ಕೇರಳದಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆ: ಹಂದಿ ಕೊಲ್ಲಲು ಆದೇಶ
ಕೇರಳದಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆ.ಕಣ್ಣೂರು ಜಿಲ್ಲೆಯ ಮಲಯಾಂಪದಿ ಗ್ರಾಮದಲ್ಲಿ ಪತ್ತೆ.ಸುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ ಹಂದಿ ಹತ್ಯೆಗೆ ಸೂಚನೆ.

ಕಣ್ಣೂರ್ (ಆ.20): ಕೇರಳದ ಕಣ್ಣೂರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆಯಾಗಿದೆ. ಅದರ ಬೆನ್ನಲ್ಲೇ ಜಿಲ್ಲಾಡಳಿತವು ಎರಡು ಫಾರ್ಮ್‌ಗಳಲ್ಲಿರುವ ಎಲ್ಲ ಹಂದಿಗಳನ್ನು ಕೊಂದು, ಮುನ್ನೆಚ್ಚರಿಕೆಯೊಂದಿಗೆ ಹೂತುಹಾಕಲು ಆದೇಶಿಸಿದೆ.
ಜಿಲ್ಲೆಯ ಕಣಿಚಾರ್ ಎಂಬ ಹಳ್ಳಿಯ ಸಮೀಪದ ಮಲಯಾಂಪದಿ ಎಂಬಲ್ಲಿರುವ ಖಾಸಗಿ ಹಂದಿ ಫಾರ್ಮ್‌ನಲ್ಲಿ ಆಫ್ರಿಕನ್ ಹಂದಿಜ್ವರದ ಸೋಂಕು ಪತ್ತೆಯಾಗಿದೆ. ಮಾದರಿಗಳನ್ನು ಪರೀಕ್ಷಿಸಿದ ಜಿಲ್ಲಾ ಪಶುಸಂಗೋಪನೆ ಅಧಿಕಾರಿಗಳು ಸೋಂಕನ್ನು ಖಚಿತಪಡಿಸಿದ್ದಾರೆ. ಬಳಿಕ ಜಿಲ್ಲಾಡಳಿತವು ಆ ಫಾರ್ಮ್ ಮತ್ತು 10 ಕಿ.ಮೀ. ಸುತ್ತಳತೆಯಲ್ಲಿರುವ ಇನ್ನೊಂದು ಫಾರ್ಮ್‌ನಲ್ಲಿರುವ ಹಂದಿಗಳನ್ನು ಕೊಂದು, ಹೂತುಹಾಕಲು ಆದೇಶಿಸಿದೆ.
ಸೋಷಿಯಲ್ ಮೀಡಿಯಾ ಬಳಸಿದರೆ ಪರಿಣಾಮ ಕೂಡ ಎದುರಿಸಿ: ಸುಪ್ರೀಂ ಖಡಕ್ ಉತ್ತರ
ಫಾರ್ಮ್‌ನ ಒಂದು ಕಿ.ಮೀ. ಸುತ್ತಲಿನ ಪ್ರದೇಶವನ್ನು ಸೋಂಕಿತ ಪ್ರದೇಶವೆಂದು ಘೋಷಿಸಲಾಗಿದೆ. ಅಲ್ಲಿಂದ ಹಂದಿ ಹಾಗೂ ಮಾಂಸವನ್ನು ಹೊರಗಿನ ಪ್ರದೇಶಗಳಿಗೆ ಸಾಗಿಸುವುದನ್ನು ಮೂರು ತಿಂಗಳ ಕಾಲ ನಿಷೇಧಿಸಲಾಗಿದೆ. ಇದೇ ವೇಳೆ, ಕಳೆದ ಎರಡು ತಿಂಗಳ ಅವಧಿಯಲ್ಲಿ ಸುತ್ತಮುತ್ತಲಿನ ಯಾವುದೇ ಫಾರ್ಮ್ ಗಳಲ್ಲಿ ಹಂದಿಗಳಿಗೆ ಜ್ವರ ಬಂದಿದ್ದರೆ ತಿಳಿಸಲು ಸೂಚಿಸಲಾಗಿದೆ.
ಹಂದಿ ಸಾಕಾಣಿಕೆ ಕೇಂದ್ರದ ಸುತ್ತಲಿನ ಒಂದು ಕಿಲೋಮೀಟರ್ ಪ್ರದೇಶವನ್ನು ಸೋಂಕು ಪತ್ತೆಯಾದ ಪ್ರದೇಶವೆಂದು ಘೋಷಿಸಲಾಗಿದೆ ಮತ್ತು 10 ಕಿಮೀ ವ್ಯಾಪ್ತಿಯನ್ನು ರೋಗ ಕಣ್ಗಾವಲು ವಲಯ ಎಂದು ಘೋಷಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಫೋರ್ಬ್ಸ್ ಪಟ್ಟಿಯ ಬಿಲಿಯನೇರ್ ಉದ್ಯಮಿ, ಭಾರತದ ಏಕೈಕ ಶ್ರೀಮಂತ ಮಹಿಳಾ ಸಿಇಓ ಈಕೆ
ಕಳೆದ ಎರಡು ತಿಂಗಳ ಹಿಂದೆ ಹಾನಿಗೊಳಗಾದ ಜಮೀನಿನಿಂದ ಹಂದಿಗಳನ್ನು ಬೇರೆ ಜಮೀನುಗಳಿಗೆ ಸಾಗಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಲು ತುರ್ತು ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಗ್ರಾ.ಪಂ.ವ್ಯಾಪ್ತಿಯಲ್ಲಿ ಎಲ್ಲಿಯಾದರೂ ಹೊಸ ರೋಗದ ಪ್ರಕರಣಗಳು ವರದಿಯಾದಲ್ಲಿ ವಿಪತ್ತು ನಿರ್ವಹಣಾ ಅಧಿಕಾರಿಗಳಿಗೆ ಆದಷ್ಟು ಬೇಗ ಮಾಹಿತಿ ನೀಡಬೇಕು ಎಂದು ಈ ಸಂಬಂಧ ಆದೇಶದಲ್ಲಿ ತಿಳಿಸಲಾಗಿದೆ. ರೋಗ ಮತ್ತಷ್ಟು ಹರಡುವುದನ್ನು ಪರಿಶೀಲಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಕುಗ್ರಾಮದಲ್ಲಿರುವ ಪಶುವೈದ್ಯಾಧಿಕಾರಿಗೆ ಸೂಚಿಸಲಾಗಿದೆ.