳ ಶುರುವಾಗಿದೆ. ಇದೀಗ ಮುಖ್ಯಮಂತ್ರಿ ರಾಜೀನಾಮೆಯೊಂದಿಗೆ ಅಂತ್ಯವಾಗುವ ಸಾಧ್ಯತೆ ಇದೆ. ಇದೀಗ ಉತ್ತರಖಂಡ ಮುಖ್ಯಂತ್ರಿ ತ್ರಿವಿಂದ್ರ ಸಿಂಗ್ ರಾವತ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಾಗಿದೆ.

ಉತ್ತರಖಂಡ ದುರಂತಕ್ಕೆ ದೇವಿ ಶಾಪ; ಗ್ರಾಮಸ್ಥರು ನೀಡಿದ ಎಚ್ಚರಿಕೆ ನಿಜವಾಯಿತಾ?.

ಬಿಜಜೆ ರಾಷ್ಟ್ರೀಯ ಅಧ್ಯಕ್ಷ  ಜೆಪಿ ನಡ್ಡ ಭೇಟಿಯಾದ ಬೆನ್ನಲ್ಲೇ ಇದೀಗ ತ್ರೀವೇದ್ರ ಸಿಂಗ್ ರಾವತ್ ರಾಜೀನಾಮೆಗೆ ಸಜ್ಜಾಗಿದ್ದಾರೆ. ಇಂದು ಸಂಜೆ ಉತ್ತರಖಂಡ ಗರ್ವನರ್ ಬೇಬಿ ರಾಣಿ ಮೌರ್ಯ ಭೇಟಿಯಾಗಲಿದ್ದಾರೆ. ಬಳಿಕ ಸುದ್ದಿಗೋಷ್ಠಿ ಕೂಡ ಕರೆದಿದ್ದಾರೆ. 

ಉತ್ತರಖಂಡ ಬಿಜೆಪಿ ಶಾಸಕರು ಮುಖ್ಯಮಂತ್ರಿ ತ್ರೀವೇಂದ್ರ ಸಿಂಗ್ ರಾವತ್ ಆಡಳಿತದ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಈ ಕುರಿತು ಹೈಕಮಾಂಡ್‌ಗೆ ದೂರು ನೀಡಿದ್ದರು. ಹಲವು ಸಚಿವರು ಹಾಗೂ ಶಾಸಕರು ರಾವತ್ ವಿರುದ್ಧ ತಿರುಗಿಬಿದ್ದಿದ್ದಾರೆ. ಹೀಗಾಗಿ ಪಕ್ಷ ಹಾಗೂ ಸರ್ಕಾರ ಅಪಾಯಕ್ಕೆ ಸಿಲುಕುವ ಮೊದಲು ರಾಜೀನಾಮೆ ನೀಡುವಂತೆ ಹೈಕಮಾಂಡ್ ಸೂಚಿಸಿತ್ತು ಎನ್ನಲಾಗಿದೆ.

ತ್ರೀವೇಂದ್ರ ಸಿಂಗ್ ರಾವತ್ ರಾಜೀನಾಮೆಯಿಂದ ತೆರವಾಗುವ ಮುಖ್ಯಮಂತ್ರಿ ಸ್ಥಾನಕ್ಕೆ ಧನ್ ಸಿಂಗ್ ಆಗಮಿಸುವ ಸಾಧ್ಯತೆ ಹೆಚ್ಚಿದೆ. ಈ ಕುರಿತು ಬಿಜೆಪಿ ಪಕ್ಷ ಬುಧವಾರ(ಮಾ.10) ಬೆಳಗ್ಗೆ 11 ಗಂಟೆ ಸಭೆ ಕರೆದಿದೆ. ಇಂದಿನ ಬೆಳವಣಿಗೆ ಬಳಿಕ ಮುಂದಿನ ಮುಖ್ಯಮಂತ್ರಿ ಯಾರು ಅನ್ನೋ ಕುರಿತು ಚರ್ಚೆಯಾಗುವ ಸಾಧ್ಯತೆ ಇದೆ.