ಬಿಪಿಎಲ್ ರೇಷನ್ ಕಾರ್ಡ್‌ನವರಿಗೆ ಅಕ್ಕಿ, ಗೋಧಿ, ರಾಗಿ ಜೊತೆಗೆ ಕಾಂಡೋಮ್ ಉಚಿತ!
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಕೇಂದ್ರ ಸರ್ಕಾರ ಉಚಿತ ಅಕ್ಕಿ ನೀಡುತ್ತಿದೆ. ಇದರ ಜೊತೆಗೆ ಆಯಾ ರಾಜ್ಯದಲ್ಲಿ ಹೆಚ್ಚುವರಿಯಾಗಿ ಇತರ ಬೇಳೆ ಸೇರಿದಂತೆ ಕೆಲ ಆಹಾರ ಸಾಮಾಗ್ರಿಗಳನ್ನು ನೀಡಲಾಗುತ್ತದೆ. ಇದೀಗ ಬಿಪಿಎಲ್ ಕಾರ್ಡು ಹೊಂದಿದವರಿಗೆ ಅಕ್ಕಿ, ರಾಗಿ, ಗೋಧಿ ಜೊತೆಗೆ ಕಾಂಡೋಮ್ ಕೂಡ ಉಚಿತವಾಗಿ ಸಿಗಲಿದೆ.
ಲಖನೌ(ಮೇ.12) ಭಾರತದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸರ್ಕಾರ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಈ ಪೈಕಿ ಪ್ರತಿ ತಿಂಗಳು ಉಚಿತ ಅಕ್ಕಿ, ಬೇಳೆ ಕಾಳು, ಗೋಧಿ, ರಾಗಿ ಸೇರಿದಂತೆ ಹಲವು ಆಹಾರ ಸಾಮಾಗ್ರಿಗಳನ್ನು ಪ್ರತಿ ತಿಂಗಳು ನೀಡಲಾಗುತ್ತದೆ. ಬಡತನ ರೇಖೆಗಿಂತ ಕೆಳಿಗಿರುವ ಕುಟುಂಬಗಳಿಗೆ ಬಿಪಿಎಲ್ ರೇಷನ್ ಕಾರ್ಡ್‌ನಡಿ ಇದೀಗ ಬರೋಬ್ಬರಿ 46 ವಸ್ತುಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಅಕ್ಕಿ, ರಾಗಿ, ಗೋಧಿ, ಶ್ಯಾಂಪು, ಸೋಪು, ಮಸಾಲೆ ಸೇರಿದಂತೆ 46 ವಸ್ತುಗಳಲ್ಲಿ ಕಾಂಡೋಮ್ ಕೂಡ ನೀಡಲಾಗುತ್ತದೆ. ಅಂದ ಹಾಗೆ ಈ 46 ಉಚಿತ ಯೋಜನೆ ಜಾರಿಯಾಗಿರುವುದು ಉತ್ತರ ಪ್ರದೇಶದಲ್ಲಿ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಹೊಸ ಯೋಜನೆ ಜಾರಿ ಮಾಡಿದೆ. ಬಡತನ ರೇಖೆಗೆಗಿಂತ ಕೆಳಗಿರುವ ಕುಟುಂಬಗಳಿಗೆ ಆಹಾರ ಜೊತೆ ಆರೋಗ್ಯ ಸುವಿಧಾ ನೀಡಲು ನಿರ್ಧರಿಸಿದೆ. ಬಡ ಕುಟುಂಬಗಳಲ್ಲಿ ಗುಣಮಟ್ಟದ ಆಹಾರ ಹಾಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಆರ್ಥಿಕ ಶಕ್ತಿ ಕೊರತೆ ಇದೆ. ಹೀಗಾಗಿ ಯೋಗಿ ಸರ್ಕಾರ ಇದೀಗ ಅಕ್ಕಿ, ಗೋಧಿ, ಬೇಳೆ ಕಾಳು, ಮಸಾಲೆಗಳ ಜೊತೆಗೆ ಸ್ಯಾನಿಟರಿ ಪ್ಯಾಡ್, ಕಾಂಡೋಮ್ ಸೇರಿದಂತೆ ಆರೋಗ್ಯ ಕಾಪಾಡಿಕೊಳ್ಳುವ ವಸ್ತುಗಳನ್ನು ಉಚಿತವಾಗಿ ನೀಡಲಿದೆ.
ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಸಂತಸದ ಸುದ್ದಿ..!
ವಿಶೇಷ ಅಂದರೆ ಡ್ರೈ ಫ್ರ್ಯೂಟ್ಸ್ ಕೂಡ ಉಚಿತವಾಗಿ ನೀಡಲಾಗುತ್ತದೆ. ಸಿಹಿ ತಿಂಡಿ, ಹಾಲಿನ ಪುಡಿ ಸೇರಿದಂತೆ ಹಲವು ಆಹಾರ ಸಾಮಾಗ್ರಿ, ಬೇಳೆ ಕಾಳುಗಳನ್ನು ಉಚಿತವಾಗಿ ನೀಡಲಾಗುತ್ತದೆ. ಇದರ ಜೊತೆಗೆ 5ಕೆಜಿ ಸಿಲಿಂಡರ್ ಗ್ಯಾಸ್ ಕೂಡ ಉಚಿತವಾಗಿ ನೀಡಲು ಯುಪಿ ಸರ್ಕಾರ ನಿರ್ಧರಿಸಿದೆ. ಪುಟ್ಟ ಕಂದಮ್ಮಗಳಿಗೆ ಬಟ್ಟೆಗಳನ್ನು ಉಚಿತವಾಗಿ ನೀಡಲು ಪಟ್ಟಿ ಮಾಡಲಾಗಿದೆ.
ಟೂತ್ ಬ್ರಷ್, ಬಾಚಣಿಗೆ, ಕನ್ನಡಿ, ದೂಪದ್ರವ್ಯ, ಗೋಡೆ ಗಡಿಯಾರ, ಪೊರಕೆ, ರೈನ್ ಕೋಟ್, ನೀರಿನ ಪೈಪ್ ಹೀಗೆ ಒಟ್ಟು 46 ವಸ್ತುಗಳು ಬಿಪಿಎಲ್ ಕಾರ್ಡುದಾರರಿಗೆ ಸಿಗಲಿದೆ.ಯುಪಿಯ ಹೊಸ ಯೋಜನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಚುನಾವಣಾ ನೀತಿ ಸಂಹಿತೆ ಬಳಿಕ ಈ ಯೋಜನೆಗಳು ಜಾರಿಯಾಗುವ ಸಾಧ್ಯತೆ ಇದೆ.
ಅನ್ನಭಾಗ್ಯದ 6 ಸಾವಿರ ಕ್ವಿಂಟಾಲ್ ಅಕ್ಕಿಯೇ ಮಾಯ..! 6 ತಿಂಗಳಲ್ಲಿ ಎರಡನೇ ಬಾರಿ ನಡೆಯಿತು ಕಳ್ಳತನ..!
ಕೇಂದ್ರ ಸರ್ಕಾರ ಕೋವಿಡ್ ಕಾಲದಿಂದ ದೇಶದ 80ಕೋಟಿಗೂ ಅದಿಕ ಮಂದಿಗೆ ಉಚಿತ ಪಡಿತರ ನೀಡುತ್ತಿದೆ. ಕೋರಾನ ಸಂದರ್ಭದಲ್ಲಿ 10 ಕೆಜಿ ಅಕ್ಕಿ ನೀಡುತ್ತಿದ್ದರೆ, ಇದೀಗ 5 ಕೆಜಿ ಅಕ್ಕಿ ನೀಡುತ್ತಿದೆ.