Asianet Suvarna News Asianet Suvarna News

ರಕ್ಷಾ ಬಂಧನಕ್ಕೆ ಸೋದರಿಯರಿಗೆ ಯೋಗಿ ಆದಿತ್ಯನಾಥ್‌ ಸರ್ಕಾರದ ಗಿಫ್ಟ್‌: ಉಚಿತ ಬಸ್‌ ಪ್ರಯಾಣ ಘೋಷಣೆ

ಉತ್ತರ ಪ್ರದೇಶ ಸರ್ಕಾರವು ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಸೇವೆಯನ್ನು ಘೋಷಿಸಿದೆ. ರಾಜ್ಯದ 14 ಜಿಲ್ಲೆಗಳಲ್ಲಿ ಮಹಿಳೆಯರು ಆಗಸ್ಟ್ 30 ಮತ್ತು 31 ರಂದು ಸಿಟಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ತಿಳಿದುಬಂದಿದೆ. 

uttar pradesh government announces free bus travel for women on raksha bandhan ash
Author
First Published Aug 26, 2023, 7:23 PM IST | Last Updated Aug 26, 2023, 7:23 PM IST

ನವದೆಹಲಿ (ಆಗಸ್ಟ್‌ 26, 2023): ಭಾರತದಲ್ಲಿ ರಕ್ಷಾಬಂಧನ ಪ್ರಮುಖ ಹಬ್ಬಗಳಲ್ಲೊಂದಾಗಿದ್ದು, ಸಹೋದರ ಸಹೋದರಿಯರ ನಡುವಿನ ಬಾಂಧವ್ಯವನ್ನು ಆಚರಿಸುವ ಹಬ್ಬವಾಗಿದೆ. ಈ ಹಿನ್ನೆಲೆ ರಕ್ಷಾ ಬಂಧನದ ಉಡುಗೊರೆಯಾಗಿ, ಉತ್ತರ ಪ್ರದೇಶ ಸರ್ಕಾರವು ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಸೇವೆಯನ್ನು ಘೋಷಿಸಿದೆ. ರಾಜ್ಯದ 14 ಜಿಲ್ಲೆಗಳಲ್ಲಿ ಮಹಿಳೆಯರು ಆಗಸ್ಟ್ 30 ಮತ್ತು 31 ರಂದು ಸಿಟಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ವರದಿಗಳಾಗಿದೆ. 

ಜಂಟಿ ಕಾರ್ಯದರ್ಶಿ ಕಲ್ಯಾಣ್ ಬ್ಯಾನರ್ಜಿ ಅವರು ಶುಕ್ರವಾರ ಹೊರಡಿಸಿದ ಆದೇಶದ ಪ್ರಕಾರ ಲಖನೌ, ಕಾನ್ಪುರ, ಮೀರತ್, ಪ್ರಯಾಗರಾಜ್, ವಾರಣಾಸಿ, ಗಾಜಿಯಾಬಾದ್, ಅಲಿಗಢ, ಮೊರಾದಾಬಾದ್, ಝಾನ್ಸಿ, ಬರೇಲಿ, ಗೋರಖ್‌ಪುರ, ಶಹಜಹಾನ್‌ಪುರ, ಆಗ್ರಾ ಮತ್ತು ಮಥುರಾದಲ್ಲಿ ವಿಶೇಷ ಉದ್ದೇಶದ ವಾಹನಗಳು (ಎಸ್‌ಪಿವಿ) ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಸುಗಮಗೊಳಿಸುತ್ತವೆ ಎಂದು ಹೇಳಿದೆ.

ಇದನ್ನು ಓದಿ: ಅಮೆರಿಕದಲ್ಲೂ ಯೋಗಿ ಮಾಡೆಲ್‌? ನಾಲ್ವರು ಪೊಲೀಸರ ಶೂಟ್‌ ಮಾಡಿದ ಆರೋಪಿ ಮನೆ ಧ್ವಂಸ!

ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ರಕ್ಷಾ ಬಂಧನದ ಸಂದರ್ಭದಲ್ಲಿ ಇಂತಹ ಕ್ರಮವನ್ನು ಪ್ರಾರಂಭಿಸಿರುವುದು ಇದೇ ಮೊದಲಲ್ಲ. ಕಳೆದ ಕೆಲವು ವರ್ಷಗಳಿಂದ ಈ ಹಬ್ಬದಂದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಸರ್ಕಾರ ನೀಡುತ್ತಿದೆ. ಈ ವರ್ಷ ಆಗಸ್ಟ್ 30 ಮತ್ತು 31 ರಂದು ಹಬ್ಬವನ್ನು ಆಚರಿಸಲಾಗುವುದು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಳೆದ ವರ್ಷ ಈ ಬಗ್ಗೆ ಎಕ್ಸ್‌ ಅಂದರೆ ಹಿಂದಿನ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದರು. ಉತ್ತರ ಪ್ರದೇಶ ರಾಜ್ಯ ಸಾರಿಗೆ ಸಂಸ್ಥೆಯು ರಾಜ್ಯದ ಎಲ್ಲಾ ಮಹಿಳೆಯರ ಸುರಕ್ಷಿತ ಪ್ರಯಾಣಕ್ಕಾಗಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯವನ್ನು ಒದಗಿಸಬೇಕು ಎಂದು ಹೇಳಿದ್ದರು. ಪ್ರತಿ ವರ್ಷ, ರಕ್ಷಾ ಬಂಧನದ ವಿಶೇಷ ಸಂದರ್ಭದಲ್ಲಿ, ಉತ್ತರ ಪ್ರದೇಶ ರಾಜ್ಯ ಸಾರಿಗೆ ಸಂಸ್ಥೆ (UPSRTC) ರಕ್ಷಾ ಬಂಧನ ಹಬ್ಬದ ಸಮಯದಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣ ಸೇವೆಗಳನ್ನು ಒದಗಿಸುತ್ತದೆ. ವರದಿಗಳ ಪ್ರಕಾರ, ಪ್ರತಿ ವರ್ಷ ಸುಮಾರು 8-10 ಲಕ್ಷ ಮಹಿಳೆಯರು ಈ ಸೇವೆಯನ್ನು ಪಡೆಯುತ್ತಾರೆ.

ಇದನ್ನೂ ಓದಿ: ರಜನಿ ಬಾಬಾ ಜತೆ ‘ಜೈಲರ್‌’ ಚಿತ್ರ ನೋಡಲಿರುವ ‘ಬುಲ್ಡೋಜರ್‌ ಬಾಬಾ’!

ವರ್ಷಗಳಿಂದ ರಕ್ಷಾ ಬಂಧನವನ್ನು ಒಡಹುಟ್ಟಿದವರಲ್ಲಿ ನೆಚ್ಚಿನ ಹಬ್ಬವೆಂದು ಪರಿಗಣಿಸಲಾಗಿದೆ. ವಿಶೇಷ ಕ್ಷಣಗಳ ಪ್ರತ್ಯಕ್ಷದರ್ಶಿಯಾಗಲು ಇಡೀ ಕುಟುಂಬವು ಒಟ್ಟಿಗೆ ಸೇರುತ್ತದೆ. ಬದಲಾಗುತ್ತಿರುವ ಈ ಕಾಲದಲ್ಲಿ, ರಕ್ಷಾ ಬಂಧನದ ವೇಳೆ ಕೇವಲ ಸಹೋದರರು ಮತ್ತು ಸಹೋದರಿಯರು ಮಾತ್ರವಲ್ಲ ಸ್ನೇಹಿತರು, ದೂರದ ಸಂಬಂಧಿಕರು ಕೂಡ ಒಬ್ಬರಿಗೊಬ್ಬರು ರಾಖಿ ಕಟ್ಟುತ್ತಾರೆ.  

ಇದನ್ನೂ ಓದಿ: ಸರ್ಕಾರಿ ಆಸ್ತಿ ಕಬಳಿಸಿದೋರಿಗೆ ಬುಲ್ಜೋಜರ್ ಕ್ರಮದ ಬದ್ಲು ಆರತಿ ಎತ್ಬೇಕೇ: ಯೋಗಿ ಆದಿತ್ಯನಾಥ್‌ ಪ್ರಶ್ನೆ

Latest Videos
Follow Us:
Download App:
  • android
  • ios