ಕೋವಿಡ್‌ ಟೆಸ್ಟ್‌ ವರದಿ ಒಂದೇ ದಿನದಲ್ಲಿ ನೀಡಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

* ವರದಿ ನೀಡಲು ವಿಳಂಬ ಮಾಡಿದ ಲ್ಯಾಬ್‌ ವಿರುದ್ಧ ಕಾನೂನು ರೀತಿ ಕ್ರಮ 
* 24 ಗಂಟೆಗಳಲ್ಲೇ ವರದಿ ನೀಡುವಂತೆ ಸೂಕ್ತ ಆದೇಶ ಹೊರಡಿಸಿ, ಕ್ರಮ ಕೈಗೊಳ್ಳಬೇಕು
* ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಹೈಕೋರ್ಟ್‌ ಆದೇಶ 

Give Covid Test Report in 1 day Says Karnataka High Court grg

ಬೆಂಗಳೂರು(ಮೇ.14): ಕೊರೋನಾ ಪರೀಕ್ಷಾ ವರದಿ 24 ಗಂಟೆಗಳಲ್ಲಿ ಲಭ್ಯವಾಗಬೇಕು ಎಂದು ಈ ಹಿಂದೆ ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.

Give Covid Test Report in 1 day Says Karnataka High Court grg

ಕೊರೋನಾ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌ ಓಕ ಮತ್ತು ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

"

ರಾಜ್ಯ ಸರ್ಕಾರ ಎಲ್ಲ ಲ್ಯಾಬ್‌ಗಳು 24 ಗಂಟೆಗಳಲ್ಲೇ ವರದಿ ನೀಡುವಂತೆ ಸೂಕ್ತ ಆದೇಶ ಹೊರಡಿಸಿ, ಕ್ರಮ ಕೈಗೊಳ್ಳಬೇಕು. ವರದಿಯನ್ನು ನೀಡಲು ವಿಳಂಬ ಮಾಡಿದ ಲ್ಯಾಬ್‌ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿತು.

ಲಸಿಕೆ ನೀಡಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

Give Covid Test Report in 1 day Says Karnataka High Court grg

ವಿಚಾರಣೆ ವೇಳೆ, ಹೈಕೋರ್ಟ್‌ ಸಿಬ್ಬಂದಿ (ಚಾಲಕ) ಸಾವನ್ನಪ್ಪಿರುವ ಕುರಿತು ಪ್ರಸ್ತಾಪಿಸಿದ ಪೀಠ, ಸೋಂಕಿತ ಚಾಲಕ ಸಿಬ್ಬಂದಿ ಮೇ 10ರಂದು ನಗರದ ಸಿ ವಿ ರಾಮನ್‌ ಜನರಲ್‌ ಆಸ್ಪತ್ರೆಯಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಸ್ವ್ಯಾಬ್‌ ಕೊಟ್ಟಿದ್ದಾರೆ. ಆದರೆ ಮೇ 12ರಂದು ಸೋಂಕಿತ ಸಿಬ್ಬಂದಿ ಸಾವನ್ನಪ್ಪುವವರೆಗೂ ವರದಿ ನೀಡಿಲ್ಲ ಎಂದು ಉಲ್ಲೇಖಿಸಿ, ನ್ಯಾಯಾಲಯ ಈ ಹಿಂದಿನ ವಿಚಾರಣೆ ವೇಳೆ, 24 ಗಂಟೆಗಳಲ್ಲಿ ಪರೀಕ್ಷಾ ವರದಿ ಲಭ್ಯವಾಗುವಂತೆ ಲ್ಯಾಬ್‌ಗಳಿಗೆ ಸೂಕ್ತ ನಿರ್ದೇಶನ ನೀಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು. ಆದರೆ, ನ್ಯಾಯಾಲಯದ ಆದೇಶವೇ ಪಾಲನೆಯಾಗಿಲ್ಲ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios