ಬಿಜೆಪಿ ನಾಯಕ ಯಶ್‌ಪಾಲ್ ಪುತ್ರಿಯ ಮದುವೆ ರದ್ದಾಗಿದೆ. ಮುಸ್ಲಿಂ ವ್ಯಕ್ತಿ ಜೊತೆಗೆ ಮದುವೆ ನಿಶ್ಚಯವಾಗಿತ್ತು. ಆದರೆ ಪ್ರತಿಕೃತಿ ದಹನ, ಭಾರಿ ಪ್ರತಿಭಟನೆಯಿಂದ ಇದೀಗ ಬಿಜೆಪಿ ನಾಯಕ ಮಗಳ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾರೆ.
ಡೆಹ್ರಡೂನ್(ಮೇ.21): ಬಿಜೆಪಿ ನಾಯಕನ ಪುತ್ರಿ ವಿವಾಹ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಪ್ರತಿಭಟನೆ, ಪ್ರತಿಕೃತಿ ದಹನ ಜೋರಾಗಿದೆ. ಇದರ ಪರಿಣಾಮ ಬಿಜೆಪಿ ನಾಯಕ ತಮ್ಮ ಪುತ್ರಿ ವಿವಾಹವನ್ನೇ ರದ್ದು ಮಾಡಿದ್ದಾರೆ. ಉತ್ತರಖಂಡದ ಬಿಜೆಪಿ ನಾಯಕ ಯಶಪಾಲ್ ಬೆನಾಮ್ ಪುತ್ರಿಯ ವಿವಾಹ ಮುಸ್ಲಿಂ ಹುಡುಗನ ಜೊತೆ ನಿಶ್ಚಯವಾಗಿತ್ತು. ಆದರೆ ಈ ನಿರ್ಧಾರವನ್ನು ಹಲವು ಹಿಂದೂಪರ ಸಂಘಟನೆಗಳು ಖಂಡಿಸಿತ್ತು. ತೀವ್ರ ಪ್ರತಿಭಟನೆಯಿಂದ ಮೇ.28ರಂದು ನಡೆಯಬೇಕಿದ್ದ ಮಗಳ ಮದುವೆಯನ್ನು ಯಶ್‌ಪಾಲ್ ಬೆನಾಮ್ ರದ್ದುಗೊಳಿಸಿದ್ದಾರೆ.
ಉತ್ತರಖಂಡದ ಪೌರಿ ಕ್ಷೇತ್ರ ಬಿಜೆಪಿ ನಾಯಕ ಯಶ್‌ಪಾಲ್ ಬೆನಾಮ್ ರಜಪೂತ ಸಮುದಾಯಕ್ಕೆ ಸೇರಿದ್ದಾರೆ. ಆದರೆ ಯಶ್‌ಪಾಲ್ ಬೆನಾಮ್ ಪುತ್ರಿ ಮುಸ್ಲಿಂ ಹುಡುಗನ ಪ್ರೀತಿಸಿದ್ದರು. ಇತ್ತೀಚೆಗೆ ಪುತ್ರಿಯ ವಿವಾಹ ನಿಶ್ಚಯ ಮಾಡಲಾಗಿದೆ. ಆದರೆ ಮುಸ್ಲಿಂ ವ್ಯಕ್ತಿಗೆ ವಿವಾಹ ಮಾಡುತ್ತಿರುವುದನ್ನು ರಜಪೂತ ಸಮುಯಾದಯ ಹಿರಿಯ ಮುಖಂಡರು ಧಾರ್ಮಿಖ ಮುಖಂಡರು ತೀವ್ರವಾಗಿ ವಿರೋಧಿಸಿದ್ದಾರೆ. ಇತ್ತ ಹಿಂದೂಪರ ಸಂಘಟನೆಗಳು ಯಶಪಾಲ್ ಬೆನಾಮ್ ಪ್ರತಿಕೃತಿ ದಹಿಸಿ ಪ್ರತಿಭಟನೆ ಮಾಡಿದೆ. ಬಿಜೆಪಿ ರಾಜ್ಯಗಳು ಕೇರಳ ಸ್ಟೋರಿ ಚಿತ್ರವನ್ನು ತೆರಿಗೆ ವಿನಾಯಿತಿ ನೀಡಿ ಪ್ರದರ್ಶನಕ್ಕೆ ಅವಕಾಶ ನೀಡುತ್ತಿದೆ. ಆದರೆ ಉತ್ತರಖಂಡದ ಬಿಜೆಪಿ ನಾಯಕ ಯಶಪಾಲ್ ತಮ್ಮ ಪುತ್ರಿಯನ್ನೇ ಮುಸ್ಲಿಂ ವ್ಯಕ್ತಿಗೆ ಮದುವೆ ಮಾಡಿಸುತ್ತಿದ್ದಾರೆ. ಈ ಮೂಲಕ ಉತ್ತರಖಂಡ ಸ್ಟೋರಿಗೆ ಮುನ್ನುಡಿ ಬರೆಯುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು.
ಮುಸ್ಲಿಂ ವ್ಯಕ್ತಿ ಜೊತೆ ಬಿಜೆಪಿ ಮುಖಂಡನ ಮಗಳ ಮದುವೆ, ವೆಡ್ಡಿಂಗ್ ಕಾರ್ಡ್ ನೋಡಿ ಸಿಟ್ಟಾದ ನೆಟ್ಟಿಗರು!
ಪೌರಿ ದೇವಾಲಯ ಸಮಿತಿ ಸದಸ್ಯರು ಈ ನಿರ್ಧಾರಕ್ಕೆ ಆತಂಕ ವ್ಯಕ್ತಪಡಿಸಿದ್ದರು. ಹಲವರು ಉತ್ತರಖಂಡದಲ್ಲಿ ಹಿಂದೂ ಯುವತಿಯನ್ನು ಮದುವೆಯಾಗಿ ಬಳಿಕ ನಡೆದಿರುವ ಘಟನೆಯನ್ನು ನೆನಪಿಸಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಪ್ರತಿಭಟನೆ ಬೆನ್ನಲ್ಲೇ ಯಶಪಾಲ್ ಬೆನಾಮ್ ತಮ್ಮ ಪುತ್ರಿ ವಿವಾಹವನ್ನು ರದ್ದುಮಾಡಿದ್ದಾರೆ.
ಮದುವೆ ರದ್ದು ಮಾಡಲು ಯಶ್‌ಪಾಲ್ ಬೆನಾಮ್ ಪುತ್ರಿ ಒಪ್ಪಿಲ್ಲ ಅನ್ನೋ ಮಾತುಗಳು ಕೇಳಿಬಂದಿದೆ. ಸದ್ಯಕ್ಕೆ ಮದುವೆ ಮುಂದೂಡಲಾಗಿದೆ. ಮೇ.28 ರಂದು ನಡೆಯಬೇಕಿದ್ದ ಮದುವೆಯನ್ನು ಅಕ್ಟೋಬರ್ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳುತ್ತಿದೆ. ಇದು ಮತ್ತೊಂದು ಪ್ರತಿಭಟನೆಗೆ ದಾರಿ ಮಾಡಿಕೊಡಲಿದೆ. ರಜಪೂತ ಸಮುದಾಯದ ಧಾರ್ಮಿಕ ಮುಖಂಡರು, ಪೌರಿ ದೇವಸ್ಥಾನದ ಹಿರಿಯರು ಈ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಲವ್ ಜಿಹಾದ್‌ನ್ನು ಬಿಜೆಪಿ ವಿರೋಧಿಸುತ್ತದೆ. ಆದರೆ ಬಿಜೆಪಿ ನಾಯಕರೇ ಈ ರೀತಿ ನಿರ್ಧಾರ ತೆಗೆದುಕೊಂಡರೆ ಕಾರ್ಯಕರ್ತರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಾರೆ. ಕಾರ್ಯಕರ್ತರಲ್ಲಿ ಹಿಂದುತ್ವದ ಕುರಿತು ದ್ವಂದ್ವ ನೀತಿ ಇಲ್ಲ. ಆದರೆ ಬಿಜೆಪಿ ನಾಯಕರು ದ್ವಂದ್ವ ಧೋರಣೆ ತೆಗೆದುಕೊಳ್ಳುತ್ತಿರುವುದಕ್ಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಶ್ಮೀರದಲ್ಲಿ ಲವ್ ಜಿಹಾದ್? ಹಿಂದೂ ವೈದ್ಯೆಯ ಭೀಕರ ಹತ್ಯೆಗೈದ ಬಾಯ್‌ಫ್ರೆಂಡ್ ಮೆಹಮೂದ್!
ಹಿಂದೂ ಯುವತಿಯರನ್ನು ಮದುವೆಯಾಗಿ ಬಳಿಕ ಮತಾಂತರ ಮಾಡುವ ಮುಸ್ಲಿಂ ಯುವಕರ ಷಡ್ಯಂತ್ರಕ್ಕೆ ಬಲಿಯಾಗಬೇಡಿ ಎಂದು ಹಿಂದೂಪರ ಸಂಘಟನೆಗಳು ಮನವಿ ಮಾಡಿದೆ. ಈ ಷಡ್ಯಂತ್ರದ ಕುರಿತು ಕೇರಳ ಸ್ಟೋರಿ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹಲವು ಹಿಂದೂಪರ ಕಾರ್ಯಕರ್ತರು ಇದೇ ಉಹಾರಣೆ ಮುಂದಿಟ್ಟು ಉತ್ತರಖಂಡ ಬಿಜೆಪಿ ನಾಯಕನ ತೀವ್ರ ತರಾಟೆಗೆ ತೆಗೆದಕೊಂಡಿದ್ದಾರೆ.
