ಲಕ್ನೋ(ಆ.31):  ಉತ್ತರ ಪ್ರದೇಶದ ಯೋಗಿ ಸರ್ಕಾರ ಪಂಚಾಯತ್ ಚುನಾವಣೆ ಸಂಬಂಧ ಬಹುದೊಡ್ಡ ಹೆಜ್ಜೆ ಇರಿಸಲು ಮುಂದಾಗಿದೆ. ಮುಂದೆ ನಡೆಯಲಿರುವ ಪಂಚಾಯತ್ ಚುನಾವಣೆಯಲ್ಲಿ ಅಭ್ಯರ್ಥಿಗಳ ಕನಿಷ್ಟ ಶಿಕ್ಷಣ ಅರ್ಹತೆಯನ್ನು ನಿಗಧಿಗೊಳಿಸುವ ನಿರ್ಧಾರ ತೆಗೆದುಕೊಂಡಿದೆ.

ಲವ್ ಜಿಹಾದ್ ತಡೆಯಲು ಸಿಎಂ ಯೋಗಿ ದಿಟ್ಟ ಆದೇಶ!

 ಉತ್ತರ ಪ್ರದೇಶ ಸರ್ಕಾರ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಮಹಿಳಾ ಹಾಗೂ ಮೀಸಲಾತಿ ವರ್ಗಕ್ಕೆ ಕನಿಷ್ಟ ಎಂಟನೇ ತರಗತಿ ತೇರ್ಗಡೆ ಹೊಂದುವುದು ಕಡ್ಡಾಯಗೊಳಿಸುವ ಸಾಧ್ಯತೆ ಇದೆ. ಇಷ್ಟೇ ಅಲ್ದೇ ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಅಭ್ಯರ್ಥಿಗಳಿಗೂ ನಿರಾಸೆಯಾಗುವ ಸಾಧ್ಯತೆ  ಇದೆ. ಲಭ್ಯವಾದ ಮಾಹಿತಿ ಅನ್ವಯ ಉತ್ತರ ಪ್ರದೇಶ ಸರ್ಕಾರ ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಮಹಿಳಾ ಹಾಘೂ ಪುರುಷ ಅಭ್ಯರ್ಥಿಗಳಿಗೆ ಚುನಾವಣೆ ಸ್ಪರ್ಧಿಸಲು ನಿರ್ಬಂಧ ಹೇರುವ ಸಾಧ್ಯತೆ ಇದೆ.

ಉತ್ತರ ಪ್ರದೇಶದಲ್ಲಿ ಗ್ರಾಮ ಪ್ರಧಾನ ಸೇರಿ ಎಲ್ಲಾ ಪಂಚಾಯತ್ ಪ್ರತಿನಿಧಿಗಳ ಅಧಿಕಾರಾವಧಿ ಡಿಸೆಂಬರ್ 25 ಕ್ಕೆ ಪೂರ್ಣಗೊಳ್ಳಲಿದೆ. ಇನ್ನು ಕೊರೋನಾತಂಕದ ನಡುವೆ ಇಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ. ಯೋಗಿ ಸರ್ಕಾರ ಪಂಚಾಯತ್ ಚುನಾವಣೆಗಳನ್ನು ಮುಂದಿನ ವರ್ಷ ಜೂನ್‌ನಲ್ಲಿ ನಡೆಸು ಸಾಧ್ಯತೆಗಳಿವೆ ಎನ್ನಲಾಗಿದೆ. 

ಯೋಗಿ ಸರ್ಕಾರದ ದಿಟ್ಟ ಕ್ರಮ, ಪಾತಕಿಯ ಮನೆ ನೆಲಸಮ!

ಹೀಗಿರುವಾಗ ಉತ್ತರ ಪ್ರದೇಶದಲ್ಲಿ ಗ್ರಾಮ ಪಂಚಾಯತ್, ಕ್ಷೇತ್ರ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ಸಂಬಂಧ ಸರ್ಕಾರ ಅಭ್ಯರ್ಥಿಗಳ ಆಯ್ಕೆ ಬ್ಗೆ ಮಹತ್ವದ ಬದಲಾವಣೆ ಜಾರಿಗೊಳಿಸುವ ಸಾಧ್ಯತೆ ಇದೆ. ಸುಭಾಶ್ ಮಿಶ್ರಾರ ವರದಿಯನ್ವಯ ಉತ್ತರ ಪ್ರದೇಶ ಸರ್ಕಾರ ಪಂಚಾಯತ್ ರಾಜ್ ಅಧಿನಿಯಮದಲ್ಲಿ ತಿದ್ದುಪಡಿಯನ್ನೂ ಜಾರಿಗೊಳಿಸುವ ಸಾಧ್ಯತೆ ಇದೆ. ಇದರ ಅನ್ವಯ ಎರಡಕ್ಕಿಂತ ಅಧಿಕ ಮಕ್ಕಳಿರುವವರು ಚುನಾವಣೆಯಲ್ಲಿ ಕಣಕ್ಕಿಳಿದರೆ ಅವರನ್ನು ಅನರ್ಹರೆಂದು ಘೋಷಿಸುವ ಸಾಧ್ಯತೆ ಇದೆ.