ವೈದ್ಯರ ನಿರ್ಲಕ್ಷ್ಯದಿಂದ ಶವ ವಿಲೇವಾರಿಯಲ್ಲಿ ಲೋಪ  ಉತ್ತರ ಪ್ರದೇಶ ಆರೋಗ್ಯ ವ್ಯವಸ್ಥೆ ಕುರಿತು ಗರಂ ಆದ ಹೈಕೋರ್ಟ್ ರಾಮ ಬಂದು ಕಾಪಾಡಬೇಕು ಎಂದು ಚಾಟಿ ಬೀಸಿದ ಕೋರ್ಟ್

ಉತ್ತರ ಪ್ರದೇಶ(ಮೇ.18):  ಕೊರೋನಾ ವೈರಸ್ 2ನೇ ಅಲೆಗೆ ದೇಶದ ಎಲ್ಲಾ ರಾಜ್ಯಗಳು ತತ್ತರಿಸಿದೆ. ಸೂಕ್ತ ಚಿಕಿತ್ಸೆ ನೀಡಲು ಸರಿಯಾದ ವ್ಯವಸ್ಥೆ ಇಲ್ಲ, ಸೋಂಕಿತರ ಕೇಂದ್ರಗಳು ಭರ್ತಿ, ಕೊರೋನಾ ಹೊರತು ಪಡಿಸಿದ ರೋಗಿಗಳನ್ನು ಆಸ್ಪತ್ರೆ ಒಳಗೆ ಸೇರಿಸುತ್ತಿಲ್ಲ. ಈ ರೀತಿ ಘಟನೆಗಳ ಪ್ರತಿ ರಾಜ್ಯದಲ್ಲೂ ವರದಿಯಾಗುತ್ತಿದೆ. ಆಯಾ ರಾಜ್ಯದ ಹೈಕೋರ್ಟ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಇದೀಗ ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶದಲ್ಲಿನ ಆರೋಗ್ಯ ವ್ಯವಸ್ಥೆಯನ್ನು ಶ್ರೀ ರಾಮನೇ ಕಾಪಾಡಬೇಕು ಎಂದು ಸರ್ಕಾರಕ್ಕೆ ಚಾಟಿ ಬೀಸಿದೆ.

ಕೊರೋನಾ ಪೀಡಿತ ನಗರಗಳಲ್ಲಿ ಪೂರ್ಣ ಲಾಕ್‌ಡೌನ್‌ ಬಗ್ಗೆ ಕೋರ್ಟ್‌ ಮಹತ್ವದ ಆದೇಶ!

ಮೀರತ್ ಜಿಲ್ಲಾಸ್ಪತ್ರೆಯಲ್ಲಿ ಸೋಂಕಿತನ ಸಾವು ಹಾಗೂ ಶವ ವಿಲೇವಾರಿಯಲ್ಲಿ ಆಗಿರುವ ಲೋಪ ಕುರಿತು ಅಲಹಾಬಾದ್ ಹೈಕೋರ್ಟ್ ಜಸ್ಟೀಸ್ ಆಜಿತ್ ಕುಮಾರ್ ಹಾಗೂ ಸಿದ್ಧಾರ್ಥ್ ವರ್ಮಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಉತ್ತರ ಪ್ರದೇಶದಲ್ಲಿ ಕೊರೋನಾ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ, ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ, ಸೂಕ್ತ ವ್ಯವಸ್ಥೆ ಇಲ್ಲದ ಕುರಿತು ಅರ್ಜಿ ಸಲ್ಲಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಅಲಬಾಬಾದ್ ಹೈಕೋರ್ಟ್, ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿನ ಆರೋಗ್ಯ ವ್ಯವಸ್ಥೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದೇ ವೇಳೆ ಸಂತೋಷ್ ಕುಮಾರ್ ಎಂಬ ಸೋಂಕಿತ ಮೃತಪಟ್ಟು ಆತನ ಶವವನ್ನು ಅಪರಿಚತ ವ್ಯಕ್ತಿ ಶವ ಎಂದು ಆಸ್ಪತ್ರೆ ವಿಲೇವಾರಿ ಮಾಡಿದೆ. ಈ ಕುರಿತು ಸರ್ಕಾರಕ್ಕೆ ಕೋರ್ಟ್ ಚಾಟಿಬೀಸಿದೆ.

ಕೋವಿಡ್‌ ಟೆಸ್ಟ್‌ ವರದಿ ಒಂದೇ ದಿನದಲ್ಲಿ ನೀಡಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

ಮೀರತ್ ಜಿಲ್ಲಾಸ್ಪತ್ರೆಗೆ ಸಂತೋಷ್ ಕುಮಾರ್ ಕೊರೋನಾ ಕಾರಣ ದಾಖಲಾಗಿದ್ದರು. ಆದರೆ ಸಂತೋಷ್ ಕುಮಾರ್ ಆಸ್ಪತ್ರೆ ವಾರ್ಡ್‌ನಲ್ಲಿ ಕುಸಿದು ಬಿದ್ದಿದ್ದರು. ಬಳಿಕ ಕೆಲ ಪ್ರಯತ್ನಗಳನ್ನು ಮಾಡಲಾಗಿದ್ದರೂ, ಸಂತೋಷ್ ಕುಮಾರ್ ಬದುಕಿ ಉಳಿಯಲಿಲ್ಲ. ಆದರೆ ಸಂತೋಷ್ ಕುಮಾರ್ ಶವ ವಿಲೇವಾರಿ ವೇಳೆ ಆಸ್ಪತ್ರೆ ಸಿಬ್ಬಂದಿ ಅಪರಿಚಿತ ವ್ಯಕ್ತಿ ಶವ ಎಂದು ವಿಲೇವಾರಿ ಮಾಡಿದ್ದಾರೆ.

ನೈಟ್ ಶಿಫ್ಟ್‌ನಲ್ಲಿರುವ ವೈದ್ಯರ ನಿರ್ಲಕ್ಷ್ಯದಿಂದ ಈ ಲೋಪವಾಗಿದೆ. ಶವ ವಿಲೇವಾರಿಯಲ್ಲಿ ಈ ರೀತಿ ಲೋಪವಾಗುತ್ತಿದ್ದರೆ, ಸೋಂಕಿತರ ಚಿಕಿತ್ಸೆ ಊಹಿಸಿಕೊಳ್ಳಲು ಅಸಾಧ್ಯವಾಗಿದೆ. ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಆರೋಗ್ಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಕೋರ್ಟ್ ಹೇಳಿದೆ