ಸನ್‌ಸೆಟ್ ರಿಡ್ಜ್ ವೆಸ್ಟ್‌ನಲ್ಲಿರುವ ನಿವಾಸಕ್ಕೆ ಅಧಿಕಾರಿಗಳು ಹೋದಾಗ ಆರೋಪಿ ಮನೆಯೊಳಗೆ ಇದ್ದ.. ಆತನ ಮನೆಯನ್ನು ಬುಲ್ಡೋಜರ್‌ ಮೂಲಕ ಕೆಡವಿ ಆತನನ್ನು ವಶಕ್ಕೆ ಪಡೆಯಲಾಗಿದೆ.

ಟೆಕ್ಸಾಸ್‌ (ಆಗಸ್ಟ್ 19, 2023): ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರನ್ನು ಬುಲ್ಡೋಜರ್‌ ಬಾಬಾ ಎಂದೇ ಹಲವರು ಕರೆಯುತ್ತಾರೆ. ಇದಕ್ಕೆ ಕಾರಣ ಆರೋಪಿಗಳ ಮನೆ, ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್‌ ಮೂಲಕ ಧ್ವಂಸ ಮಾಡಿರುವುದು. ಈಗ ಅಮೆರಿಕದಲ್ಲೂ ಯೋಗಿ ಮಾದರಿಯ ಪಾಲನೆ ಮಾಡ್ತಿದ್ದಾರೆ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗ್ತಿದೆ. ಇದಕ್ಕೆ ಕಾರಣ ಅಮೆರಿಕದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. 

ಸನ್‌ಸೆಟ್ ರಿಡ್ಜ್ ವೆಸ್ಟ್‌ನಲ್ಲಿರುವ ನಿವಾಸಕ್ಕೆ ಅಧಿಕಾರಿಗಳು ಹೋದಾಗ ಆರೋಪಿ ಮನೆಯೊಳಗೆ ಇದ್ದ.. ಆತನ ಮನೆಯನ್ನು ಬುಲ್ಡೋಜರ್‌ ಮೂಲಕ ಕೆಡವಿ ಆತನನ್ನು ವಶಕ್ಕೆ ಪಡೆಯಲಾಗಿದೆ. 5 ಗಂಟೆಯ ಕಾಲ ಈ ಕಾರ್ಯಾಚರಣೆ ನಡೆದಿದ್ದು, ನಾಲ್ವರು ಕಾನೂನು ಜಾರಿ ಅಧಿಕಾರಿಗಳನ್ನು ಗುಂಡು ಹಾರಿಸಿ ಗಾಯಗೊಳಿಸಿರುವ ಶಂಕಿತ ಆರೋಪಿಯನ್ನು ಕಳೆದ ರಾತ್ರಿ US ರಾಜ್ಯದ ಟೆಕ್ಸಾಸ್‌ನಲ್ಲಿ ಸುದೀರ್ಘ ಘರ್ಷಣೆಯ ನಂತರ ಬಂಧಿಸಲಾಗಿದೆ. 

ಇದನ್ನು ಓದಿ: ಸಾಕು ನಾಯಿಗಳ ವಿಚಾರವಾಗಿ ಜಗಳ: ಬಾಲ್ಕನಿಯಿಂದ್ಲೇ 8 ಜನರಿಗೆ ಶೂಟ್‌ ಮಾಡಿದ ಭದ್ರತಾ ಸಿಬ್ಬಂದಿ!

Scroll to load tweet…

ಘಟನೆಯ ಹಿನ್ನೆಲೆ..

ಟ್ರಾಫಿಕ್‌ ನಿಲುಗಡೆ ಸಮಯದಲ್ಲಿ ಹ್ಯಾರಿಸ್ ಕೌಂಟಿಯ ಶೆರಿಫ್‌ನ ಡೆಪ್ಯೂಟಿಯೊಬ್ಬರನ್ನು ಶೂಟ್‌ ಮಾಡಿದ ಕಾರಣ ಈ ಆರೋಪಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿದ್ದರು. ಟೆರ್ರಾನ್‌ ಗ್ರೀನ್‌ ಎಂಬ ಆರೋಪಿ ಮನೆಯೊಂದರಲ್ಲಿ ಬಚ್ಚಿಟ್ಟುಕೊಂಡಿದ್ದ. ಇಬ್ಬರು ಮಕ್ಕಳಿರುವ ಮಹಿಳೆ ಆರೋಪಿಯ ಇರುವಿಕೆಯನ್ನು ದೃಢಪಡಿಸಿದ ಬಳಿಕ ಪೊಲೀಸ್‌ ಅಧಿಕಾರಿಗಳು ಸಮೀಪಿಸಿದಾಗ, ಆರೋಪಿ ಮೂವರು ಪೊಲೀಸರತ್ತ ಗುಂಡು ಹಾರಿಸಿದ್ದು, ಆ ಮೂವರಿಗೂ ಗಾಯವಾಗಿದೆ. 

ಒಬ್ಬ US ಮಾರ್ಷಲ್ ಡೆಪ್ಯೂಟಿ ಕಾಲಿಗೆ ಗಾಯಗೊಂಡರು, ಇನ್ನೊಬ್ಬರಿಗೆ ಲೋಹದ ಚೂರುಗಳಿಮದ ಹೊಡೆತ ಬಿದ್ದಿದೆ. ಮತ್ತು ಇನ್ನೊಬ್ಬರು ಪೊಲೀಸರಿಗೂ ಹೊಡೆತ ಬಿದ್ದಿದೆ. ನಂತರ, ಆತನನ್ನು ಹಿಡಿಯಲು ಸುಮಾರು ಐದು ಗಂಟೆಗಳ ಅವಧಿಯಲ್ಲಿ, 'ದಿ ರೂಕ್' ಎಂಬ ಶಸ್ತ್ರಸಜ್ಜಿತ ಯುದ್ಧತಂತ್ರದ ವಾಹನವು ಸುತ್ತಿಕೊಂಡು ಮನೆಯನ್ನು ಕೆಡವಲು ಪ್ರಾರಂಭಿಸಿದ ನಂತರ ಶಂಕಿತ ಶರಣಾಗಿದ್ದಾನೆ. ನಂತರ ಆತನನ್ನು ಕೂಡಲೇ ಬಂಧಿಸಲಾಯಿತು ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ 20ಕ್ಕೂ ಹೆಚ್ಚು ಮಹಿಳೆಯರ ವಂಚಿಸಿ ಕೋಟಿ ಕೋಟಿ ಲೂಟಿ ಹೊಡೆದ ‘ಹಾರ್ಟ್‌ ಸ್ಪೆಷಲಿಸ್ಟ್‌’!