ದೆಹಲಿಯ ಶ್ರದ್ಧವಾಕರ್ ರೀತಿಯಲ್ಲೇ ಮತ್ತೊಂದು ಭೀಕರ ಹತ್ಯೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ. ಜೋಹರ್ ಮೆಹಮೂದ್ ಗನೈ ಪ್ರೀತಿ ಬಲೆಯಲ್ಲಿ ಬಿದ್ದ ಕಾಶ್ಮೀರಿ ಪಂಡಿತ್ ಸುಮೇಧಾ ಶರ್ಮಾ ಭೀಕರವಾಗಿ ಹತ್ಯೆಯಾಗಿದ್ದಾಳೆ. ಇದು ಲವ್ ಜಿಹಾದ್ ಅನ್ನೋ ಆರೋಪಗಳು ಕೇಳಿಬಂದಿದೆ.
ಕಾಶ್ಮೀರ(ಮಾ.10): ದೇಶದಲ್ಲಿ ಪ್ರೀತಿಯಲ್ಲಿ ಬಿದ್ದ ಜೋಡಿಗಳಿಂದಲೇ ಪ್ರೀತಿ ಪಾತ್ರರು ಹತ್ಯೆಯಾಗುತ್ತಿರುವ ಘಟನೆ ಹೆಚ್ಚಾಗುತ್ತಿದೆ. ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ಭೀಕರ ಹತ್ಯೆಯೊಂದು ನಡೆದಿದೆ. ಹಿಂದೂ ವೈದ್ಯೆ ಸುಮೇಧಾ ಶರ್ಮಾ, ತನ್ನ ಬಾಯ್‌ಫ್ರೆಂಡ್ ಜೋಹರ್ ಮೆಹಮೂದ್ ಗನೈಯಿಂದ ಭೀಕರವಾಗಿ ಹತ್ಯೆಯಾಗಿದ್ದಾಳೆ. ಹಲವು ಕಾರಣಗಳಿಂದ ಇವರಿಬ್ಬರ ನಡುವೆ ಕಳೆದ ಕೆಲದಿನಗಳಿಂದ ಜಗಳ ನಡೆಯತ್ತಲೇ ಇತ್ತು. ಮೊದಲೇ ಆಕ್ರೋಶಗೊಂಡಿದ್ದ ಜೋಹರ್ ಮೆಹಮೂದ್ ಗನೈ ಅಡುಗೆಗೆ ಬಳಲುವ ಚಾಕುವಿನಿಂದ 40ಕ್ಕೂ ಹೆಚ್ಚು ಬಾರಿ ಚುಚ್ಚಿ ಕೊಲೆಗೈದಿದ್ದಾನೆ. ಬಳಿಕ ತಾನೂ ಚಾಕುವಿನಿಂದ ಚುಚ್ಚಿಕೊಂಡಿದ್ದಾನೆ. ಶ್ರೀನಗರದ ಜನಿಪುರದ ಹೊರವಲಯದಲ್ಲಿ ಈ ಘಟನೆ ನಡೆದಿದೆ.
ಕಮಲ್ ಕಿಶೋರ್ ಶರ್ಮಾ ಪುತ್ರಿ 26 ವರ್ಷದ ಸುಮೇಧಾ ಶರ್ಮಾ ಹಾಗೂ ಮೆಹಮೂದ್ ಗೈನೈ ಪುತ್ರ ಜೋಹರ್ ಮೆಹಮೂದ್ ಗನೈ ಕಳೆದ ಕೆಲ ವರ್ಷಗಳಿಂದ ಪ್ರೀತಿಯಲ್ಲಿದ್ದರು. ಮದುವೆ ಸೇರಿದಂತೆ ಹಲವು ವಿಚಾರಗಳಲ್ಲಿ ಇವರಿಬ್ಬರು ಜಗಳವಾಡುತ್ತಿದ್ದರು ಅನ್ನೋ ಮಾತುಗಳು ಕೇಳಿಬಂದಿದೆ. ಮಾರ್ಚ್ 7 ರಂದು ಇದೇ ರೀತಿ ಕೆಲ ವಿಚಾರಕ್ಕೆ ವಾಗ್ವಾದ ನಡೆದಿದೆ.
LOVE JIHAD: ನಟಿ ತುನಿಷಾ ಆತ್ಮಹತ್ಯೆ- ಜೈಲಿನಿಂದ ಬರ್ತಿದ್ದಂತೆಯೇ ಬಾಯ್‌ಫ್ರೆಂಡ್ ಖಾನ್ ಹೇಳಿದ್ದೇನು?
ಆಕ್ರೋಶಗೊಂಡ ಮೆಹಮೂದ್ ಅಡುಗೆಗೆ ಬಳಸುವ ಚಾಕುವಿನಲ್ಲಿ 40ಕ್ಕೂ ಹೆಚ್ಚು ಬಾರಿ ಚುಚ್ಚಿ ಗೆಳತಿಯನ್ನು ಹೈತ್ಯೆಗೈದಿದ್ದಾನೆ. ಬಳಿಕ ಫೇಸ್‌ಬುಕ್ ಮೂಲಕ ಪೋಸ್ಟ್ ಹಾಕಿದ್ದಾನೆ. ಕೆಲ ವೈಯುಕ್ತಿಕ ಕಾರಣಗಳಿಂದ ನಾನು ಬುದುಕು ಅಂತ್ಯಗೊಳಿಸುವುದಾಗಿ ಬರೆದುಕೊಂಡಿದ್ದಾನೆ. ಈ ಕುರಿತು ಮೆಹಮೂದ್ ಆಪ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕುಟುಂಬಸ್ಥರಿಂದ ಮಾಹಿತಿ ಕಲೆಹಾಕಿದ ಪೊಲೀಸರು ಮೆಹಮೂದ್ ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಸುಮೇಧಾ ಶರ್ಮಾ ವೈದ್ಯೆ ವೃತ್ತಿ ಮಾಡುತ್ತಿರುವ ಆಸ್ಪತ್ರೆಯ ಪಕ್ಕದಲ್ಲಿರುವ ಮನೆಯಲ್ಲಿರುವುದು ಪತ್ತೆಯಾಗಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆಯ ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದ್ದಾರೆ. ಈ ವೇಳೆ ಸುಮೇಧಾ ಶರ್ಮಾ ಹಾಗೂ ಮೆಹಮೂದ್ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಸುಮೇಧಾ ಪ್ರಾಣ ಪಕ್ಷಿ ಹಾರಿ ಹೋಗಿ ಕೆಲಹೊತ್ತುಗಳೇ ಕಳೆದಿತ್ತು. ಆದರೆ ಸುಮೇಧಾ ಹತ್ಯೆ ಬಳಿಕ ಮೆಹಮೂದ್ ಬದುಕು ಅಂತ್ಯಗೊಳಿಸಲು ಚಾಕು ಚುಚ್ಚಿದ್ದಾನೆ.
Love Jihad: ಇನ್‌ಸ್ಟಾಗ್ರಾಂ ಮೂಲಕ ಮುಸ್ಲಿಂ ಯುವಕನ ಮದುವೆಯಾದ ಯುವತಿ: ಲವ್ ಜಿಹಾದ್ ಆರೋಪ
ಇಬ್ಬರನ್ನು ಆಸ್ಪತ್ರೆ ದಾಖಲಿಸಲಾಗಿದೆ. ಸುಮೇಧಾ ಭೀಕರವಾಗಿ ಹತ್ಯೆಯಾಗಿದ್ದರೆ, ಮೆಹಮೂದ್ ತೀವ್ರವಾಗಿ ಗಾಯಗೊಂಡಿದ್ದಾನೆ. ಇದೀಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೆಹಮೂದ್ ಹೇಳಿಕೆ ದಾಖಲಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ.
ಬಾಯ್‌ಫ್ರೆಂಡ್ ಜೊತೆ ಹೋಳಿ ಹಬ್ಬ ಆಚರಿಸಲು ಸುಮೇಧಾ ಮುಂದಾಗಿದ್ದಳು. ಹೀಗಾಗಿ ಮಾರ್ಚ್ 7 ರಂದು ಇಬ್ಬರು ಜೊತೆಯಾಗಿದ್ದರು. ಆದರೆ ಸಂಭ್ರಮದ ಹೋಳಿ ಬದಲು ಬದುಕು ದುರಂತ ಅಂತ್ಯವಾಗಿದೆ.
