ಬಿಜೆಪಿ ಜಗತ್ತಿನಲ್ಲೇ ಅತ್ಯಂತ ಸುಲಿಗೆಕೋರ ಪಕ್ಷ| ರಾಜ್ಯವನ್ನು ಆಳಲು ಅವಕಾಶ ನೀಡಲೇಬಾರದು| ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿ

ಕೋಲ್ಕತಾ(ಮಾ.21): ಬಿಜೆಪಿ ಜಗತ್ತಿನಲ್ಲೇ ಅತ್ಯಂತ ಸುಲಿಗೆಕೋರ ಪಕ್ಷ, ಅದಕ್ಕೆ ರಾಜ್ಯವನ್ನು ಆಳಲು ಅವಕಾಶ ನೀಡಲೇಬಾರದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಕಿಡಿಕಾರಿದರು.

ಇಲ್ಲಿನ ಹಲ್ದಿಯಾದಲ್ಲಿ ಚುನಾವಣಾ ರಾರ‍ಯಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕೇಸರಿ ಪಕ್ಷ ಗಲಭೆಕೋರರ ಪಕ್ಷ. ಅದು ಜನರನ್ನು ಕೊಂದು ದಲಿತ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತದೆ. ಹಾಗೇ ಅದೊಂದು ದೊಡ್ಡ ಸುಲಿಗೆಕೋರ ಪಕ್ಷ. ನೀವೇ ನೋಡಿ ಪಿಎಂ ಕೇ​ರ್‍ಸ್ ನಿಧಿ ಅಡಿಯಲ್ಲಿ ಅದು ಎಷ್ಟುಹಣ ಸಂಗ್ರಹಿಸಿದೆ. ಕೋವಿಡ್‌ ನಿರ್ವಹಣೆಯಲ್ಲಿ ಮೋದಿ ಹಣ ಲೂಟಿ ಹೊಡೆದಿದ್ದಾರೆ.ಬಂಗಾಳದ ಜನರಿಗೆ ಶಾಂತಿ ಬೇಕಿದ್ದರೆ ರಾಜ್ಯ ಗಲಭೆಕೋರರಿಂದ ಮುಕ್ತವಾಗಿರಬೇಕು. ಹಾಗಾಗಿ ಟಿಎಂಸಿ ಒಂದೇ ಜನರ ಮುಂದಿರುವ ಆಯ್ಕೆ’ ಎಂದು ಹೇಳಿದರು.

ಇದೇ ವೇಳೆ ಖೇಜೂರಿ ರಾರ‍ಯಲಿ ಸಂದರ್ಭದಲ್ಲಿ ಚುನಾವಣೆ ವೇಳೆ, ‘ದ್ರೋಹಿಗಳು ಪಕ್ಷವನ್ನು ತ್ಯಜಿಸಿ ಟಿಎಂಸಿಯನ್ನು ಉಳಿಸಿದರು’ ಎಂದು ಬಿಜೆಪಿ ಸೇರಿರುವ ಸುವೇಂದು ಅಧಿಕಾರಿ ವಿರುದ್ಧ ತಿರುಗೇಟು ನೀಡಿದರು.