ಲಕ್ನೋ[ಜು.17]: 20 ವರ್ಷ ಹಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿಶೇಷ ನ್ಯಾಯಾಲಯ ಕ್ಲೀನ್ ಚಿಟ್ ನೀಡಿದೆ. 

ಹೌದು 20 ವರ್ಷ ಹಿಂದೆ 1999ರಲ್ಲಿ ಮುಖ್ಯ ಪೊಲೀಸ್ ಪೇದೆ ಸತ್ಯ ಪ್ರಕಾಶ್ ಯಾದವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ದೂರು ದಾಖಲಾಗಿತ್ತು. ಇಂದು ಪ್ರಕರಣದ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಯೋಗಿ ಆದಿತ್ಯನಾಥ್ ವಿರುದ್ಧ ದಾಖಲಾಗಿದ್ದ ಕೊಲೆ ಪ್ರಕರಣವನ್ನು ವಜಾಗೊಳಿಸಿದೆ. ಈ ಮೂಲಕ ಉತ್ತರ ಪ್ರದೇಶ ಸಿಎಂಗೆ ಬಿಗ್ ರಿಲೀಫ್ ಸಿಕ್ಕಿದೆ.

ಸಮಾಜವಾದಿ ಪಕ್ಷದ ನಾಯಕ ತಲತ್ ಅಜಿಜ್ ಗನ್ ಮ್ಯಾನ್ ಆಗಿದ್ದ ಮುಖ್ಯ ಪೊಲೀಸ್ ಪೇದೆ ಸತ್ಯ ಪ್ರಕಾಶ್ ಮಹಾರಾಜ್ ಗಂಜ್ ನಲ್ಲಿ ಸಮಾಜವಾದಿ ಪಕ್ಷ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಆದಿತ್ಯನಾಥ್ ಬೆಂಬಲಿಗರು ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದರು.