Asianet Suvarna News Asianet Suvarna News

ಉತ್ತರಪ್ರದೇಶದಲ್ಲಿ ಯೋಗಿ ಸರ್ಕಾರದ ವಿರುದ್ಧ ವರದಿ ಮಾಡಿದ್ರೆ ಹದ್ದಿನ ಕಣ್ಣು, ಮಾಧ್ಯಮಗಳಿಗೆ ನೋಟಿಸ್‌

ಉತ್ತರಪ್ರದೇಶದಲ್ಲಿ ಸರ್ಕಾರದ ವಿರುದ್ಧ ವರದಿ ಮೇಲೆ ಕಣ್ಣು. ಸ್ಪಷ್ಟನೆ ಕೇಳುವಂತೆ ಡೀಸಿಗಳಿಗೆ ಯೋಗಿ ಸರ್ಕಾರ ಆದೇಶ.ಸರ್ಕಾರಕ್ಕೂ ವರದಿ ಬಗ್ಗೆ ಮಾಹಿತಿ ಸಲ್ಲಿಸುವಂತೆ ಸೂಚನೆ.

Uttar Pradesh CM Yogi Adityanath government asks officials to verify  negative  news from   media group gow
Author
First Published Aug 20, 2023, 11:34 AM IST | Last Updated Aug 20, 2023, 11:34 AM IST

ಲಖನೌ (ಆ.20): ಉತ್ತರ ಪ್ರದೇಶದಲ್ಲಿ ಯಾವುದೇ ಪತ್ರಿಕೆ ಅಥವಾ ಮಾಧ್ಯಮ ಸಂಸ್ಥೆಗಳು ಸರ್ಕಾರದ ಇಮೇಜಿಗೆ ಧಕ್ಕೆಯಾಗುವಂತಹ ‘ಋುಣಾತ್ಮಕ’ ವರದಿ ಅಥವಾ ಲೇಖನಗಳನ್ನು ಪ್ರಕಟಿಸಿದರೆ ಮಾಧ್ಯಮ ಸಂಸ್ಥೆಗಳಿಂದ ಆ ಬಗ್ಗೆ ಸ್ಪಷ್ಟನೆ ಕೇಳುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸರ್ಕಾರ ಆದೇಶ ನೀಡಿದೆ.

‘ಯಾವುದೇ ಪತ್ರಿಕೆ ಅಥವಾ ಮಾಧ್ಯಮಗಳು ಯಾವುದಾದರೂ ಘಟನೆಯನ್ನು ತಿರುಚಿ ಬರೆದಿದ್ದರೆ ಅಥವಾ ತಪ್ಪು ವಾಸ್ತವಾಂಶಗಳನ್ನು ಪ್ರಕಟಿಸಿದ್ದರೆ ಹಾಗೂ ರಾಜ್ಯ ಸರ್ಕಾರದ ಅಥವಾ ಜಿಲ್ಲಾಡಳಿತ ಇಮೇಜಿಗೆ ಧಕ್ಕೆ ತರಲು ಯತ್ನಿಸಿದರೆ ಅಂತಹ ಮಾಧ್ಯಮದ ಮ್ಯಾನೇಜರ್‌ಗೆ ಜಿಲ್ಲಾಧಿಕಾರಿಗಳು ಸ್ಪಷ್ಟನೆ ಕೋರಿ ನೋಟಿಸ್‌ ನೀಡಬೇಕು. ಅದರ ಪ್ರತಿಯನ್ನು ಸರ್ಕಾರದ ಮಾಹಿತಿ ಇಲಾಖೆಗೂ ಕಳುಹಿಸಬೇಕು’ ಎಂದು ಆ.16ರಂದು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದಾರೆ.

ಸೋಷಿಯಲ್‌ ಮೀಡಿಯಾ ಬಳಸಿದರೆ ಪರಿಣಾಮ ಕೂಡ ಎದುರಿಸಿ: ಸುಪ್ರೀಂ ಖಡಕ್‌ ಉತ್ತರ

ಇಂತಹ ವರದಿಗಳನ್ನು ನೋಡಿಕೊಳ್ಳಲು ಸರ್ಕಾರ ಇಂಟಿಗ್ರೇಟೆಡ್‌ ಗ್ರೀವಿಯನ್ಸ್‌ ರಿಡ್ರೆಸ್ಸೆಲ್‌ ಸಿಸ್ಟಮ್‌ (ಐಜಿಆರ್‌ಎಸ್‌) ಸ್ಥಾಪಿಸಿದೆ. ಸರ್ಕಾರದ ವಿರುದ್ಧ ಮಾಧ್ಯಮದಲ್ಲಿ ವರದಿ ಪ್ರಕಟವಾದರೆ ಅಲ್ಲಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

‘ಸರ್ಕಾರದ ವಿರುದ್ಧ ಋುಣಾತ್ಮಕ ವರದಿ ಪ್ರಕಟಿಸಿದರೆ ತಕ್ಷಣ ಅದರ ಬಗ್ಗೆ ಜಿಲ್ಲಾಧಿಕಾರಿಗಳು ತನಿಖೆ ನಡೆಸಬೇಕು. ಏಕೆಂದರೆ ಅದರಿಂದ ಸರ್ಕಾರದ ಇಮೇಜಿಗೆ ಧಕ್ಕೆ ಬರುತ್ತದೆ. ಅಂತಹ ಲೇಖನಗಳನ್ನು ಐಜಿಆರ್‌ಎಸ್‌ನಲ್ಲಿ ನಮೂದಿಸಬೇಕು. ನಂತರ ಸಂಬಂಧಪಟ್ಟವಿಭಾಗೀಯ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಇಲಾಖಾ ಮುಖ್ಯಸ್ಥರಿಗೆ ಕ್ರಮಕ್ಕಾಗಿ ಕಳುಹಿಸಬೇಕು. ಈ ವಿಷಯದಲ್ಲಿ ಯಾವುದೇ ಮಧ್ಯಂತರ ವರದಿಗಳಿಗೆ ಅವಕಾಶವಿಲ್ಲ’ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಕೇರಳದಲ್ಲಿ ಆಫ್ರಿಕನ್‌ ಹಂದಿಜ್ವರ ಪತ್ತೆ: ಹಂದಿ ಕೊಲ್ಲಲು ಆದೇಶ

ಮೋದಿ ವರ್ಚಸ್ಸು, ಯೋಗಿ ಮ್ಯಾಜಿಕ್‌ನಿಂದ ಯುಪಿಯಲ್ಲಿ ಬಿಜೆಪಿಗೆ 80 ಎಂಪಿ ಸ್ಥಾನ
ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಮ್ಯಾಜಿಕ್‌, ರಾಮ ಮಂದಿರ ನಿರ್ಮಾಣ ಮುಂತಾದ ಅಂಶಗಳನ್ನು ಇಟ್ಟುಕೊಂಡು ಉತ್ತರ ಪ್ರದೇಶದಲ್ಲಿ 80 ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಯೋಜನೆ ರೂಪಿಸಿದೆ.

ಮುಂದಿನ ಬಾರಿ ಸರ್ಕಾರ ರಚನೆ ಮಾಡುವಲ್ಲಿ ಉತ್ತರ ಪ್ರದೇಶದ ಸಂಸದ ಸ್ಥಾನಗಳು ಪ್ರಮುಖ ಪಾತ್ರ ವಹಿಸುವುದರಿಂದ ಇದರ ಲಾಭ ಪಡೆದುಕೊಳ್ಳಲು ಬಿಜೆಪಿಯ ಸಾಮಾಜಿಕ ಜಾಲತಾಣ ತಂಡ ಮುಂದಾಗಿದೆ. ರಾಜ್ಯದಲ್ಲಿ ಹಿಂದು ನಾಯಕರಾಗಿ ಬೆಳೆದಿರುವ ಯೋಗಿ ಆದಿತ್ಯನಾಥ್‌ ವರ್ಚಸ್ಸು ರಾಜ್ಯದಲ್ಲಿ ಬಿಜೆಪಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ಹೊಂದಿದೆ. ‘ಮೋದಿ ಹಾಗೂ ಯೋಗಿ ಅವರಂತಹ ವರ್ಚಸ್ಸು ಹೊಂದಿರುವ ನಾಯಕರು ನಮ್ಮಲ್ಲಿದ್ದಾರೆ. ಆದರೂ ಸುಮ್ಮನಿರದೇ ನಮ್ಮ ಕಾರ್ಯಕರ್ತರು ಮುಂದಿನ ಚುನಾವಣೆ ಗೆಲ್ಲುವತ್ತ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ. 

Latest Videos
Follow Us:
Download App:
  • android
  • ios