ಲಖ​ನೌ(ಸೆ.19): ಪ್ರೀತಿ ಪ್ರೇಮದ ಹೆಸ​ರಿ​ನಲ್ಲಿ ಮತಾಂತ​ರಕ್ಕೆ ಪ್ರಚೋ​ದಿ​ಸು​ವ ‘ಲವ್‌ ಜಿಹಾದ್‌’ ನಿಷೇ​ಧಿಸಿ ಸುಗ್ರೀ​ವಾಜ್ಞೆ ಹೊರ​ಡಿ​ಸ​ಲು ಉತ್ತರ ಪ್ರದೇ​ಶದ ಮುಖ್ಯ​ಮಂತ್ರಿ ಯೋಗಿ ಆದಿ​ತ್ಯ​ನಾಥ್‌ ಚಿಂತನೆ ನಡೆ​ಸಿ​ದ್ದಾರೆ.

ಯೋಗಿ ರಾಜ್ಯದಲ್ಲಿ ಚುನಾವಣಾ ಸ್ಪರ್ಧಿಗಳಿಗೆ ಎರಡು ಷರತ್ತು, ಅಶಿಕ್ಷಿತರಿಗಿಲ್ಲ ಟಿಕೆಟ್!

‘ಲವ್‌ ಜಿಹಾದ್‌ ವಿರುದ್ಧ ಕಠಿಣ ನಿಯ​ಮ​ಗ​ಳನ್ನು ಸಿದ್ಧ​ಪ​ಡಿಸಿ. ಅಗತ್ಯ ಬಿದ್ದರೆ ಸುಗ್ರೀ​ವಾಜ್ಞೆ ಹೊರ​ಡಿ​ಸಲು ಸಿದ್ಧತೆ ಮಾಡಿ​ಕೊ​ಳ್ಳಿ’ ಎಂದು ಆದಿ​ತ್ಯ​ನಾಥ್‌ ಸೂಚಿ​ಸಿ​ದ್ದಾರೆ ಎಂದು ಅಧಿ​ಕಾ​ರಿಯೊ​ಬ್ಬರು ತಿಳಿ​ಸಿ​ದ್ದಾ​ರೆ.

‘ಪ್ರೀತಿ-ಪ್ರೇಮದ ನಾಟ​ಕ​ವಾಡಿ ಯುವ​ತಿ​ಯ​ರನ್ನು ಕೆಲ​ವರು ಮದುವೆ ಆಗು​ತ್ತಾರೆ. ನಂತರ ಬಲ​ವಂತ​ವಾಗಿ ಯುವ​ತಿ​ಯ​ರನ್ನು ಮತಾಂತ​ರಿ​ಸು​ತ್ತಾರೆ ಹಾಗೂ ದೌರ್ಜ​ನ್ಯ​ವೆ​ಸ​ಗು​ತ್ತಾರೆ. ಇಂಥ ಪ್ರಕ​ರ​ಣ​ಗಳಲ್ಲಿ ಕೊಲೆ​ಗಳೂ ನಡೆ​ದಿವೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕುವ ಉದ್ದೇ​ಶ​ದಿಂದ ನಿಯ​ಮ​ಗ​ಳನ್ನು ಸಿದ್ಧ​ಪ​ಡಿ​ಸು​ವಂತೆ ಮುಖ್ಯ​ಮಂತ್ರಿ​ಗಳು ಸೂಚಿ​ಸಿ​ದ್ದಾರೆ. ಅಗ​ತ್ಯ​ಬಿ​ದ್ದರೆ ಸುಗ್ರೀ​ವಾಜ್ಞೆ ಹೊರ​ಡಿ​ಸ​ಲಾ​ಗು​ತ್ತ​ದೆ’ ಎಂದು ಅವರು ಹೇಳಿ​ದ್ದಾ​ರೆ.

ಲವ್ ಜಿಹಾದ್ ತಡೆಯಲು ಸಿಎಂ ಯೋಗಿ ದಿಟ್ಟ ಆದೇಶ!

ಕಳೆದ ವರ್ಷ ಉತ್ತರ ಪ್ರದೇಶ ಕಾನೂನು ಆಯೋ​ಗ​ವು, ಬಲ​ವಂತದ ಮತಾಂತರ ನಿಷೇ​ಧಕ್ಕೆ ಹೊಸ ಕಾನೂನು ರೂಪಿ​ಸ​ಬೇಕು ಎಂದು ಸರ್ಕಾ​ರಕ್ಕೆ ಶಿಫಾ​ರಸು ಮಾಡಿ​ತ್ತು.