Asianet Suvarna News Asianet Suvarna News

Yogi Meet Modi ಪ್ರಧಾನಿ ಮೋದಿ ಭೇಟಿಯಾದ ಯೋಗಿ, ಇದೇ ವಾರದಲ್ಲಿ ಪ್ರಮಾಣವಚನ!

  • ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿ
  • ಉತ್ತರ ಪ್ರದೇಶ ಸಂಪುಟ ರಚನೆ ಕುರಿತು ಚರ್ಚೆ
  • ಉಪರಾಷ್ಟ್ರಪತಿ ಸೇರಿ ಹಲವು ಪ್ರಮುಖರ ಭೇಟಿ
Uttar Pradesh Election Result Yogi Adityanath Meets PM Modi to Discusses New Cabinet ckm
Author
Bengaluru, First Published Mar 13, 2022, 7:47 PM IST | Last Updated Mar 13, 2022, 7:57 PM IST

ನವದೆಹಲಿ(ಮಾ.13): ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನೊಂದಿಗೆ ಇತಿಹಾಸ ರಚಿಸಿರುವ ಬಿಜೆಪಿ ಇದೀಗ ಸರ್ಕಾರ ರಚಿಸುವ ತಯಾರಿಯಲ್ಲಿದೆ. ಸಂಪುಟ ರಚನೆಗೂ ಮುನ್ನ ಮಾಜಿ ಸಿಎಂ ಯೋಗಿ ಆದಿತ್ಯನಾಥ್ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ಉತ್ತರ ಪ್ರದೇಶ ಚುನಾವಣೆಯಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರುತ್ತಿರುವ ಯೋಗಿ ಆದಿತ್ಯನಾಥ್ ಅವರನ್ನು ಮೋದಿ ಅಭಿನಂದಿಸಿದ್ದಾರೆ. ಉತ್ತರ ಪ್ರದೇಶದ ಏಳಿಗೆಗಾಗಿ ಸತತ ಪರಿಶ್ರಮವಹಿಸುತ್ತಿರುವ ಯೋಗಿ ಆದಿತ್ಯನಾಥ್ ಹಾಗೂ ಉತ್ತರ ಪ್ರದೇಶದ ಜನತೆಗೆ ಮೋದಿ ಧನ್ಯವಾದ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಜನರ ಆಶೋತ್ತರಗಳನ್ನು ಈಡೇರಿಸಲು ಯೋಗಿ ಕೆಲಸ ಮಾಡಲಿದ್ದಾರೆ ಎಂದು ಮೋದಿ ಭರವಸೆ ವ್ಯಕ್ತಪಡಿಸಿದ್ದಾರೆ.

ಯೋಗಿ ಆದಿತ್ಯನಾಥ್ ದೆಹಲಿ ಭೇಟಿಯಲ್ಲಿ ಪ್ರಮುಖವಾಗಿ ಸಂಪುಟ ರಚನೆ ಕುರಿತು ಚರ್ಚೆ ನಡೆಸಲಾಗಿದೆ. ಹೊಸ ಸರ್ಕಾರ ರಚನೆ, ಸಂಪುಟದಲ್ಲಿ ಯಾರಿಗೆ ಮಣೆ ಹಾಕಬೇಕು ಅನ್ನೋ ಕುರಿತು ಚರ್ಚೆ ನಡೆದಿದೆ. ಇನ್ನು ಪ್ರಮಾಣ ವಚನ ದಿನಾಂಕ ಕುರಿತು ಚರ್ಚೆ ನಡೆಸಲಾಗಿದೆ.

 

 

Yogi visit Delhi ವೆಂಕಯ್ಯ ನಾಯ್ಡು, ಬಿಎಲ್ ಸಂತೋಷ್ ಸೇರಿ ಪ್ರಮುಖರ ಭೇಟಿಯಾದ ಯೋಗಿ, ಸಂಪುಟ ರಚನೆ ಚರ್ಚೆ!

ಪ್ರಧಾನಿ ಮೋದಿ ಭೇಟಿಗೂ ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಸಂಪುಟ ಕುರಿತು ಮಾಹಿತಿ ನೀಡಿದ್ದಾರೆ. ಹೊಸ ಸರ್ಕಾರ ರಚನೆ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಿದ್ದಾರೆ. ಇನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿಯಾದ ಯೋಗಿ ಆದಿತ್ಯನಾಥ್ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ. ಇನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಶ್, ಕೇಂದ್ರ ಸಚಿವ ಸರ್ಬಾನಂದ್ ಸೋನ್ವಾಲ್ ಜೊತೆಗೂ ಯೋಗಿ ಆದಿತ್ಯನಾಥ್ ಚರ್ಚೆ ನಡೆಸಿದ್ದಾರೆ.

Uttar Pradesh: 4,442 ಅಭ್ಯರ್ಥಿಗಳಲ್ಲಿ ಠೇವಣಿ ಕಳೆದುಕೊಂಡವರು 3522 ಮಂದಿ..!

ಯುಪಿ ಚುನಾವಣೆಯಲ್ಲಿ ಹೊಸ ಟ್ರೆಂಡ್‌
ದೇಶದ ಅತಿದೊಡ್ಡ ರಾಜ್ಯ ಉತ್ತರಪ್ರದೇಶದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಣ್ಣದಾಗಿ ಕಾಣಿಸಿಕೊಂಡಿದ್ದ ರಾಜಕೀಯ ಬದಲಾವಣೆ ಈ ಬಾರಿ ಸ್ಪಷ್ಟರೂಪ ಪಡೆದುಕೊಂಡಿದೆ. ದಶಕಗಳಿಂದ ಕಾಂಗ್ರೆಸ್‌, ಬಿಜೆಪಿ, ಎಸ್‌ಸಿ, ಬಿಎಸ್‌ಪಿ ನಡುವೆ ಚತುಷ್ಕೋಣ ಸ್ಪರ್ಧೆಗೆ ವೇದಿಕೆಯಾಗಿದ್ದ ರಾಜ್ಯದಲ್ಲೀಗ ಕೇವಲ 2 ಪಕ್ಷಗಳ ಸೆಣಸು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ (312) ಕಂಡುಕೇಳರಿಯದ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಎಸ್‌ಪಿ 49 ಸ್ಥಾನ ಗೆದ್ದಿತ್ತು. ಈ ಮೂಲಕ ಮೊದಲ ಬಾರಿಗೆ ಎರಡು ಪಕ್ಷಗಳ ನಡುವಿನ ಸ್ಪರ್ಧೆಯ ಕಣವಾಗಿ ಹೊರಹೊಮ್ಮಿತ್ತು. ಬಿಎಸ್‌ಪಿ ಕೇವಲ 19 ಕಾಂಗ್ರೆಸ್‌ 7 ಸ್ಥಾನ ಪಡೆದುಕೊಂಡಿದ್ದವು. ಈ ಬಾರಿಯೂ ಕದನ ಬಿಜೆಪಿ ಮತ್ತು ಎಸ್‌ಪಿಗೆ ಸೀಮಿತವಾಗಿದೆ. ಬಿಎಸ್‌ಪಿ ಮತ್ತು ಕಾಂಗ್ರೆಸ್‌ ತಮ್ಮ ಬಲವನ್ನು ಮತ್ತಷ್ಟುಕಳೆದುಕೊಳ್ಳುವ ಮೂಲಕ ಹೋರಾಟದ ಕಣದಿಂದ ಪೂರ್ಣ ಹಿಂದೆ ಸರಿದಿವೆ.

ಬಿಜೆಪಿಯ ಶರ್ಮಾಗೆ 2.14 ಲಕ್ಷ ಮತಗಳ ಅಂತರದ ಗೆಲುವು
ಉತ್ತರಪ್ರದೇಶದ ಗಾಜಿಯಾಬಾದ್‌ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸುನಿಲ್‌ ಕುಮಾರ್‌ ಶರ್ಮಾ ದಾಖಲೆಯ 2.14 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಶರ್ಮಾಗೆ 3.22 ಲಕ್ಷ ಮತ ಸಿಕ್ಕಿದ್ದರೆ, ಅವರ ಪ್ರತಿಸ್ಪರ್ಧಿ ಎಸ್‌ಪಿಯ ಅಮರ್‌ಪಾಲ್‌ಗೆ 1.08 ಲಕ್ಷ ಮತ ಸಿಕ್ಕಿದೆ.

Latest Videos
Follow Us:
Download App:
  • android
  • ios