ಲಖನೌ (ಅ.23) : ಪೊಲೀಸ್‌ ಇಲಾಖೆಯ ಅನುಮತಿ ಇಲ್ಲದೆ ಉದ್ದವಾಗಿ ಗಡ್ಡ ಬಿಟ್ಟಕಾರಣ ಉತ್ತರ ಪ್ರದೇಶದಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಒಬ್ಬರನ್ನು ಅಮಾನತು ಮಾಡಲಾಗಿದೆ. 

ಪೊಲೀಸ್‌ ಅಧಿಕಾರಿ ಇಂತೆಸರ್‌ ಆಲಿ ಎಂಬವರಿಗೆ ದಾಡಿಯನ್ನು ಶೇವ್‌ ಮಾಡಿಕೊಳ್ಳುವಂತೆ ಅಥವಾ ಅನುಮತಿ ಪಡೆಯುವಂತೆ ಮೂರು ಬಾರಿ ಎಚ್ಚರಿಸಲಾಗಿತ್ತು. 

ಆದಾಗ್ಯೂ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಗ್ಪತ್‌ ಪೊಲೀಸ್‌ ವರಿಷ್ಠಾಧಿಕಾರಿ ಅಭಿಷೇಕ್‌ ಸಿಂಗ್‌, ‘ಪೊಲೀಸ್‌ ನಿಯಮಗಳ ಅನುಸಾರ ಸಿಖ್‌ ಧರ್ಮೀಯ ಪೊಲೀಸ್‌ ಸಿಬ್ಬಂದಿಗಳಿಗೆ ಮಾತ್ರ ದಾಡಿ ಬಿಡಲು ಅನುಮತಿ ಇದೆ. ಅದರ ಹೊರತಾಗಿ ಬೇರೆಯವರು ವಿಶೇಷ ಅನುಮತಿ ಪಡೆಯಬೇಕಾಗುತ್ತದೆ. 

IPL 2020: ಹೊಸ ಲುಕ್‌ನಲ್ಲಿ ಕಾಣಿಸಿಕೊಂಡ ಧೋನಿಗೆ ಸಿಂಗಂ ಹೆಸರಿಟ್ಟ ಫ್ಯಾನ್ಸ್!

ಆದರೆ ಇಂತೆಸರ್‌ ಆಲಿ ಅವರು ಪದೇ ಪದೇ ಎಚ್ಚರಿಸಿದ ಹೊರತಾಗಿಯೂ ನಿರ್ಲಕ್ಷ್ಯ ತೋರಿದ್ದರು’ ಎಂದಿದ್ದಾರೆ. ಕಳೆದ ಮೂರು ವರ್ಷಗಳಿಂದ ಆಲಿ ಬಾಗ್ಪತ್‌ನ ಸಬ್‌ ಇನ್‌ಸ್ಪೆಕ್ಟರ್‌ ಆಗಿ ಕಾರ‍್ಯನಿರ್ವಹಿಸುತ್ತಿದ್ದಾರೆ.