Asianet Suvarna News Asianet Suvarna News

ಮುಸ್ಲಿಂ ವ್ಯಕ್ತಿ ಜೊತೆ ಬಿಜೆಪಿ ಮುಖಂಡನ ಮಗಳ ಮದುವೆ, ವೆಡ್ಡಿಂಗ್‌ ಕಾರ್ಡ್‌ ನೋಡಿ ಸಿಟ್ಟಾದ ನೆಟ್ಟಿಗರು!

ಬಿಜೆಪಿ ನಾಯಕ ಹಾಗೂ ಮಾಜಿ ಶಾಸಕ ಯಶ್‌ಪಾಲ್‌ ಬೇನಾಮ್‌ ಅವರ ಪುತ್ರಿಯ ಮದುವೆ ಈಗ ಬಿಜೆಪಿ ಪಕ್ಷದ ವಿರುದ್ಧವೇ ಟೀಕೆಗೆ ಗುರಿಯಾಗಿದೆ. ಉತ್ತರಾಖಂಡ್‌ನ ಪೌರಿ ಮೂಲದ ಯಶ್‌ಪಾಲ್‌ ಬೇನಾಮ್‌ ತಮ್ಮ ಪುತ್ರಿಯ ವಿವಾಹವನ್ನು ಮುಸ್ಲಿಂ ವ್ಯಕ್ತಿಯ ಜೊತೆ ನಿಶ್ಚಯ ಮಾಡಿದ್ದಾರೆ. ವೆಡ್ಡಿಂಗ್‌ ಕಾರ್ಡ್‌ನ ಫೋಟೋಗಳನ್ನು ಶೇರ್‌ ಮಾಡುವ ಮೂಲಕ ಬಿಜೆಪಿಯನ್ನು ಟೀಕಿಸಿದ್ದಾರೆ.
 

BJP leader Yashpal Benam daughter marriage card with Muslim youth goes viral Troll san
Author
First Published May 19, 2023, 4:23 PM IST | Last Updated May 19, 2023, 4:32 PM IST

ನವದೆಹಲಿ (ಮೇ.19): ಬಿಜೆಪಿ ನಾಯಕನ ಪುತ್ರಿಯ ವಿವಾಹದ ಆಮಂತ್ರಣ ಪತ್ರಿಕೆ ಶುಕ್ರವಾರ ಸೋಶಿಯಲ್‌ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ. ಉತ್ತರಾಖಂಡ್‌ನ ಪೌರಿ ವಲಯದ ಬಿಜೆಪಿ ನಾಯಕನಾಗಿರುವ ಯಶ್‌ಪಾಲ್‌ ಬೇನಾಮ್‌ ಅವರ ಪುತ್ರಿಯ ವಿವಾಹವಾಗಿ ಟ್ವಿಟರ್‌, ಫೇಸ್‌ಬುಕ್‌ನಲ್ಲಿ ಚರ್ಚೆಯ ವಿಚಾರವಾಗಿ ಮಾರ್ಪಟ್ಟಿದೆ. ಮುಸ್ಲಿಂ ವ್ಯಕ್ತಿಯ ಜೊತೆ ಮಗಳ ಮದುವೆಗೆ ಮುಂದಾಗಿರುವ ಕಾರಣಕ್ಕೆ, ಬಿಜೆಪಿ ನಾಯಕನ ವಿರುದ್ಧ ದೊಡ್ಡ ಮಟ್ಟದ ಟೀಕೆಗಳು ವ್ಯಕ್ತವಾಗುತ್ತಿದೆ. ಮದುವೆಯ ಆಮಂತ್ರಣ ಪತ್ರಿಕೆಯ ಫೋಟೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದಾರೆ. ಬಿಜೆಪಿಯ ಬೆಂಬಲಿಗರಯ ಹಾಗೂ ವಿರೋಧಿಗಳು ಕೂಡ ರಜಪೂತ ಸಮುದಾಯದ ಯಶ್‌ಪಾಲ್‌ ಬೇನಾಮ್‌ರನ್ನು ಟೀಕೆ ಮಾಡುತ್ತಿದ್ದಾರೆ. ಹಿಂದು ಪರ ಸಂಘಟನೆಗಳು ಮಾಜಿ ಶಾಸಕರು ನಿರ್ಧಾರವನ್ನು ಟೀಕೆ ಮಾಡಿದ್ದಾರೆ, ಬಿಜೆಪಿ ಹೊರತಾದ ಪಕ್ಷಗಳು ಇದು ಬಿಜೆಪಿಯ ಡಬಲ್‌ ಸ್ಟ್ಯಾಂಡರ್ಡ್‌ಅನ್ನು ತೋರಿಸುತ್ತಿದೆ ಎಂದಿದ್ದಾರೆ. ಇನ್ನೂ ಕೆಲವರು ಇದು ಲವ್‌ ಜಿಹಾದ್‌ ಮಾಡುವ ಪ್ರಯತ್ನ ಎಂದು ಕರೆದಿದ್ದಾರೆ. ಅದಲ್ಲದೆ, ಇತ್ತೀಚಿಗೆ ಬಿಡುಗಡೆಯಾದ ಕೇರಳ ಸ್ಟೋರಿ ಚಿತ್ರವನ್ನೂ ಈ ಮದುವೆಯೊಂದಿಗೆ ಹೋಲಿಕೆ ಮಾಡಿದ್ದಾರೆ.

ಬಿಜೆಪಿ ಆಡಳಿತವಿರುವ ರಾಜ್ಯಗಳು ಕೇರಳ ಸ್ಟೋರಿಯಂಥ ಚಿತ್ರಗಳನ್ನು ತೆರಿಗೆ ಮುಕ್ತ ಮಾಡುತ್ತಾರೆ. ಇನ್ನೊಂದೆಡೆ, ಬಿಜೆಪಿ ನಾಯಕನೊಬ್ಬ ತನ್ನ ಮಗಳನ್ನು ಮುಸ್ಲಿಂ ವ್ಯಕ್ತಿಗೆ ಮದುವೆ ಮಾಡಿಕೊಡುತ್ತಿದ್ದಾರೆ. ಬಿಜೆಪಿಯ ದ್ವಂದ್ವ ನೀತಿ ಇದಾಗಿದ್ದು, ಇದರಿಂದ ಪಕ್ಷದ ಕಾರ್ಯಕರ್ತರು ಕೂಡ ಹತಾಶರಾಗುತ್ತಾರೆ ಎಂದು ಫೇಸ್‌ಬುಕ್‌ ಬಳಕೆದಾರರು ಬರೆದುಕೊಂಡಿದ್ದಾರೆ.
ಮುಸ್ಲಿಂ ಹುಡುಗರು ಹಿಂದು ಹುಡುಗಿಯನ್ನು ಪ್ರೀತಿಸಿ ಮದುವೆಯಾಗೋದಕ್ಕೆ ಬಿಜೆಪಿ ನಾಯಕರು ಹಾಗೂ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಲವ್‌ ಜಿಹಾದ್‌ ಎಂದು ಕರೆಯುತ್ತಾರೆ. ಮದುವೆ ಮಾಡಿಕೊಳ್ಳುವ ಮೂಲಕ ಹಿಂದು ಮಹಿಳೆಯರನ್ನು ಇವರು ಮತಾಂತರಕ್ಕೆ ಒಳಪಡಿಸುತ್ತಾರೆ ಎಂದು ಆರೋಪ ಮಾಡುತ್ತಿವೆ.

ಪೌರಿ ದೇವಾಲಯ ಸಮಿತಿಯ ಪದಾಧಿಕಾರಿಗಳು ಕೂಡ ಈ ಕುರಿತಾಗಿ ಮಾತನಾಡಿದ್ದಾರೆ. ಇದು ಕಳವಳಕಾರಿ ಸಂಗತಿಯಾಗಿದೆ. ಹಿಂದೂ ಕುಟುಂಬಗಳ ಹೆಣ್ಣುಮಕ್ಕಳನ್ನು ಇತರ ಧರ್ಮದ ಪುರುಷರೊಂದಿಗೆ ಮದುವೆ ಮಾಡುವುದು ಪ್ರಚಾರದ ಒಂದು ಭಾಗವಾಗಿದೆ. ಭಾರತದಲ್ಲಿ, ಮತಾಂತರದ ಕಾನೂನುಗಳನ್ನು ಬದಲಾಯಿಸಲಾಗುತ್ತಿದೆ, ಸರ್ಕಾರಿ ಆಸ್ತಿಗಳಲ್ಲಿ ಇತರ ಸಮುದಾಯದ ಜನರಿಗಾಗಿ ನಿರ್ಮಿಸಲಾದ ಗೋರಿಗಳನ್ನು ಕೇಂದ್ರವು ನೆಲಸಮ ಮಾಡುತ್ತಿದೆ, ಆದರೆ ಬಿಜೆಪಿಯ ಸ್ವಂತ ನಾಯಕರು ತಮ್ಮ ಹೆಣ್ಣುಮಕ್ಕಳನ್ನು ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆ ಮಾಡುತ್ತಿದ್ದಾರೆ' ಎಂದು ಟೀಕೆ ಮಾಡಿದ್ದಾರೆ. 

The Kerala Story ಸಂಘ ಪರಿವಾರದ ಸುಳ್ಳಿನ ಫ್ಯಾಕ್ಟರಿಯ ಉತ್ಪನ್ನ: ಕೇರಳ ಸಿಎಂ!

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಇದನ್ನು ವಿರೋಧಿಸಬೇಕು ಎಂದೂ ಅವರು ಹೇಳಿದ್ದಾರೆ. ಬಿಜೆಪಿ ಹಿಂದೂಗಳ ರಕ್ಷಣೆಗಾಗಿ ಇರುವ ಪಕ್ಷವಾಗಿದ್ದು, ಅಂತಹವರನ್ನು ಕೂಡಲೇ ಪಕ್ಷದಿಂದ ಹೊರಹಾಕಬೇಕು ಎಂದಿದ್ದಾರೆ. ಈ ನಡುವೆ ಯಶ್‌ಪಾಲ್‌ ಬೇನಾಮ್‌ಗೆ ಆಪ್ತರಾಗಿರುವ ವ್ಯಕ್ತಿಗಳು ಮದುವೆಯ ಬಗ್ಗೆ ಮಾಹಿತಿ ನೀಡಿದ್ದು, ಅವರ ಪುತ್ರಿ ಲಕ್ನೋ ವಿವಿಯಲ್ಲಿ ಓದುತ್ತಿದ್ದಾಳೆ. ಮದುವೆಯಾಗಲಿರು ವ್ಯಕ್ತಿಯೊಂದಿಗೆ ಈಗಾಗಲೇ ಸಂಬಂಧ ಹೊಂದಿದ್ದಾಳೆ ಎಂದಿ ಹೇಳಿದ್ದಾರೆ. ಮೇ 28 ರಂದು ಪೌರಿಯ ರೆಸಾರ್ಟ್‌ನಲ್ಲಿ ವಿವಾಹ ನಡೆಯಲಿದೆ. ಯಶ್‌ಪಾಲ್‌ ಬೇನಾಮ್‌ ಪೌರಿ ಮುನ್ಸಿಪಲ್‌ ಕಾರ್ಪೋರೇಷನ್‌ನ ಅಧ್ಯಕ್ಷರಾಗಿದ್ದಾರೆ. ಈ ಮೊದಲು ಕಾಂಗ್ರೆಸ್‌ನಲ್ಲಿದ್ದ ಇವರು 2007ರಲ್ಲಿ ಪೌರಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ರಾಜಕೀಯ ನಾಯಕರನ್ನು ಮದುವೆಗೆ ಆಹ್ವಾನಿಸಲಾಗಿದೆ.

ಲವ್ ಜಿಹಾದ್ ಮಾಡಿದವರನ್ನು ಅಲ್ಲಿಗೆ ಕಳುಹಿಸುತ್ತೇನೆ: ಶಾಸಕ ಭರತ್ ಶೆಟ್ಟಿ ವಾರ್ನಿಂಗ್

Latest Videos
Follow Us:
Download App:
  • android
  • ios