ಅಪ್ರಾಪ್ತನಿಗೆ ಥಳಿಸಿ ಕೈ ತಿರುವಿದ ಪೊಲೀಸ್ ದೃಶ್ಯ ಸಿಸಿಟಿವಿಯಲ್ಲಿ ಸೆರೆ, ಪೊಲೀಸ್ ಅಮಾನತು ಗುಜರಾತ್‌ನ ವಡೋದರಾದಲ್ಲಿ ಘಟನೆ
ವಡೋದರಾ(ಏ.4): ಗುಜರಾತ್‌ನ ವಡೋದರಾದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಅಪ್ರಾಪ್ತ ಬಾಲಕನನ್ನು ಬೆನ್ನಟ್ಟಿ ಹೋಗಿ ಥಳಿಸಿದ್ದು, ಬಳಿಕ ಬಾಲಕನ ಕೈಯನ್ನು ತಿರುವಿದ ಘಟನೆ ನಡೆದಿದೆ. ಈ ಬಾಲಕನ ಮೇಲೆ ಪೊಲೀಸ್ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯವನ್ನಾಧರಿಸಿ ಹಲ್ಲೆ ಮಾಡಿದ ಪೊಲೀಸ್ ಪೇದೆಯನ್ನು ಅಮಾನತು ಮಾಡಲಾಗಿದೆ. ಶನಿವಾರ ಗುಜರಾತಿನ ವಡೋದರಾದ ಮಾರುಕಟ್ಟೆಯೊಂದರಲ್ಲಿ ಈ ಘಟನೆ ನಡೆದಿದೆ. 13 ವರ್ಷದ ಬಾಲಕನಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಡೋದರಾದ ನಂದೇಸರಿ ಮಾರುಕಟ್ಟೆಯಲ್ಲಿ ಶನಿವಾರ ರಾತ್ರಿ 8.45ರ ಸುಮಾರಿಗೆ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.
ಹಲ್ಲೆ ಮಾಡಿದ ಪೊಲೀಸ್ ಪೇದೆಯನ್ನು ಶಕ್ತಿಸಿಂಹ ಪಾವ್ರಾ (Shaktisinh Pavra) ಎಂದು ಗುರುತಿಸಲಾಗಿದೆ. ಇವರು ಛಾನಿ (Chhani) ಪೊಲೀಸ್ ಠಾಣೆಯ ಪೇದೆ ಎಂದು ಪೊಲೀಸ್ ನಿಯಂತ್ರಣ ಕೊಠಡಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಾವ್ರಾ ಅವರು ತಮ್ಮ ಇಲಾಖೆಯ ಅಧಿಕೃತ ವಾಹನವನ್ನು ಬಳಸಿಕೊಂಡು ನಗರದ ಮತ್ತೊಂದು ಪೊಲೀಸ್ ಠಾಣೆಗೆ ಹೋಗಿದ್ದರು ಮತ್ತು ಹಿಂತಿರುಗುತ್ತಿದ್ದರು. ಈ ವೇಳೆ ಅವರು ರಸ್ತೆ ದಾಟುವಾಗ ಬಾಲಕ ಏನೋ ಗೊಣಗುತ್ತಿರುವುದನ್ನು ಗಮನಿಸಿದ ಅವರು ಕೆಳಗೆ ಇಳಿದು ಬಂದು ಬಾಲಕನನ್ನು ಅಟ್ಟಿಸಿಕೊಂಡು ಹೋಗಿ ಹಲವು ಬಾರಿ ಆತನ ಮೇಲೆ ಹಲ್ಲೆ ಮಾಡಿ ಕಪಾಳಮೋಕ್ಷ ಮಾಡಿದರು ಮತ್ತು ಅವನ ಕೈಯನ್ನು ತಿರುಚಿದರು. ಇದು ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣ ದಾಖಲಾಗಿ ವಿಚಾರಣೆ ಆರಂಭವಾಗಿದ್ದು, ವಲಯ I ರ ಉಪ ಪೊಲೀಸ್ ಆಯುಕ್ತರು, ಈ ಹಲ್ಲೆ ಮಾಡಿದ ಅಧಿಕಾರಿಯನ್ನು ದುರ್ವರ್ತನೆ ತೋರಿದ ಕಾರಣ ನೀಡಿ ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಘಟನೆಯ ಕುರಿತು ವಡೋದರಾದ ಪೊಲೀಸ್ ಕಮಿಷನರ್ (Commissioner of Police) ಶಂಶೇರ್ ಸಿಂಗ್ (Shamsher Singh) ಟ್ವೀಟ್ ಮಾಡಿ, ಇಂತಹ ದುರ್ನಡತೆಯನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ. ತಕ್ಷಣದಿಂದ ಜಾರಿಗೆ ಬರುವಂತೆ ಈ ಪೊಲೀಸ್‌ನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ವಿಚಾರಣೆ ಬಳಿಕ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ವಿಶೇಷ ಚೇತನ ವ್ಯಕ್ತಿ ಮೇಲೆ ಹಲ್ಲೆ ಮಾಡಿ ಕ್ರೌರ್ಯ ಮೆರೆದ ಪೊಲೀಸ್ ಅಮಾನತು!
ಕಳೆದ ವರ್ಷ ಲಾಕ್‌ಡೌನ್ ಸಮಯದಲ್ಲಿ ದಿನಸಿ ಹಂಚುತ್ತಿದ್ದ ಆರ್‌ಎಸ್‌ಎಸ್ ಕಾರ್ಯಕರ್ತನ ಮೇಲೆ ಬೆಂಗಳೂರಿನ ಹಲಸೂರು ಗೇಟ್ ಸಬ್ ಇನ್ಸ್‌ಪೆಕ್ಟರ್ ರಾಜ್‌ಶೇಖರ್ ಹಲ್ಲೆ ಮಾಡಿದ ಘಟನೆ ಭಾರಿ ಸುದ್ದಿಗೆ ಕಾರಣವಾಗಿತ್ತು. ಲಾಕ್‌ಡೌನ್‌ನಿಂದ ದಿನಸಿ ಸಿಗದೆ ಕಷ್ಟಪಡುತ್ತಿರುವ ಜನರಿಗೆ ಆರ್‌ಎಸ್‌ಎಸ್ ಕಾರ್ಯಕರ್ತರು ದಿನಸಿ ಹಂಚುತ್ತಿದ್ದರು. ಕಬ್ಬನ್‌ಪೇಟೆಯಿಂದ ಸಂಪಗಿರಾಮನಗರಕ್ಕೆ ತೆರಳುವ ವೇಳೆ ಸಬ್ ಇನ್ಸ್‌ಪೆಕ್ಟರ್ ರಾಜ್‌ಶೇಖರ್ ಆರ್‌ಎಸ್‌ಎಸ್ ಸ್ವಯಂ ಸೇವಕನ ಮೇಲೆ ಹಿಗ್ಗಾಮುಗ್ಗ ಹಲ್ಲೆ ಮಾಡಿದ್ದಾರೆ. ಪ್ರತಾಪ್ ಮೇಲೆ ಪೊಲೀಸರು ಹಲ್ಲೆ ಮಾಡಿದ್ದು, ಪಾಸ್ ಇದ್ದರೂ ಹಲ್ಲೆ ನಡೆಸಲಾಗಿದೆ ಎಂದು ಆರೋಪ ಕೇಳಿ ಬಂದಿತ್ತು. ಜೊತೆಗೆ ಪೊಲೀಸ್ ವರ್ತನೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಪಬ್‌ಜಿ ಆಡಲು ಅಪ್ರಾಪ್ತ ಬಾಲಕನಿಂದ ಹುಸಿ ಬಾಂಬ್ ಕರೆ, 90 ನಿಮಿಷ ರೈಲು ಪರಿಶೀಲಿಸಿದ ಖಾಕಿ