ಗೂಢಚರ್ಯೆ: ಚೀನಾ ಸೇನೆಯಿಂದ ಟೆಸ್ಲಾ ಕಾರಿಗೆ ನಿರ್ಬಂಧ| ಗೂಢಚರ್ಯೆ ಮಾಡುತ್ತಿದ್ದರೆ ಕಂಪನಿಯನ್ನೇ ಮುಚ್ಚುವೆ: ಮಸ್ಕ್ ಸವಾಲು
ಬೀಜಿಂಗ್(ಮಾ.21): ಟೆಸ್ಲಾ ಕಂಪನಿಯ ಕಾರುಗಳು ಬೇಹುಗಾರಿಕೆ ನಡೆಸುತ್ತಿವೆ ಎಂಬ ಆರೋಪದ ಮೇಲೆ ಅವುಗಳನ್ನು ನಿಷೇಧಿಸಿರುವ ಚೀನಾದ ಸೇನಾಪಡೆಗೆ ತೀಕ್ಷ$್ಣ ತಿರುಗೇಟು ನೀಡಿರುವ ಟೆಸ್ಲಾ ಇಂಕ್‌ನ ಸಿಇಒ ಇಲಾನ್ ಮಸ್ಕ್, ಇದು ನಿಜವಾದರೆ ತನ್ನ ಕಂಪನಿಯನ್ನೇ ಮುಚ್ಚಿಬಿಡುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಅಮೆರಿಕ ಮೂಲದ ಅತ್ಯಾಧುನಿಕ ಟೆಸ್ಲಾ ಕಾರುಗಳಲ್ಲಿ ಹಲವು ರೀತಿಯ ಕ್ಯಾಮರಾಗಳೂ ಸೇರಿದಂತೆ ಅನೇಕ ಎಲೆಕ್ಟ್ರಾನಿಕ್ ಉಪಕರಣಗಳಿರುತ್ತವೆ. ಇವುಗಳನ್ನು ಬಳಸಿ ಅಮೆರಿಕ ನಮ್ಮ ಮೇಲೆ ಗೂಢಚರ್ಯೆ ನಡೆಸುತ್ತಿದೆ ಎಂಬ ಅನುಮಾನದ ಮೇಲೆ ಚೀನಾದ ಸೇನಾಪಡೆ ತನ್ನೆಲ್ಲಾ ಕಚೇರಿಗಳ ಆವರಣಕ್ಕೆ ಟೆಸ್ಲಾ ಕಾರುಗಳ ಪ್ರವೇಶವನ್ನು ನಿಷೇಧಿಸಿದೆ. ಈ ಕುರಿತು ಚೀನಾ ಡೆವಲಪ್‌ಮೆಂಟ್ ಫೋರಂ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿರುವ ಇಲಾನ್ ಮಸ್ಕ್, ‘ರಹಸ್ಯ ವಿಷಯಗಳನ್ನು ನಾವು ಯಾವಾಗಲೂ ರಹಸ್ಯವಾಗಿಯೇ ಇರಿಸುತ್ತೇವೆ.
ಹೀಗಿರುವಾಗ ಚೀನಾ ಅಥವಾ ಎಲ್ಲೇ ಆಗಲಿ ಟೆಸ್ಲಾ ಕಾರುಗಳು ಬೇಹುಗಾರಿಕೆ ನಡೆಸುತ್ತಿವೆ ಎಂಬದನ್ನು ಸಾಬೀತುಪಡಿಸಿದರೆ ನಮ್ಮ ಕಂಪನಿಯನ್ನೇ ಮುಚ್ಚಿಬಿಡುತ್ತೇನೆ’ ಎಂದು ಸವಾಲು ಹಾಕಿದರು.
