Asianet Suvarna News Asianet Suvarna News

ಹೊಸ ಉತ್ತರ ಪ್ರದೇಶದ ಉದಯ, ಬಿಮಾರು ರಾಜ್ಯವೀಗ ಪ್ರಗತಿಗೆ ಮಾದರಿ.!

4 ವರ್ಷಗಳ ಹಿಂದಿನವರೆಗೆ ದೇಶ ಮತ್ತು ವಿದೇಶಗಳಲ್ಲಿ ಬಿಮಾರು (ಹಿಂದುಳಿದ) ರಾಜ್ಯವೆಂದು ಕರೆಯಲ್ಪಡುತ್ತಿದ್ದ ಉತ್ತರ ಪ್ರದೇಶ ಇಂದು ಇತರ ರಾಜ್ಯಗಳಿಗೆ ಪ್ರಗತಿಯ ಉದಾಹರಣೆಯಾಗಿ ನಿಂತಿದೆ. 

Uttar Pradesh Moving on path of Progress Bimaru to s samarth State Says CM Yogi hls
Author
Bengaluru, First Published Mar 21, 2021, 5:26 PM IST | Last Updated Mar 21, 2021, 5:50 PM IST

ನವದೆಹಲಿ (ಮಾ. 21): ಕಳೆದ ನಾಲ್ಕು ವರ್ಷಗಳಲ್ಲಿ ಉತ್ತರ ಪ್ರದೇಶದ 24 ಕೋಟಿ ಜನರಿಗೆ ನೀಡಿದ್ದ ಮಹತ್ವದ ವಾಗ್ದಾನಗಳನ್ನು ನಾವು ಪೂರ್ಣಗೊಳಿಸಿದ್ದೇವೆ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತಿದೆ. ಅಂತ್ಯೋದಯ, ಪ್ರಾಣ ಅಂತ್ಯೋದಯ, ಪಥ ಅಂತ್ಯೋದಯದ ಮೇಲೆ ನಮ್ಮ ಗುರಿ ಇತ್ತು. ರಾಜ್ಯ ಮತ್ತು ಅದರ ಜನರ ಯೋಗಕ್ಷೇಮಕ್ಕಾಗಿ ನಾವು ಈ 4 ವರ್ಷಗಳಲ್ಲಿ ಮಾಡಿರುವ ಸಮರ್ಪಿತ ಸೇವೆಯು ಭವಿಷ್ಯದಲ್ಲೂ ಉತ್ತಮ ಕೆಲಸಗಳನ್ನು ಮುಂದುವರೆಸಲು ಆತ್ಮಸ್ಥೈರ‍್ಯ ನೀಡಿದೆ. ಪ್ರಾಮಾಣಿಕ ಮತ್ತು ಶುದ್ಧ ಉದ್ದೇಶಗಳು ನಿಮ್ಮದಾಗಿದ್ದರೆ, ಅವುಗಳ ಬೆನ್ನತ್ತಿ ಹೋಗಲು ನಾವು ಸಿದ್ಧರಿದ್ದರೆ, ಉದಾತ್ತ ಗುರಿಗಳನ್ನು ಸಾಧಿಸುವುದು ಕಷ್ಟವೇನಲ್ಲ ಎಂಬುದು ನನ್ನ ಬಲವಾದ ನಂಬಿಕೆ.

ಕೊರೋನಾ ತಡೆಗೆ ಕಾರ‍್ಯತಂತ್ರ

ಕೊರೋನಾ ಸಾಂಕ್ರಾಮಿಕ ರೋಗದೊಂದಿಗಿನ ಕಾದಾಟಕ್ಕೆ ಒಂದು ವರ್ಷ ಕಳೆದಿದೆ. ಕಳೆದ ವರ್ಷ ಜನತಾ ಕಫä್ರ್ಯ ದಿನ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳು ಕರೆ ಮಾಡಿ, ಮಾರಣಾಂತಿಕ ವೈರಸ್‌ನಿಂದಾಗಿ ತೀವ್ರವಾಗುತ್ತಿರುವ ಬಿಕ್ಕಟ್ಟು ನಿವಾರಣೆಗೆ ರಾಜ್ಯದ ಸಿದ್ಧತೆ ಹೇಗಿದೆ ಎಂದು ಮಾಹಿತಿ ಪಡೆದಿದ್ದರು. ಕಡಿಮೆ ಆರೋಗ್ಯ ಮೂಲಸೌಕರ್ಯ, ವಿಪರೀತ ಜನಸಂಖ್ಯೆ ಮತ್ತು ಭೌಗೋಳಿಕ ವೈವಿಧ್ಯತೆ ಹೊಂದಿರುವ ಉತ್ತರ ಪ್ರದೇಶ ಸಾಂಕ್ರಾಮಿಕ ರೋಗವನ್ನು ಹೇಗೆ ನಿಭಾಯಿಸುತ್ತದೆ ಎಂಬ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದರು. ಆದರೆ ಅದೇನೇ ಇದ್ದರೂ ಉತ್ತರ ಪ್ರದೇಶ ವೈರಸ್‌ ತಡೆಗೆ ಕ್ರಮ ಕೈಗೊಳ್ಳುತ್ತದೆ ಎಂದು ನಾನು ಭರವಸೆ ನೀಡಿದ್ದೆ.

'ಬಿಜೆಪಿ ಜಗತ್ತಿನ ದೊಡ್ಡ ಸುಲಿಗೆಕೋರ ಪಕ್ಷ'

ನಂತರ ಅದೇ ರೀತಿ ನಡೆದುಕೊಂಡೆವು. ಪ್ರಧಾನಿ ನರೇಂದ್ರ ಮೋದಿಯವರ ‘ಪರೀಕ್ಷೆ ಮತ್ತು ಪತ್ತೆಹಚ್ಚುವಿಕೆ’ ಮಂತ್ರವನ್ನು ಕಟ್ಟುನಿಟ್ಟಾಗಿ ಅನುಸರಿಸಿದೆವು. ಒಂದು ಕಡೆ ವೈರಸ್‌ ನಿಗ್ರಹ, ಇನ್ನೊಂದೆಡೆ ಜೀವ ಮತ್ತು ಜೀವನೋಪಾಯವನ್ನು ಉಳಿಸಲು ಕಾರ್ಯತಂತ್ರವನ್ನು ಹಣೆದೆವು. ಕೊರೋನಾ ಬಿಕ್ಕಟ್ಟಿನಲ್ಲಿ ರಾಜ್ಯದ ನಿವಾಸಿಗಳು ಮತ್ತು ವಲಸಿಗರೆನ್ನದೆ ಎಲ್ಲರ ಯೋಗಕ್ಷೇಮ ನೋಡಿಕೊಂಡೆವು. ರಾಜ್ಯದಿಂದ ಮಹಾನಗರಗಳಿಗೆ ಉದ್ಯೋಗ ಅರಸಿ ವಲಸೆ ಬಂದ ಕಾರ್ಮಿಕರು ಎದುರಿಸುವ ಸಮಸ್ಯೆಗಳ ಬಗ್ಗೆ ಸೂಕ್ಷ್ಮತೆ ಹೊಂದಿದ್ದ ನಾವು, ಈ ನಿಟ್ಟಿನಲ್ಲಿ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅವರಿಗೆ ಸಹಾಯ ಮಾಡಲು ಪ್ರಯತ್ನಿಸಿದೆವು.

ಉತ್ತರ ಪ್ರದೇಶ ನಿವಾಸಿಗಳ ಅಗತ್ಯಗಳನ್ನು ಮೇಲ್ವಿಚಾರಣೆ ಮಾಡುವಾಗ ಮತ್ತು ಅಗತ್ಯ ವಸ್ತುಗಳನ್ನು ಪೂರೈಸುವಾಗ ಇತರ ರಾಜ್ಯಗಳ ಕಾರ್ಮಿಕರಿಗೂ ನೆರವಾದೆವು. ಈ ಸಾಂಕ್ರಾಮಿಕ ರೋಗದ ವಿರುದ್ಧ ಸಮಾಜದ ಪ್ರತಿಯೊಂದು ವರ್ಗದವರೂ ಒಗ್ಗಟ್ಟಿನಿಂದ ಹೋರಾಡಿದರು ಎಂದು ಹೇಳುವುದು ಇಂದು ನನಗೆ ಅಪಾರ ತೃಪ್ತಿ ನೀಡುತ್ತದೆ. ಉತ್ತರ ಪ್ರದೇಶ ಕೋವಿಡ್‌ ನಿರ್ವಹಣೆಗೆ ಜಾಗತಿಕ ಪ್ರಶಂಸೆ ಪಡೆದಿದೆ.

ಸ್ವಾವಲಂಬಿ ಉತ್ತರ ಪ್ರದೇಶ

ದೇಶದ ಆರ್ಥಿಕತೆಯನ್ನು 5 ಟ್ರಿಲಿಯನ್‌ ಡಾಲರ್‌ಗೆ ಹೆಚ್ಚಿಸುವ ಉದಾತ್ತ ಗುರಿಯನ್ನು ಪ್ರಧಾನಿ ಹಾಕಿಕೊಂಡಿದ್ದಾರೆ. ಅದಕ್ಕಾಗಿ ಸ್ವಾವಲಂಬನೆಯ ಮಂತ್ರ ಪಠಿಸುತ್ತಿದ್ದಾರೆ. ಈ ಗುರಿಯ ಸಾಧನೆಗೆ ಉತ್ತರ ಪ್ರದೇಶ ಗಣನೀಯ ಕೊಡುಗೆ ನೀಡಲು ಬದ್ಧವಾಗಿದೆ. ಮೋದಿ ಕನಸನ್ನು ಸಾಕಾರಗೊಳಿಸುವಲ್ಲಿ ಉತ್ತರ ಪ್ರದೇಶ ಗಣನೀಯ ಪಾತ್ರ ವಹಿಸುತ್ತದೆ.

ಉದಾಹರಣೆಗೆ ಬುಂದೇಲ್‌ಖಂಡ್‌ನ ಮಹಿಳೆಯರು ರಚಿಸಿರುವ ಬಲಿನೀ ಹಾಲು ಉತ್ಪಾದಕರ ಗುಂಪು ಹಾಲಿನ ಉತ್ಪಾದನೆಯಲ್ಲಿ ವಾರ್ಷಿಕ 46 ಕೋಟಿ ರು. ವಹಿವಾಟು ಮತ್ತು ಸಾಂಕ್ರಾಮಿಕ ರೋಗದ ನಡುವೆಯೂ 2 ಕೋಟಿ ರು. ಲಾಭ ಗಳಿಸಿ ಇಂಥ ಸಂಘಗಳಿಗೆ ಪ್ರೇರಣೆಯಾಗಿದೆ. ರಾಜ್ಯದ ಯುವಕರು ಮತ್ತು ಮಹಿಳೆಯರ ಇಂಥ ನವೀನ ಪ್ರಯತ್ನಗಳು ‘ಸ್ವಾವಲಂಬಿ ಉತ್ತರ ಪ್ರದೇಶ’ದ ಕನಸನ್ನು ನನಸಾಗಿಸಲು ಅಡಿಪಾಯವಾಗುತ್ತಿವೆ.

ಚೀನಾ ಸೇನೆಯಿಂದ ಟೆಸ್ಲಾ ಕಾರಿಗೆ ನಿರ್ಬಂಧ : ಡ್ರ್ಯಾಗನ್ ನಡೆಗೆ ಸವಾಲೆಸೆದ ಮಸ್ಕ್!

ತಲಾ ಆದಾಯ ಹೆಚ್ಚಳ

ಉತ್ತರ ಪ್ರದೇಶ ಸ್ವಾವಲಂಬನೆಯತ್ತ ವೇಗವಾಗಿ ಸಾಗುತ್ತಿರುವುದರಿಂದ ಕೇವಲ 4 ವರ್ಷಗಳಲ್ಲಿ 40 ಲಕ್ಷ ಕುಟುಂಬಗಳಿಗೆ ವಸತಿ ದೊರೆತಿದೆ. 1.38 ಕೋಟಿ ಕುಟುಂಬಗಳಿಗೆ ವಿದ್ಯುತ್‌ ಸೌಲಭ್ಯ ದೊರೆತಿದೆ. ಗ್ರಾಮಾಂತರ ಪ್ರದೇಶದಲ್ಲಿ ಆಪ್ಟಿಕಲ್‌ ಫೈಬರ್‌ ಕೇಬಲ್‌ ಹಾಕುವುದು ಒಂದು ರೀತಿಯ ಯದ್ಧವೇ ಸರಿ. ರಾಜ್ಯದ ಕ್ಷಿಪ್ರ ಪ್ರಗತಿಗೆ ಆಧಾರವೆಂದರೆ ವಿಶ್ವ ದರ್ಜೆಯ ಸಂಪರ್ಕವನ್ನು ಸಾಧಿಸುವ ನಮ್ಮ ದೃಢನಿಶ್ಚಯ. ಅಲ್ಲದೆ ಭ್ರಷ್ಟಾಚಾರ ನಿಗ್ರಹ, ಪಾರದರ್ಶಕ ಮತ್ತು ಸ್ಪಷ್ಟಕೆಲಸದ ಸಂಸ್ಕೃತಿ, ಬಲವಾದ ಕಾನೂನು ಹಾಗೂ ಸುವ್ಯವಸ್ಥೆ ಹಾಗೂ ಅಭಿವೃದ್ಧಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿದ್ದೇವೆ.

ಈ ಎಲ್ಲಾ ಕಾರಣಗಳಿಂದಾಗಿ ಉತ್ತರ ಪ್ರದೇಶ ಇಂದು ಹೂಡಿಕೆದಾರರ ಮೊದಲ ಆಯ್ಕೆಯಾಗಿದೆ. ನಾಲ್ಕು ವರ್ಷಗಳಲ್ಲಿ ‘ಈಸ್‌ ಆಫ್‌ ಡೂಯಿಂಗ್‌ ಬಿಸಿನೆಸ್‌’ ರಾಷ್ಟ್ರೀಯ ಶ್ರೇಯಾಂಕದಲ್ಲಿ ಉತ್ತರಪ್ರದೇಶ ದೇಶದಲ್ಲೇ 2ನೇ ಸ್ಥಾನ ಪಡೆದುಕೊಂಡಿದೆ. ಇದೇನು ಸುಲಭದ ಕೆಲಸ ಅಲ್ಲ. 2015-16ನೇ ಸಾಲಿನಲ್ಲಿ ರಾಜ್ಯದ ತಲಾ ಆದಾಯ ಕೇವಲ 47,116 ರು. ಇತ್ತು. ಅದೀಗ 94,945ಕ್ಕೆ ಏರಿಕೆಯಾಗಿದೆ. ಜಿಎಸ್‌ಡಿಪಿ ಆಧಾರದ ಮೇಲೆ ಉತ್ತರ ಪ್ರದೇಶ ಇಂದು ದೇಶದ ಎರಡನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.

ಅಯೋಧ್ಯೆಯಲ್ಲಿ ರಾಮಸೇತು ಶೂಟಿಂಗ್: ಸಿಎಂ ಯೋಗಿಯನ್ನು ಭೇಟಿಯಾದ ಅಕ್ಷಯ್

ನಾಲ್ಕು ವರ್ಷಗಳ ಹಿಂದೆ ಸರ್ಕಾರದ ಸಾರ್ವಜನಿಕ ಕಲ್ಯಾಣ ಕಾರ‍್ಯಕ್ರಮವು ರೈತರ ಕೃಷಿ ಸಾಲವನ್ನು ಮನ್ನಾ ಮಾಡುವುದರೊಂದಿಗೆ ಆರಂಭವಾಯಿತು. ಮೊಟ್ಟಮೊದಲ ಸಂಪುಟದಲ್ಲಿಯೇ ಸಣ್ಣ ಮತ್ತು ಅತಿ ಸಣ್ಣ ರೈತರ ಸಾಲವನ್ನು ಮನ್ನಾ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿತು. ಇಂದು ಇಲ್ಲಿನ ರೈತರು ಸುಧಾರಿತ ತಂತ್ರಜ್ಞಾನವನ್ನು ಕೃಷಿಯಲ್ಲಿ ಅಳವಡಿಸಿಕೊಂಡು ಕೃಷಿ ವೈವಿಧ್ಯತೆಯತ್ತ ಗಮನಹರಿಸುತ್ತಿದ್ದಾರೆ. ಕೃಷಿಕರ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಆದಾಯ ದ್ವಿಗುಣ ಮಾಡಲು ಇರುವ ಯಾವುದೇ ಅವಕಾಶವನ್ನೂ ಸರ್ಕಾರ ವ್ಯರ್ಥ ಮಾಡುವುದಿಲ್ಲ. ಹಾಗಾಗಿಯೇ ದಶಕಗಳಿಂದ ಬಾಕಿ ಉಳಿದಿದ್ದ ಹಲವಾರು ನೀರಾವರಿ ಯೋಜನೆಗಳನ್ನು ರಾಜ್ಯ ಸರ್ಕಾರ ಪೂರ್ಣಗೊಳಿಸಿದೆ. ನಾವು ಇಲ್ಲಿಯವರೆಗೆ ಕಬ್ಬು ಬೆಳೆಗಾರರಿಗೆ ದಾಖಲೆಯ 1.27 ಲಕ್ಷ ಕೋಟಿ ರು. ನೀಡಿದ್ದೇವೆ. ರೈತರ ಭರವಸೆ ಮತ್ತು ಸಮೃದ್ಧಿಯೇ ನಮ್ಮ ಆದ್ಯತೆ.

ಜಾತಿ, ಧರ್ಮದ ತಾರತಮ್ಯ ಇಲ್ಲ

ಆರ್ಥಿಕತೆ ಮತ್ತು ನಂಬಿಕೆಯ ದೃಷ್ಟಿಯಿಂದ ನಮ್ಮ ನೀತಿಗಳು ಸ್ಪಷ್ಟವಾಗಿವೆ. ನಂಬಿಕೆ ಮತ್ತು ಆರ್ಥಿಕತೆ ಎರಡರ ಉದ್ದೇಶಗಳನ್ನೂ ಈಡೇರಿಸಲು ‘ಗಂಗಾ ಯಾತ್ರೆ’ ಸಹಾಯ ಮಾಡಿತು. ಅದೇ ರೀತಿ 2020ರಲ್ಲಿ ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲಿ ಬಹುನಿರೀಕ್ಷಿತ ಭವ್ಯ ರಾಮ ಮಂದಿರ ಕಟ್ಟಲು ಅಡಿಪಾಯ ಹಾಕಲಾಯಿತು. ಅಯೋಧ್ಯೆಯನ್ನು ಜಾಗತಿಕ ವೇದಿಕೆಯಲ್ಲಿ ವೈದಿಕ ಮತ್ತು ಆಧುನಿಕ ಸಂಸ್ಕೃತಿಗಳ ಕೇಂದ್ರವಾಗಿ ಅಭಿವೃದ್ಧಿಪಡಿಸುವುದು ಉತ್ತರ ಪ್ರದೇಶ ಸರ್ಕಾರದ ಉದ್ದೇಶ.

ಭಗವಂತ ಶ್ರೀರಾಮನ ಆಶೀರ್ವಾದದಿಂದ ಈ ಪ್ರಯತ್ನವೂ ಯಶಸ್ವಿಯಾಗುತ್ತದೆ. ಮೋದಿ ಅವರು ‘ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌’ ಮಾರ್ಗವನ್ನು ಹಾಕಿಕೊಟ್ಟಿದ್ದಾರೆ. ಅದರಂತೆ ನಾವು ನಡೆಯುತ್ತಿದ್ದೇವೆ. ನಮ್ಮ ರಾಜಕೀಯ ವಿರೋಧಿಗಳೂ ಕಳೆದ ನಾಲ್ಕು ವರ್ಷಗಳಲ್ಲಿ ಜಾತಿ ಅಥವಾ ಧರ್ಮದ ಆಧಾರದ ಮೇಲೆ ರಾಜ್ಯ ಸರ್ಕಾರವು ತಾರತಮ್ಯ ಮಾಡಿದ ಒಂದು ಪ್ರಕರಣವೂ ನಡೆದಿಲ್ಲ ಎಂದು ಹೇಳುತ್ತಾರೆ. ಕೆಲ ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ಇಂಥ ಸಾಧ್ಯತೆ ಇದೆ ಎಂದರೂ ಕೆಲವರು ಅಪಹಾಸ್ಯ ಮಾಡುತ್ತಿದ್ದರು.

ಹೊಸ ಉತ್ತರ ಪ್ರದೇಶದ ಉದಯ

ನಮ್ಮ ದೃಢನಿಶ್ಚಯದಿಂದಾಗಿ ಉತ್ತರ ಪ್ರದೇಶದ ಕನಸು ಇಂದು ನನಸಾಗುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಹೊಸ ಭಾರತದ ಹೊಸ ಉತ್ತರ ಪ್ರದೇಶ ಹೊರಹೊಮ್ಮಿದೆ. ನಾಲ್ಕು ವರ್ಷಗಳ ಹಿಂದೆ ದೇಶ ಮತ್ತು ವಿದೇಶಗಳಲ್ಲಿ ಬಿಮಾರು (ಹಿಂದುಳಿದ) ರಾಜ್ಯವೆಂದು ಕರೆಯಲ್ಪಟ್ಟಿದ್ದ ರಾಜ್ಯ ಇಂದು ಇತರ ರಾಜ್ಯಗಳಿಗೆ ಪ್ರಗತಿಯ ಉದಾಹರಣೆಯಾಗಿ ನಿಂತಿದೆ. ರಾಜ್ಯ ಒಂದೇ, ಕಾರ್ಮಿಕರೂ ಅವರೇ, ಸಂಪನ್ಮೂಲವೂ ಅದೇ, ಆದರೆ ಕೆಲಸದ ಸಂಸ್ಕೃತಿ ಬದಲಾಗಿದೆ. ಬದ್ಧತೆ ಮತ್ತು ಪಾರದರ್ಶಕ ಸಂಸ್ಕೃತಿ ಈ ಹೊಸ ಉತ್ತರ ಪ್ರದೇಶದ ಹಾಲ್‌ಮಾರ್ಕ್. ಎಷ್ಟೇ ದೊಡ್ಡ ಸವಾಲುಗಳಿದ್ದರೂ, ರಸ್ತೆ ಎಷ್ಟೇ ಕಠಿಣವಾಗಿದ್ದರೂ ರಾಜ್ಯದ ಜನರ ಹಿತದೃಷ್ಟಿಯಿಂದ ಈ ಪ್ರಯಾಣ ಮುಂದುವರಿಯುತ್ತದೆ.

Latest Videos
Follow Us:
Download App:
  • android
  • ios