83 ವರ್ಷದ ನಿವೃತ್ತ ಬಸ್‌ ಚಾಲಕರೊಬ್ಬರಿಗೆ 29 ವರ್ಷದ ಹಳೆ ಕೇಸಿನ ಸಂಬಂಧ ಪೊಲೀಸರು ಅರೆಸ್ಟ್‌ ವಾರೆಂಟ್‌ ಜಾರಿ ಮಾಡಿದ ವಿಚಿತ್ರ ಘಟನೆ ಇಲ್ಲಿನ ಬರೇಲಿಯಲ್ಲಿ ನಡೆದಿದೆ. 

ಲಖನೌ: 83 ವರ್ಷದ ನಿವೃತ್ತ ಬಸ್‌ ಚಾಲಕರೊಬ್ಬರಿಗೆ 29 ವರ್ಷದ ಹಳೆ ಕೇಸಿನ ಸಂಬಂಧ ಪೊಲೀಸರು ಅರೆಸ್ಟ್‌ ವಾರೆಂಟ್‌ ಜಾರಿ ಮಾಡಿದ ವಿಚಿತ್ರ ಘಟನೆ ಇಲ್ಲಿನ ಬರೇಲಿಯಲ್ಲಿ ನಡೆದಿದೆ. 

ಅಚ್ಚನ್‌ ಎಂಬ ನಿವೃತ್ತ ಸಾರಿಗೆ ಸಂಸ್ಥೆ ಚಾಲಕರು 29 ವರ್ಷದ ಹಿಂದೆ ಎಮ್ಮೆಯೊಂದಕ್ಕೆ ಡಿಕ್ಕಿ ಹೊಡೆದಿದ್ದರು. ಹೀಗಾಗಿ ಅತಿ ವೇಗದ ಚಾಲನೆ ಅಡಿ ದೂರು ದಾಖಲಾಗಿತ್ತು. ಈ ದೂರನ್ನು ಈಗ ವಿಚಾರಣೆಗೆ ಕೈಗೆತ್ತಿಕೊಂಡಿರುವ ಪೊಲಿಸರು, ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿರುವ ಅಚ್ಚನ್‌ ಅವರ ಮನೆಗೆ ಬಂದು ಅರೆಸ್ಟ್‌ ವಾರೆಂಟ್‌ ತೋರಿಸಿದ್ದಾರೆ. ಬಳಿಕ ಅವರ ಸ್ಥಿತಿ ಕಂಡು ಜು.17ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಆದೇಶಿಸಿದ್ದಾರೆ. ಇಲ್ಲವಾದರೆ ಬಲವಂತವಾಗಿ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ಪೊಲೀಸರು ಇಟ್ಟುಕೊಂಡ ದಾಖಲೆ ಕಂಡು ಹೌಹಾರಿದ ಪೂಜಾರಿ

20 ವರ್ಷ ಹಳೆ ಕೊಲೆ ಪ್ರಕರಣ: ಸಿಎಂ ಯೋಗಿಗೆ ಕ್ಲೀನ್ ಚಿಟ್!