Asianet Suvarna News Asianet Suvarna News

ಸೋಷಿಯಲ್‌ ಮೀಡಿಯಾ ಬಳಸಿದರೆ ಪರಿಣಾಮ ಕೂಡ ಎದುರಿಸಿ: ಸುಪ್ರೀಂ ಖಡಕ್‌ ಉತ್ತರ

ಸೋಷಿಯಲ್‌ ಮೀಡಿಯಾ ಬಳಸುವವರು ಎಚ್ಚರಿಕೆಯಿಂದ ಇರಬೇಕು. ಜಾಲತಾಣ ಬಳಕೆ ಅಗತ್ಯ ಎಂದು ಭಾವಿಸಿದ್ದರೆ, ಅದರ ಪರಿಣಾಮ ಎದುರಿಸಲೂ ಸಿದ್ದರಿರಬೇಕು. ಕೇಸ್‌ ರದ್ದತಿ ಕೋರಿದ್ದ ತಮಿಳುನಾಡು ಮಾಜಿ ಶಾಸಕನ ಅರ್ಜಿ ವಜಾ. 

Social media users should be more careful about its impact says Supreme Court gow
Author
First Published Aug 20, 2023, 8:51 AM IST

ನವದೆಹಲಿ (ಆ.20): ಸಾಮಾಜಿಕ ಜಾಲತಾಣಗಳನ್ನು ಬಳಸುವವರು ತಮ್ಮ ಚಟುವಟಿಕೆಗಳಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಎಚ್ಚರದಿಂದ ಇರಬೇಕು. ಸೋಷಿಯಲ್‌ ಮೀಡಿಯಾ ಬಳಸುವುದು ತಮಗೆ ಅಗತ್ಯ ಎಂದು ಅವರು ಭಾವಿಸಿದ್ದರೆ ಅದರ ಪರಿಣಾಮಗಳನ್ನು ಎದುರಿಸಲೂ ಸಿದ್ಧರಿರಬೇಕು ಎಂದು ಸುಪ್ರೀಂಕೋರ್ಟ್‌ ತೀಕ್ಷ್ಣವಾಗಿ ಹೇಳಿದೆ.

ಕೇರಳದಲ್ಲಿ ಆಫ್ರಿಕನ್‌ ಹಂದಿಜ್ವರ ಪತ್ತೆ: ಹಂದಿ ಕೊಲ್ಲಲು ಆದೇಶ

ತಮಿಳುನಾಡಿನ ಮಾಜಿ ಶಾಸಕ ಹಾಗೂ ನಟ ಎಸ್‌.ವಿ.ಶೇಖರ್‌ ಎಂಬುವರು 2018ರಲ್ಲಿ ಫೇಸ್‌ಬುಕ್‌ನಲ್ಲಿ ಪತ್ರಕರ್ತೆಯರ ಬಗ್ಗೆ ಅವಹೇಳನಕಾರಿಯಾದ ಪೋಸ್ಟ್‌ ಒಂದನ್ನು ಶೇರ್‌ ಮಾಡಿದ್ದರು. ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಾಗಿತ್ತು. ಅದನ್ನು ರದ್ದುಪಡಿಸುವಂತೆ ಅವರು ಮದ್ರಾಸ್‌ ಹೈಕೋರ್ಟ್‌ ಗೆ ಹೋಗಿದ್ದರು. ಅಲ್ಲಿ ಅರ್ಜಿ ವಜಾಗೊಂಡಿತ್ತು. ಅವರು ಸುಪ್ರೀಂಕೋರ್ಟ್‌ ಗೆ ಮೇಲ್ಮನವಿ ಸಲ್ಲಿಸಿದ್ದರು. ಅದನ್ನು ಶುಕ್ರವಾರ ವಜಾಗೊಳಿಸಿದ ಸುಪ್ರೀಂಕೋರ್ಟ್‌ , ‘ಸೋಷಿಯಲ್‌ ಮೀಡಿಯಾ ಬಳಕೆದಾರರು ಎಚ್ಚರಿಕೆಯಿಂದ ಇರಬೇಕು’ ಎಂದು ಕಿವಿಮಾತು ಹೇಳಿತು.

ಫೋರ್ಬ್ಸ್ ಪಟ್ಟಿಯ ಬಿಲಿಯನೇರ್‌ ಉದ್ಯಮಿ, ಭಾರತದ ಏಕೈಕ ಶ್ರೀಮಂತ ಮಹಿಳಾ ಸಿಇಓ ಈಕೆ

ಶೇಖರ್‌ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಶೇರ್‌ ಮಾಡುವಾಗ ಕಣ್ಣಿಗೆ ಔಷಧಿ ಬಿಟ್ಟುಕೊಂಡಿದ್ದರು. ಹೀಗಾಗಿ ಅವರಿಗೆ ಅಲ್ಲಿ ಏನು ಬರೆದಿದೆ ಎಂಬುದು ಸರಿಯಾಗಿ ಕಾಣಿಸಿರಲಿಲ್ಲ. ಪೋಸ್ಟ್‌ನಲ್ಲಿ ಪತ್ರಕರ್ತೆಯರ ಬಗ್ಗೆ ಅವಹೇಳನಕಾರಿಯಾದ ಅಂಶವಿರುವುದು ತಿಳಿದ ಕೂಡಲೇ ಅದನ್ನವರು ಡಿಲೀಟ್‌ ಮಾಡಿದ್ದರು ಎಂದು ಅವರ ಪರ ವಕೀಲರು ವಾದಿಸಿದ್ದರು. ಅದನ್ನು ಸುಪ್ರೀಂಕೋರ್ಟ್‌ ಒಪ್ಪಿಕೊಳ್ಳಲಿಲ್ಲ.

Follow Us:
Download App:
  • android
  • ios