ರಜನಿ ಬಾಬಾ ಜತೆ ‘ಜೈಲರ್’ ಚಿತ್ರ ನೋಡಲಿರುವ ‘ಬುಲ್ಡೋಜರ್ ಬಾಬಾ’!
ಸೂಪರ್‌ಸ್ಟಾರ್ ರಜನಿಕಾಂತ್ ಅವರ ಇತ್ತೀಚಿನ 'ಜೈಲರ್' ಚಿತ್ರ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತಿದ್ದು, ಭರ್ಜರಿ ಹಿಟ್ ಆಗಿದೆ. ಈ ಬೆನ್ನಲ್ಲೇ ಹಿಮಾಲಯದ ತಪ್ಪಲಲ್ಲಿದ್ದ ರಜನಿ ಬಾಬಾ ಲಖನೌಗೆ ಅಗಮಿಸಿದ್ದಾರೆ. ಅಲ್ಲದೆ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರೊಂದಿಗೆ ಚಿತ್ರ ವೀಕ್ಷಣೆ ಮಾಡೋದಾಗಿಯೂ ಹೇಳಿದ್ದಾರೆ.
ತಮಿಳು ಸೂಪರ್‌ಸ್ಟಾರ್ ಮತ್ತು ಭಾರತೀಯ ಚಿತ್ರರಂಗದ ಅತಿ ಎತ್ತರದ ವ್ಯಕ್ತಿಗಳಲ್ಲಿ ಒಬ್ಬರಾದ ರಜನಿಕಾಂತ್ ಅವರು ಇಂದು ಸಂಜೆ ಲಖನೌಗೆ ಆಗಮಿಸಿದ್ದಾರೆ. ಹಾಗೆ, ನಾನು ಬುಲ್ಡೋಜರ್ ಬಾಬಾ ಅಥವಾ ಯೋಗಿ ಅದಿತ್ಯನಾಥ್ ಅವರೊಂದಿಗೆ ಜೈಲರ್ ಚಲನಚಿತ್ರ ನೋಡುತ್ತೇನೆ ಎಂದು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದರು.
ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ದೇವರಿಗೆ ಧನ್ಯವಾದ ಅರ್ಪಿಸಿದರು. "ಇದೆಲ್ಲವೂ ದೇವರ ಆಶೀರ್ವಾದ" ಎಂದು ರಜನಿಕಾಂತ್ ಲಖನೌ ವಿಮಾನ ನಿಲ್ದಾಣದಲ್ಲಿ ತಮ್ಮ ಕಾರನ್ನು ಹತ್ತಿದರು.
ತಮಿಳು ಚಿತ್ರ 'ಜೈಲರ್', ಎರಡು ವರ್ಷಗಳ ಗ್ಯಾಪ್ ನಂತರ ತೆರೆಗೆ ಬಂದ ಇತ್ತೀಚಿನ ರಜನಿಕಾಂತ್ ಅಭಿನಯದ ಚಿತ್ರ. ಕಳೆದ ವಾರ ಬಿಡುಗಡೆಯಾದ ಈ ಚಿತ್ರವು ಜೈಲರ್ ತನ್ನ ನಾಯಕನನ್ನು ಜೈಲಿನಿಂದ ಓಡಿಹೋಗಲು ಸಹಾಯ ಮಾಡದಂತೆ ಗ್ಯಾಂಗ್ ಅನ್ನು ಹೇಗೆ ತಡೆಯುತ್ತಾನೆ ಎಂಬುದನ್ನು ವಿವರಿಸುತ್ತದೆ.
ತಮನ್ನಾ ಮತ್ತು ಜಾಕಿ ಶ್ರಾಫ್ ಕೂಡ ನಟಿಸಿರುವ ಈ ಚಿತ್ರವು ಮೊದಲ ವಾರದಲ್ಲಿ ವಿಶ್ವಾದ್ಯಂತ ಸುಮಾರು ₹ 375 ಕೋಟಿ ಗಳಿಸಿದೆ ಎಂದು ಸನ್ ಪಿಕ್ಚರ್ಸ್ ತಿಳಿಸಿದೆ.
ರಜನಿಕಾಂತ್ ಜತೆಗೆ ಸ್ಯಾಂಡಲ್‌ವುಡ್ ಖ್ಯಾತ ನಟ ಶಿವಣ್ಣ ಸಹ ನಟಿಸಿದ್ದು, ಜತೆಗೆ ಮಲಯಾಳಂ ಖ್ಯಾತ ನಟ ಮೋಹನ್‌ಲಾಲ್ ಕೂಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.