Asianet Suvarna News Asianet Suvarna News

ಯೋಗಿ ಆದಿತ್ಯನಾಥ್‌ ಸಹೋದರ ಶೈಲೇಂದ್ರ ಸೇನೆಯಲ್ಲಿ ಸುಬೇದಾರ್‌ ಮೇಜರ್‌ ಆಗಿ ಬಡ್ತಿ

ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಸುಬೇದಾರ್‌ ಮೇಜರ್‌ ಶೈಲೇಂದ್ರ ಅವರು ಭಾರತ-ಚೀನಾ ನಡುವಿನ ಎಲ್‌ಎಸಿಯಲ್ಲಿ ಸೇವೆ ಸಲ್ಲಿಸಯತ್ತಿದ್ದಾರೆ. ಗರ್ವಾಲ್‌ ಸ್ಕೌಟ್ಸ್‌ ರೆಜಿಮೆಂಟ್‌ನಲ್ಲಿ ಸುಬೇದಾರ್‌ ಮೇಜರ್‌ ಎನ್ನೋದು, ಅತ್ಯುನ್ನತ ನಿಯೋಜಿಸದ ಅಧಿಕಾರಿ ಶ್ರೇಣಿಯಾಗಿದೆ.
 

Uttar Pradesh CM Yogi Adityanath brother Shailendra  promoted as Subedar Major in Indian Army san
Author
First Published Sep 4, 2023, 2:06 PM IST

ನವದೆಹಲಿ (ಸೆ.4): ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಹೋದರ ಶೈಲೇಂದ್ರ ಮೋಹನ್ ಅವರನ್ನು ಸುಬೇದಾರ್ ಮೇಜರ್ ಆಗಿ ಬಡ್ತಿ ನೀಡಲಾಗಿದೆ, ಇದು ಗರ್ವಾಲ್‌  ಸ್ಕೌಟ್ಸ್ ರೆಜಿಮೆಂಟ್‌ನಲ್ಲಿ ಅತ್ಯುನ್ನತ ನಿಯೋಜಿತವಲ್ಲದ ಅಧಿಕಾರಿ ಶ್ರೇಣಿಯಾಗಿದೆ. ಅಧಿಕಾರಿಗಳ ಪ್ರಕಾರ, ಸುಬೇದಾರ್ ಮೇಜರ್ ಶೈಲೇಂದ್ರ ಅವರು ಚೀನಾದೊಂದಿಗಿನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಯೋಗಿ ಆದಿತ್ಯನಾಥ್ ಅವರಿಗೆ ಮೂವರು ಸಹೋದರರಿದ್ದಾರೆ. ಮನ್ವೇಂದ್ರ ಮೋಹನ್ ಅವರ ಅಣ್ಣನಾಗಿದ್ದರೆ, ಶೈಲೇಂದ್ರ ಮತ್ತು ಮಹೇಂದ್ರ ಮೋಹನ್ ಅವರಿಗಿಂತ ಚಿಕ್ಕವರು. ಗರ್ವಾಲ್‌ ಸ್ಕೌಟ್ ಘಟಕವು ಆಯಕಟ್ಟಿನ ಬೆಟ್ಟದ ಗಡಿಗಳನ್ನು ಕಾವಲು ಮಾಡುವ ಸಲುವಾಗಿ ಸ್ಥಳೀಯ ಸೈನಿಕರನ್ನೇ ಪ್ರತ್ಯೇಕವಾಗಿ ನೇಮಿಸಿಕೊಳ್ಳುತ್ತದೆ. ಎದುರು ಭಾಗದಲ್ಲಿ ನೆಲೆಸಿರುವ ಚೀನೀ ಪಡೆಗಳಿಂದ ಹೆಚ್ಚುತ್ತಿರುವ ಒಳನುಸುಳುವಿಕೆಯ ಬೆದರಿಕೆಗಳಿಂದಾಗಿ ಈ ಗಡಿಗಳು ಪ್ರಾಮುಖ್ಯತೆಯನ್ನು ಹೊಂದಿದೆ.

ಕೆಲವು ವರ್ಷಗಳ ಹಿಂದೆ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಅಂದಿನ ಸುಬೇದಾರ್ ಶೈಲೇಂದ್ರ ಅವರು ಭಾರತೀಯ ಸೇನೆಯೊಂದಿಗೆ ತಮ್ಮ ಬಾಂಧವ್ಯದ ಬಗ್ಗೆ ಅಪಾರ ಹೆಮ್ಮೆ ಮತ್ತು ತಮ್ಮ ತಾಯ್ನಾಡನ್ನು ರಕ್ಷಿಸುವ ಅಚಲ ಸಂಕಲ್ಪವನ್ನು ವ್ಯಕ್ತಪಡಿಸಿದ್ದರು. ಅದೇ ಸಂದರ್ಶನದಲ್ಲಿ, ಅವರು ಪ್ರಸ್ತುತ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ತಮ್ಮ ಹಿರಿಯ ಸಹೋದರ ಯೋಗಿ ಆದಿತ್ಯನಾಥ್ ಅವರ ಬಗ್ಗೆ ಆಳವಾದ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ದುರದೃಷ್ಟವಶಾತ್, ಸಮಯದ ಕೊರತೆಯಿಂದಾಗಿ, ಅವರು ತಮ್ಮ ಸಹೋದರನನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ.

ರಕ್ಷಾ ಬಂಧನಕ್ಕೆ ಸೋದರಿಯರಿಗೆ ಯೋಗಿ ಆದಿತ್ಯನಾಥ್‌ ಸರ್ಕಾರದ ಗಿಫ್ಟ್‌: ಉಚಿತ ಬಸ್‌ ಪ್ರಯಾಣ ಘೋಷಣೆ

ಯೋಗಿ ಆದಿತ್ಯನಾಥ್ ಹಾಗೂ ಅವರೊಂದಿಗಿನ ತಮ್ಮ ಕೊನೆಯ ಮುಖಾಮುಖಿಯನ್ನು ನೆನಪಿಸಿಕೊಂಡ ಅವರು, ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದೆ ಎನ್ನುವುದನ್ನು ನೆನಪಿಸಿಕೊಂಡಿದ್ದಾರೆ. ತಮ್ಮ ಹಿರಿಯ ಸಹೋದರನ ಬಗ್ಗೆ ಚರ್ಚಿಸುವಾಗ, ಮೋಹನ್ ಅವರು ಯೋಗಿ ಆದಿತ್ಯನಾಥ್ ಅವರು ರಾಷ್ಟ್ರದ ಸೇವೆಗೆ ತಮ್ಮನ್ನು ಅರ್ಪಿಸಿಕೊಳ್ಳಲು ಪ್ರೋತ್ಸಾಹಿಸಿದ್ದಾರೆ ಎಂದು ಒತ್ತಿ ಹೇಳಿದರು. ತಮ್ಮ ಕುಟುಂಬದಲ್ಲಿ ಪ್ರೀತಿಯಿಂದ 'ಮಹಾರಾಜ್ ಜೀ' ಎಂದು ಕರೆಯಲ್ಪಡುವ ತಮ್ಮ ಮತ್ತು ಯೋಗಿ ಆದಿತ್ಯನಾಥ್ ನಡುವೆ ಸಮಾನಾಂತರಗಳನ್ನು ತಿಳಿಸಿದ್ದ ಶೈಲೇಂದ್ರ, ಇಬ್ಬರೂ ಸಹೋದರರು ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ತಮ್ಮ ಕರ್ತವ್ಯಕ್ಕೆ ಬದ್ಧರಾಗಿದ್ದಾರೆ ಎಂದು ತಿಳಿಸಿದ್ದರು.

ಉತ್ತರಪ್ರದೇಶದಲ್ಲಿ ಯೋಗಿ ಸರ್ಕಾರದ ವಿರುದ್ಧ ವರದಿ ಮಾಡಿದ್ರೆ ಹದ್ದಿನ ಕಣ್ಣು, ಮಾಧ್ಯಮಗಳಿಗೆ ನೋಟಿಸ್‌

ಸಿಎಂ ಸಹೋದರ ಉತ್ತಮ ಸೈನಿಕ.ರಾಜಕಾರಣಿಗಳು ತಮ್ಮ ನಿಕಟ ಕುಟುಂಬದಲ್ಲಿ ಉತ್ತಮ ಸೈನಿಕರು ಅಥವಾ ರೈತರನ್ನು ಹೊಂದಿದ್ದರೆ ಅವರು ಈ ದೇಶದ ನೆಲದ ವಾಸ್ತವಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಸಾಮಾನ್ಯ ಜನರೊಂದಿಗೆ ಸಹಾನುಭೂತಿ ಹೊಂದುತ್ತಾರೆ. ಅವರು ಅದನ್ನು ಅರ್ಥಮಾಡಿಕೊಳ್ಳದಿದ್ದರೆ ಅವರು ನಾಯಕರಾಗಲು ಅರ್ಹರಲ್ಲ. ನಾನು ಸುಬೇದಾರ್ ಮೇಜರ್ ಅವರಿಗೆ ಶುಭ ಹಾರೈಸುತ್ತೇನೆ, ಅವರು ಸೈನಿಕನಾಗಿರುವುದಕ್ಕೆ ನನಗೆ ಹೆಮ್ಮೆ ತಂದಿದೆ ಎಂದು ನಿವೃತ್ತ ಕರ್ನಲ್‌ ಬಿಎಸ್‌ ರಾಜಾವತ್‌ ಹೇಳಿದ್ದಾರೆ.

Follow Us:
Download App:
  • android
  • ios