Asianet Suvarna News Asianet Suvarna News

Madrassas survey ಆದೇಶಿಸಿದ ಸಿಎಂ ಯೋಗಿಗೆ ಮಕ್ಕಳ ಹಕ್ಕುಗಳ ಆಯೋಗದಿಂದ ಮಹತ್ವದ ಪತ್ರ

ಉತ್ತರ ಪ್ರದೇಶದಲ್ಲಿ ಅನಧಿಕೃತ, ಅಕ್ರಮ ಮದರಸಾಗಳ ಸಮೀಕ್ಷೆ ನಡೆಸಲು ಸಿಎಂ ಯೋಗಿ ಆದಿತ್ಯನಾಥ್ ನಿರ್ದೇಶನ ನೀಡಿದ್ದಾರೆ. ಇದರಂತೆ ಸರ್ವೆ ಕಾರ್ಯ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಮಹತ್ವದ ಪತ್ರ ಬಂದಿದೆ. ಈ ಕುರಿತ ವಿವರ ಇಲ್ಲಿವೆ.

Uttar Pradesh child Rights body ask CM Yogi adityanth to shut down unrecognized madrassas ckm
Author
First Published Sep 9, 2022, 6:15 PM IST

ಲಖನೌ(ಸೆ.09): ಸಿಎಂ ಯೋಗಿ ಆದಿತ್ಯನಾಥ್ ನೇೃತ್ವದ ಉತ್ತರ ಪ್ರದೇಶ ಸರ್ಕಾರ ರಾಜ್ಯದಲ್ಲಿರುವ ಅನಧಿಕೃತ, ಅಕ್ರಮ ಮದರಸಾಗಳ ಸಮೀಕ್ಷೆ ನಡೆಸಲು ಆದೇಶಿಸಿದೆ. ಕಾನೂನುಬಾಹಿರವಾಗಿರುವ ಮದರಸಾಗಳ ಕೆಡವಲು ಪ್ಲಾನ್ ರೆಡೆಯಾಗಿದೆ. ಸಿಎಂ ಯೋಗಿ ಆದೇಶ ಭಾರಿ ವಿವಾದಕ್ಕೆ ಕಾರಣವಾಗಿದೆ. ಇದು ಮುಸ್ಲಿಂರ ಮೇಲೆ ದಬ್ಬಾಳಿಕೆ, ಅಲ್ಪಸಂಖ್ಯಾತರ ಮೇಲೆ ಬಿಜೆಪಿ ಸವಾರಿ ಮಾಡುತ್ತಿದೆ ಅನ್ನೋ ಆರೋಪ, ಪ್ರತಿಭಟನೆಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ಉತ್ತರ ಪ್ರದೇಶ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮಹತ್ವದ ಪತ್ರ ಬರೆದಿದೆ. ಯೋಗಿ ಆದಿತ್ಯನಾಥ್‌ಗೆ ರವಾನಿಸಿರುವ ಈ ಪತ್ರದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮಹತ್ವದ ವಿಚಾರವನ್ನು ಒತ್ತಿ ಒತ್ತಿ ಹೇಳಿದೆ. ಉತ್ತರ ಪ್ರದೇಶದಲ್ಲಿರುವ ಅನಧಿಕೃತ, ಅಕ್ರಮ ಹಾಗೂ ಕಾನೂನುಬಾಹಿರ ಮದರಸಾಗಳನ್ನು ತಕ್ಷಣ ಮುಚ್ಚುವಂತೆ ಆಗ್ರಹಿಸಿದೆ. ಇಂತಹ ಮದರಸಾಗಳಲ್ಲಿ ಮಕ್ಕಳ ಶೋಷಣೆಯಾಗುತ್ತಿದೆ. ಶಿಕ್ಷಣ ನೀಡಬೇಕಿದ್ದ ಮದರಸಾಗಳಲ್ಲಿ ಈ ಕಾರ್ಯಗಳು ನಡೆಯುತ್ತಿಲ್ಲ. ಹೀಗಾಗಿ ತಕ್ಷಣವೇ ಈ ಮದರಸಾಗಳನ್ನು ಗುರುತಿಸಿ ಮುಚ್ಚಬೇಕು ಎಂದು ಆಗ್ರಹಿಸಿದೆ.

ಅನಧಿಕೃತ ಮದರಸಾ(madrassas), ಮದರಸಾಗಳಲ್ಲಿರುವ ಶಿಕ್ಷಕರು, ವಿದ್ಯಾರ್ಥಿಗಳು, ಪಠ್ಯಕ್ರಮ, ಸರ್ಕಾರೇತರ ಸಂಸ್ಥೆಯೊಂದಿಗಿರುವ ಸಂಬಂಧ, ಖಾಸಗಿ ಕಟ್ಟಡ ಅಥವಾ ಬಾಡಿಗೆ ಕಟ್ಟಡ, ಮದರಸಾದಲ್ಲಿನ ಮೂಲಭೂತ ಸೌಕರ್ಯ ಸೇರಿದಂತೆ ಹಲವು ವಿಚಾರಗಳನ್ನು ಸಮೀಕ್ಷೆ ಮೂಲಕ ಖಚಿತಪಡಿಸಿಕೊಳ್ಳಲು ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ. 

ಯೋಗಿಯೇ ಈ ದೇಶದ ಮುಂದಿನ ಬಲಿಷ್ಠ ಪ್ರಧಾನಿ; ಅನಿರುಧ್ ಮಿಶ್ರಾ ಭವಿಷ್ಯ!

ಸದ್ಯ ಉತ್ತರ ಪ್ರದೇಶದಲ್ಲಿ 16,461 ಮದರಸಾಗಳು(survey of unrecognised madrassas) ಕಾರ್ಯನಿರ್ವಹಿಸುತ್ತಿದೆ. ಆದರೆ ಸರ್ಕಾದಿಂದ(Uttar Pradesh Government) ಮಾನ್ಯತೆ ಪಡೆದಿರುವ ಮದರಸಾಗಳ ಸಂಖ್ಯೆ 560 ಮಾತ್ರ. ಇನ್ನುಳಿದ ಮದರಸಗಳಲ್ಲಿನ ಶಿಕ್ಷಣ ಯಾವ ರೀತಿ ಇದೆ ಅನ್ನೋದು ಯಾರಿಗೂ ತಿಳಿದಿಲ್ಲ. ಕಳೆದ 6 ವರ್ಷಗಳಿಂದ ಸರ್ಕಾರದಿಂದ ಅನುದಾನ ಪಟ್ಟಿಯಲ್ಲಿ ಹೊಸದಾಗಿ ಯಾವುದೇ ಮದರಸಾಗಳು ಸೇರ್ಪಡೆಯಾಗಿಲ್ಲ. ಈ ಎಲ್ಲಾ ವಿಚಾರಗಳ ಕುರಿತು ಸಮೀಕ್ಷೆ ನಡೆಯುತ್ತಿದೆ.

ಯೋಗಿ ಆದಿತ್ಯನಾಥ್(CM Yogi Adityanath) ಸಮೀಕ್ಷೆ ಸೂಚನೆ ಬೆನ್ನಲ್ಲೇ ಇದೀಗ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(State Commission for Protection of Child Rights), ಅನಧಿಕತ, ಅಕ್ರಮ ಮದರಸಾಗಳನ್ನು ತಕ್ಷಣ ಮುಚ್ಚುವಂತೆ ಸೂಚಿಸಿದೆ. ಇಲ್ಲ ಶಿಕ್ಷಣದ ಬದಲು ಮಕ್ಕಳ ಶೋಷಣೆಗಳಾಗುತ್ತಿದೆ ಎಂದಿದೆ.

 

ಮದರಸಾ ಸಮೀಕ್ಷೆ ನಿಯಮ ಮಠದ ಮೇಲಿಲ್ಲ ಯಾಕೆ? ಮುಸ್ಲಿಂ ಲಾ ಬೋರ್ಡ್ ಪ್ರಶ್ನೆ!

ಉಗ್ರ ಚಟುವಟಿಕೆಗೆ ನೆರವು: ಅಸ್ಸಾಂನಲ್ಲಿ 4ನೇ ಮದರಸಾ ಧ್ವಂಸ
ಆಸ್ಸಾಂನ ಗೋಲ್ಪಾರಾ ಜಿಲ್ಲೆಯ ಮದರಸಾವೊಂದರಲ್ಲಿ ಅಕ್ರಮ ಭಯೋತ್ಪಾದನಾ ಚಟುವಟಿಕೆ ನಡೆಯುತ್ತಿದ್ದದ್ದು ಬೆಳಕಿಗೆ ಬಂದ ಬೆನ್ನಲ್ಲೇ ಸ್ಥಳೀಯ ನಿವಾಸಿಗಳು ಮದರಸಾ ಅದರ ಪಕ್ಕದ್ದಲ್ಲಿದ್ದ ಮನೆಯೊಂದನ್ನು ಮಂಗಳವಾರ ಧ್ವಂಸಗೊಳಿಸಿದ್ದಾರೆ. ಪ್ರಕರಣ ಸಂಬಂಧ ಜಲಾಲುದ್ದೀನ್‌ ಎಂಬಾತನನ್ನು ಇತ್ತೀಚಿಗೆ ಬಂಧಿಸಲಾಗಿತ್ತು. ಜೊತೆಗೆ ಇದೇ ಪ್ರಕರಣದಲ್ಲಿ ಬಾಂಗ್ಲಾ ಮೂಲದ ಇಬ್ಬರು ಉಗ್ರರು ಪರಾರಿಯಾಗಿದ್ದರು. ಈ ವಿಷಯ ಬೆಳಕಿಗೆ ಬಂದ ಬೆನ್ನಲ್ಲೇ ಸ್ಥಳೀಯರು ಮನೆ ಮತ್ತು ಮದರಸಾ ಧ್ವಂಸಗೊಳಿಸಿದ್ದಾರೆ. ಉಗ್ರ ಕೃತ್ಯ ಬೆಳಕಿಗೆ ಬಂದ ಬಳಿಕ ಧ್ವಂಸಗೊಂಡ 4ನೇ ಮದರಸಾ ಇದಾಗಿದೆ.

Follow Us:
Download App:
  • android
  • ios