"ಘಟನೆಯ ತನಿಖೆಯ ನಂತರ ಡಿವಿವಿಎನ್‌ಎಲ್‌ನ ವ್ಯವಸ್ಥಾಪಕ ನಿರ್ದೇಶಕರು ಎಸ್‌ಡಿಒ ರವೀಂದ್ರ ಪ್ರಕಾಶ್ ಗೌತಮ್ ಅವರನ್ನು ಅಮಾನತುಗೊಳಿಸಿದ್ದಾರೆ" ಎಂದು ಫರೂಕಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.

ಉತ್ತರಪ್ರದೇಶ (ಜೂ. 01): ಜಾಗತಿಕ ಭಯೋತ್ಪಾದಕ ಹಾಗೂ ಅಲ್-ಖೈದಾ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್ (Osama Bin Laden) "ವಿಶ್ವದ ಅತ್ಯುತ್ತಮ ಜೂನಿಯರ್ ಇಂಜಿನಿಯರ್" ಎಂದು ಬಣ್ಣಿಸಿ, ಅವರ ಚಿತ್ರವನ್ನು ತನ್ನ ಕಚೇರಿಯಲ್ಲಿ ಇರಿಸಿದ್ದಕ್ಕಾಗಿ ಸರ್ಕಾರಿ ವಿದ್ಯುತ್ ವಿತರಣಾ ಕಂಪನಿಯ ಅಧಿಕಾರಿಯನ್ನು ಬುಧವಾರ ಅಮಾನತುಗೊಳಿಸಲಾಗಿದೆ. ದಕ್ಷಿಣಾಂಚಲ್ ವಿದ್ಯುತ್ ವಿತ್ರನ್ ನಿಗಮ್ ಲಿಮಿಟೆಡ್‌ನ (DVVNL) ಉಪವಿಭಾಗಾಧಿಕಾರಿ (SDO) ರವೀಂದ್ರ ಪ್ರಕಾಶ್ ಗೌತಮ್ ಎಂಬ ಅಧಿಕಾರಿ ತನ್ನ ಕಚೇರಿಯಲ್ಲಿ ಲಾಡೆನ್ ಚಿತ್ರವನ್ನು ಇರಿಸಿದ್ದರು ಎಂದು ತಿಳಿದುಬಂದಿದೆ. ಅವರು ಅದರ ಕೆಳಗೆ "ಗೌರವಾನ್ವಿತ ಒಸಾಮಾ ಬಿನ್ ಲಾಡೆನ್, ವಿಶ್ವದ ಅತ್ಯುತ್ತಮ ಜೂನಿಯರ್ ಇಂಜಿನಿಯರ್" ಎಂದು ಬರೆದ ಸಣ್ಣ ಟಿಪ್ಪಣಿಯನ್ನು ಸಹ ಹಾಕಿದ್ದರು.

ಲಾಡೆನ್ ಅವರ ಕಛೇರಿಯಲ್ಲಿನ ಚಿತ್ರದ ಕುರಿತು ಸುದ್ದಿ ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಹಿರಿಯ ಜಿಲ್ಲಾ ಅಧಿಕಾರಿಗಳು ವಿಷಯ ತಿಳಿಯುತ್ತಿದ್ದಂತೆ ಕ್ರಮಕ್ಕೆ ಮುಂದಾಗಿದ್ದಾರೆ. ಅಧಿಕಾರಿಗಳು ಶೀಘ್ರದಲ್ಲೇ, ತನಿಖೆಗೆ ಆದೇಶಿಸಿದ್ದು ನಂತರ ಉಪವಿಭಾಗಾಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಕಚೇರಿಯಿಂದ ಲಾಡೆನ್ ಚಿತ್ರವನ್ನೂ ತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿವಿವಿಎನ್‌ಎಲ್‌ನ ವ್ಯವಸ್ಥಾಪಕ ನಿರ್ದೇಶಕರು ಘಟನೆಯ ತನಿಖೆಯ ನಂತರ ಎಸ್‌ಡಿಒ ರವೀಂದ್ರ ಪ್ರಕಾಶ್ ಗೌತಮ್ ಅವರನ್ನು ಅಮಾನತುಗೊಳಿಸಿದ್ದಾರೆ ಎಂದು ಫರೂಕಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಜಯ್ ಕುಮಾರ್ ಸಿಂಗ್ ಹೇಳಿದ್ದಾರೆ. ಇದೇ ವೇಳೆ ಅಮಾನತುಗೊಂಡ ಅಧಿಕಾರಿ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. "ಯಾರಾದರೂ ಆದರ್ಶ ವ್ಯಕ್ತಿಯಾಗಬಹದು. ಒಸಾಮಾ ವಿಶ್ವದ ಅತ್ಯುತ್ತಮ ಜೂನಿಯರ್ ಇಂಜಿನಿಯರ್ ಆಗಿದ್ದರು. ಚಿತ್ರವನ್ನು ತೆಗೆದುಹಾಕಲಾಗಿದೆ, ಆದರೆ ಅದರ ಹಲವಾರು ಪ್ರತಿಗಳು ನನ್ನ ಬಳಿ ಇವೆ" ಎಂದು ಗೌತಮ್ ಹೇಳಿದ್ದಾರೆ.

ಇದನ್ನೂ ಓದಿ:ತಹಶಿಲ್ದಾರ್ ಕಚೇರಿ ಎದುರು ಕುಡಿದು ಮಕಾಡೆ ಮಲಗಿದ್ದ ಗ್ರಾಮಲೆಕ್ಕಾಧಿಕಾರಿ ಅಮಾನತು!

ಇದನ್ನೂ ಓದಿ:ಅಪ್ರಾಪ್ತ ಬಾಲಕನಿಗೆ ಥಳಿಸಿದ ಪೊಲೀಸ್‌: ದೃಶ್ಯ ಸಿಸಿಟಿವಿಯಲ್ಲಿ ಸೆರೆ, ಅಮಾನತು