Asianet Suvarna News Asianet Suvarna News

ಶಾಲಾ ಟೀಚರ್ ಜೊತೆ ಪ್ರಿನ್ಸಿಪಲ್ ಕುಚ್ ಕುಚ್, ಎಲ್ಲೆಡೆ ಹರಿದಾಡುತ್ತಿದೆ ರೋಮ್ಯಾನ್ಸ್ ವಿಡಿಯೋ!

ಶಾಲಾ ಟೀಚರ್ ಜೊತೆ ಪ್ರಿನ್ಸಿಪಲ್ ಚಕ್ಕಂದವಾಡಿದ ಪ್ರಿನ್ಸಿಪಲ್ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಪ್ರಿನ್ಸಿಪಲ್ ಕೊಠಡಿಯಲ್ಲಿ ದಿಗ್ಗಜರ ಫೋಟೋ ಕಳೆಗೆ ಇವರ ರೊಮ್ಯಾನ್ಸ್ ನಡೆದಿದೆ. ಆದರೆ ಈ ವಿಡಿಯೋದಿಂದ ಪ್ರಿನ್ಸಿಪಲ್ ಸಾಹೇಬರ ಬಂಡವಾಳ ಬಯಲಾಗಿದೆ.
 

Uttar Pradesh Principal and teacher romance at school office video viral on social Media ckm
Author
First Published Jul 8, 2024, 12:06 AM IST

ಜೌನಪುರ್(ಜು.07) ಮಕ್ಕಳು, ಶಿಕ್ಷಕರಿಗೆ ಮಾರ್ಗದರ್ಶನ ನೀಡುತ್ತಾ ಶಾಲೆಯನ್ನು ಸಮರ್ಥವಾಗಿ ಮುನ್ನಡೆಸಬೇಕಿದ್ದ ಶಾಲಾ ಪ್ರಿನ್ಸಿಪಲ್ ಅಸಲಿ ಆಟ ಬಯಲಾಗಿದೆ. ಶಾಲೆಯ ಟೀಚರ್‌ನ್ನು ಪದೇ ಪದೇ ತನ್ನ ಕೊಠಡಿಗೆ ಕರೆಯಿಸಿಕೊಂಡು ಚಕ್ಕಂದವಾಡುತ್ತಿರುವ ವಿಡಿಯೋ ಒಂದು ಬಹಿರಂಗವಾಗಿದೆ. ಉತ್ತರ ಪ್ರದೇಶದ ಜೌನಪುರ್ ಕಾನ್ವೆಂಟ್ ಶಾಲೆಯಲ್ಲಿ ಈ ರೊಮ್ಯಾನ್ಸ್ ನಡೆದಿದೆ. ಹಲವು ದಿನಗಳಿಂದ ಇವರ ರೊಮ್ಯಾನ್ಸ್ ಮುಂದುವರಿದಿದೆ. ಇದೀಗ ವಿಡಿಯೋ ಮೂಲಕ ಬಟಾ ಬಯಲಾಗಿದೆ.

ಪ್ರತಿಷ್ಠಿತ ಕಾನ್ವೆಂಟ್ ಶಾಲೆಯಲ್ಲಿ ಈ ರೊಮ್ಯಾನ್ಸ್ ನಡೆದಿದೆ. ಪ್ರಿನ್ಸಿಪಾಲ್ ಹಾಗೂ ಟೀಚರ್ ನಡುವೆ ಹಲವು ದಿನಗಳಿಂದ ಸಲುಗೆ, ಆತ್ಮೀಯತೆ ಇತ್ತು. ಪದೇ ಪದೇ ಟೀಚರ್, ಪ್ರಿನ್ಸಿಪಲ್ ಕೊಠಡಿಗೆ ತೆರಳುತ್ತಿದ್ದರು. ಶಾಲೆಯ ಕೆಲ ಜವಾಬ್ದಾರಿಗಳನ್ನೂ ಶಾಲಾ ಶಿಕ್ಷಕಿಗೆ ವಹಿಸಲಾಗಿತ್ತು. ಇದರ ಹಿಂದೆ ಪ್ರಿನ್ಸಿಪಲ್ ವಿಶೇಷ ಆಸಕ್ತಿ ಎದ್ದು ಕಾಣುತ್ತಿತ್ತು. 

ಮಳೆಯಲಿ ಜೊತೆಯಲಿ ಕದ್ದು ಮುಚ್ಚಿ ಮಹಡಿ ಮೇಲೆ ಕಿಸ್ಸಿಂಗ್, ರೋಮ್ಯಾನ್ಸ್ ವಿಡಿಯೋ ವೈರಲ್!

ಶಾಲಾ ಟೀಚರ್ ಹಾಗೂ ಪ್ರಿನ್ಸಿಪಲ್ ನಡುವೆ ಕುಚ್ ಕುಚ್ ನಡೆಯುತ್ತಿದೆ ಅನ್ನೋ ಸುದ್ದಿ ಸ್ಥಳೀಯ ಮಟ್ಟದಲ್ಲಿ ಹರಿದಾಡಿತ್ತು. ಶಾಲೆಯ ಇತರ ಶಿಕ್ಷಕ-ಶಿಕ್ಷಕರಿಗೆ ಸುಳಿವು ಸಿಕ್ಕಿತ್ತು. ಹೀಗೆ ಇವರ ರೊಮ್ಯಾನ್ಸ್ ಪ್ರಿನ್ಸಿಪಲ್ ಕೊಠಡಿಯಲ್ಲೇ ನಡೆಯುತ್ತಿತ್ತು. ಹೀಗಿರುವಾಗ ಇವರಿಬ್ಬರ ರೊಮ್ಯಾನ್ಸ್ ಕ್ಯಾಮೆರದಲ್ಲಿ ಸೆರಿಯಾಗಿ ಕೋಲಾಹಲ ಸೃಷ್ಟಿಸಿದೆ.

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹರಿದಾಡುತ್ತಿದ್ದಂತೆ ಶಾಲೆ, ಸಮುದಾಯ, ಶಾಲಾ ವಿದ್ಯಾರ್ಥಿಗಳ ಪೋಷಕರಿಗೆ ತೀವ್ರ ಮುಜುಗರವಾಗಿದೆ. 7 ನಿಮಿಷಗಳ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಟೀಚರ್ ಕೊಠಡಿಯೊಳಕ್ಕೆ ಆಗಮಿಸುತ್ತಿದ್ದಂತೆ ಪ್ರಿನ್ಸಿಪಲ್ ಆವೇಷ ಭರಿತನಾಗಿ ರೊಮ್ಯಾನ್ಸ್ ಆರಂಭಿಸಿದ್ದಾನೆ. ಇತ್ತ ಟೀಚರ್ ಕೂಡ ಸಹಕರಿಸಿದ್ದಾರೆ. ಅಪ್ಪುಗೆ, ಚುಂಬನ ಹೀಗೆ ಇವರ ರೊಮ್ಯಾನ್ಸ್ ಮುಂದುವರಿದಿದೆ.

 

 

ದುರಂತ ಅಂದರೆ ಈ ಪ್ರಿನ್ಸಿಪಲ್ ಕೊಠಡಿಯ ಗೋಡೆ ಮೇಲೆ ಸ್ವಾತಂತ್ರ್ಯ ವೀರ ಭಗತ್ ಸಿಂಗ್, ಮಹಾರಾಣ ಪ್ರತಾಪ್, ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಫೋಟೋಗಳನ್ನು ಇಡಲಾಗಿದೆ. ಈ ಫೋಟೋ ಕೆಳಗೆ ಮಕ್ಕಳು, ಶಿಕ್ಷಕರಿಗೆ ಮಾರ್ಗದರ್ಶನ ನೀಡುತ್ತಾ, ಮಕ್ಕಳ ಭವಿಷ್ಯ ರೂಪಿಸಬೇಕಾದ ಪ್ರಿನ್ಸಿಪಲ್ ರೊಮ್ಯಾನ್ಸ್‌ನಲ್ಲಿ ತೊಡಗಿದ್ದು ದುರಂತ. 

ರೈಲಿನಲ್ಲಿ ಖುಲ್ಲಂ ಖುಲ್ಲಾ ಸೀನ್, ಜೋಡಿಯ ರೋಮ್ಯಾನ್ಸ್‌ಗೆ ಸುಸ್ತಾದ ಪ್ರಯಾಣಿಕರು!

ಈ ಘಟನೆ ಕುರಿತು ದೂರು ದಾಖಲಾಗಿರುವ ಕುರಿತು ಯಾವುದೇ ಮಾಹಿತಿ ಲಭ್ಯವಿದೆ. ಕೆಲ ದಿನಗಳ ಹಿಂದಿನ ವಿಡಿಯೋ ಇದಾಗಿದ್ದು, ಇದೀಗ ವೈರಲ್ ಆಗಿದೆ. ಇವರ ವಿರುದ್ದ ಕ್ರಮ ಕೈಗೊಂಡಿರುವ ಕುರಿತು ವರದಿಯಾಗಿಲ್ಲ.
 

Latest Videos
Follow Us:
Download App:
  • android
  • ios