ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ಅಧಿಕಾರಿಗಳಿಗೆ ಆಘಾತ ತಂದಿದೆ. ಶಾಲಾ ಆವರಣದಲ್ಲಿ ದೃಶ್ಯ ನೋಡಿ ತನಿಖಗೆ ಆದೇಶಿಸಿದ್ದಾರೆ.

ಲಕ್ನೋ: ಉತ್ತರ ಪ್ರದೇಶದ ಸಂಭಾಲ್‌ನ ಚಂದೌಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1.5 ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು. ಈ ಸಂಬಂಧ ಒತ್ತುವರಿ ತೆರವುಗೊಳಿಸಲು ಪುರಸಭೆ ಅಧಿಕಾರಿಗಳು ಪೊಲೀಸರ ಜೊತೆಯಲ್ಲಿಯೇ ಲಕ್ಷ್ಮಣ್ ಗಂಜ್ ಪ್ರದೇಶಕ್ಕೆ ಭೇಟಿ ನೀಡಿದ್ದರು. ಸಿಒ ಚಂದೌಸಿ ಅನುಜ್ ಚೌಧರಿ ಮತ್ತು ಎಸ್‌ಡಿಎಂ ವಿನಯ್ ಮಿಶ್ರಾ ನೇತೃತ್ವದಲ್ಲಿಯೇ ಒತ್ತುವರಿ ಕಾರ್ಯಾಚರಣೆ ನಡೆಸಲಾಗುತ್ತಿದೆ. 1.5 ಎಕರೆ ಒತ್ತುವರಿ ಪ್ರದೇಶದಲ್ಲಿ ರಜಾ-ಎ-ಮುಸ್ತಫಾ ಮಸೀದಿಯೊಂದು ಇರೋದರಿಂದ ಮುಂಜಾಗ್ರತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಒತ್ತುವರಿ ಪ್ರದೇಶಕ್ಕೆ ಅಧಿಕಾರಿಗಳು ಮತ್ತು ಪೊಲೀಸರು ಬುಲ್ಡೋಜರ್‌ನೊಂದಿಗೆ ಆಗಮಿಸಿದ್ದರು.

ತೆರವು ಕಾರ್ಯಾಚರಣೆಗೂ ಮುನ್ನ ಅಧಿಕಾರಿಗಳು ಸಿಒ ಚಂದೌಸಿ ಅನುಜ್ ಚೌಧರಿ ಮತ್ತು ಎಸ್‌ಡಿಎಂ ವಿನಯ್ ಮಿಶ್ರಾ ಒತ್ತುವರಿ ಪ್ರದೇಶವನ್ನು ಪರಿಶೀಲನೆ ನಡೆಸಿದರು. ಮಸೀದಿಯ ಸುತ್ತಲೂ ಇದ್ದ 33 ಅಕ್ರಮ ಮನೆಗಳಲ್ಲಿ ಜನರಿದ್ದಾರೆಯೇ ಎಂದು ಪರಿಶೀಲಿಸಿದರು. ತೆರವು ಕಾರ್ಯಾಚರಣೆಗೂ ಮುನ್ನವೇ 33 ಮನೆಗಳಿಗೆ ನೋಟಿಸ್ ನೀಡಲಾಗಿತ್ತು. ಈ ತೆರವುಗೊಳಿಸುವ ಕಾರ್ಯಾಚರಣೆಯ ಸಂದರ್ಭದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ,

ಇದೇ ಪುರಸಭೆಯ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾದ ಇಂಗ್ಲಿಷ್ ಮಾಧ್ಯಮ ಶಾಲೆಯ ಕಟ್ಟಡ ಸಿಒ ಅನುಜ್ ಚೌಧರಿ ಮತ್ತು ಎಸ್‌ಡಿಎಂ ವಿನಯ್ ಮಿಶ್ರಾ ಗಮನಕ್ಕೆ ಬಂದಿದೆ. ಶಾಲೆಯ ಗೇಟ್ ಮುಚ್ಚಿದ್ದರಿಂದ ಅಧಿಕಾರಿಗಳಿಗೆ ಅನುಮಾನ ಬಂದಿತ್ತು. ಪೊಲೀಸರೇ ಗೇಟ್ ಮುರಿದು ಒಳಗೆ ಪ್ರವೇಶಿದಾಗ ಒಂದು ಕ್ಷಣ ಅಚ್ಚರಿಗೊಳಗಾಗಿದ್ದರು. ಶಾಲೆಯೊಳಗಿನ ದೃಶ್ಯ ನೀಡಿ ಅಧಿಕಾರಿಗಳು ಒಂದು ಕ್ಷಣ ಶಾಕ್ ಆಗಿದ್ದರು.

ಶಾಲೆಯಲ್ಲಿ ಅಧಿಕಾರಿಗಳು ನೋಡಿದ ದೃಶ್ಯವೇನು?

ಅಧಿಕಾರಿಗಳು ಗೇಟ್ ತೆಗೆದು ಒಳಗೆ ಹೋದ್ರೆ ಇಂಗ್ಲಿಷ್ ಮಾಧ್ಯಮ ಶಾಲೆಯೊಳಗೆ ದಿನಸಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕ್ಲಾಸ್ ರೂಮ್‌ನಲ್ಲಿ ಹಸುವಿನ ಸಗಣಿ ಬಿದ್ದಿರುವುದನ್ನು ನೋಡಿ ಶಾಲೆಯೊಳಗೆ ಇದ್ದ ಪೊಲೀಸರು ಮತ್ತು ಆಡಳಿತ ಮಂಡಳಿಯವರು ಇನ್ನಷ್ಟು ಆಘಾತಕ್ಕೊಳಗಾದರು. ಕೂಡಲೇ ಶಾಲೆಯ ಆಡಳಿಯ ಮಂಡಳಿ ಸದಸ್ಯರಿಗೆ ಸ್ಥಳಕ್ಕೆ ಬರುವಂತೆ ಸೂಚಿಸಲಾಗಿತ್ತು.

ಪೊಲೀಸರ ಸೂಚನೆ ಮೇರೆಗೆ ಶಾಲೆಗೆ ದೌಡಾಯಿಸಿದ ಆಡಳಿತ ಮಂಡಳಿ ಸದಸ್ಯರು, ಇತ್ತೀಚೆಗೆ ಬಕ್ರೀದ್ ಹಬ್ಬ ಆಗಿದೆ. ಸ್ಥಳೀಯರು ಇಲ್ಲಿಗೆ ಬಂದು ಪ್ರಾಣಿ ವಧೆ ನೀಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಶಾಲೆ ಆವರಣದಲ್ಲಿ ಈ ರೀತಿ ಚಟುವಟಿಕೆ ನಡೆಸಲು ಅನುಮತಿ ನೀಡಿದ್ಯಾರು ಎಂದು ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಹಸುವಿನ ಸಗಣಿ ಪರೀಕ್ಷೆಗೆ ರವಾನೆ

ಶಾಲೆಯ ವಾತಾವರಣ ಗಮನಿಸಿದ ಸಿಒ ಅನುಜ್ ಚೌಧರಿ ಮತ್ತು ಎಸ್‌ಡಿಎಂ ವಿನಯ್ ಮಿಶ್ರಾ ಅವರು ಹಸುವಿನ ಸಗಣಿ ಬಗ್ಗೆ ತನಿಖೆಗೆ ಆದೇಶಿಸಿದರು. ಶಾಲೆಯೊಳಗೆ ಯಾವುದೇ ಹಸುವನ್ನು ಬಲಿ ನೀಡಲಾಗಿದೆಯೇ ಎಂದು ನೋಡಲು. ಪ್ರಸ್ತುತ, ಶಾಲಾ ನಿರ್ವಾಹಕರನ್ನು ಪ್ರಶ್ನಿಸಲಾಗುತ್ತಿದೆ ಮತ್ತು ಹಸುವಿನ ಸಗಣಿ ತನಿಖೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ.