ಮುಖ್ಯ ರಸ್ತೆಯಲ್ಲಿ ನಡೆದ ಘಟನೆ ಬಗ್ಗೆ ಪೋಸ್ಟ್‌ ಹಾಕಿದ ಖ್ಯಾತ ನಟಿ. ಭಿಕ್ಷೆ ಮಾಡುವವರಿಂದ ಬೇಸರ ವ್ಯಕ್ತ ಪಡಿಸಿದ ನಟಿ......

ಮಧುರೈ ಮೂಲಕ ನಿವೇತಾ ಪೇತುರಾಜ್‌ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಸುಮಾರು ಏಳೆಂಟು ವರ್ಷಗಳಿಂದ ಬಣ್ಣದ ಪ್ರಪಂಚದಲ್ಲಿ ಸಖತ್ ಬ್ಯುಸಿಯಾಗಿರುವ ಸುಂದರಿ ಕೆಲವು ದಿನಗಳ ಹಿಂದೆ ಚೆನ್ನೈನ ಮುಖ್ಯ ರಸ್ತೆಯಲ್ಲಿ ಪ್ರಯಾಣ ಮಾಡುವಾಗ ಸಿಗ್ನಲ್‌ನಲ್ಲಿ ನಡೆದ ಕಹಿ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಪುಟ್ಟ ಬಿಕ್ಷುಕನಿಂದ ಹೀಗೆ ಆಗಿರುವುದು ಮನಸ್ಸಿಗೆ ನೋವಾಗಿದೆ ಎಂದು ಹೇಳಿಕೊಂಡಿದ್ದಾರೆ. 

ಹೌದು! ಚೆನ್ನೈನ ಆಡ್ಯಾರ್ ಸರ್ಕಲ್‌ನಲ್ಲಿ ಪ್ರಯಾಣ ಮಾಡುವಾಗ ನಿವೇತಾ ಸಿಗ್ನಲ್‌ನಲ್ಲಿ ನಿಂತಿದ್ದಾರೆ. ಕೆಲವು ನಿಮಿಷಗಳ ಕಾಲ ಮಾತ್ರವೇ ನಿವೇತಾ ಕಾರು ನಿಂತಿತ್ತು ಅಗ ಏಳೆಂಟು ವರ್ಷ ಹುಡುಗೊಬ್ಬ ಬಂದು ಹಣ ಕೇಳಿದ್ದಾನೆ. ಮೊದಲು ನಿವೇತಾ ನಿರಾಕರಿಸಿದ್ದಾರೆ ಆದರೆ ಪುಸ್ತಕ ತೋರಿಸಿ 100 ರೂಪಾಯಿಗೆ ಕೊಡುವುದಾಗಿ ಹೇಳಿದ್ದಾನೆ, ಪುಟ್ಟ ಹುಡುಗ ಕಷ್ಟ ಪಟ್ಟು ಜೀವನ ಮಾಡುತ್ತಿದ್ದಾನೆ ಎಂದು ನಿವೇತಾ ಮನಸ್ಸು ಕರಗಿ 100 ರೂಪಾಯಿ ಕೊಟ್ಟು ಪುಸ್ತಕ ಖರೀದಿಸಲು ಮುಂದಾಗಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಪುಟ್ಟ ಹುಡುಗ 500 ರೂಪಾಯಿಗಳನ್ನು ಕೇಳಿದ್ದಾರೆ. ಕೊಡುತ್ತಿದ್ದ 100 ರೂಪಾಯಿಯನ್ನು ನಿವೇತಾ ಹಿಂದೆ ಪಡೆದಿದ್ದಾರೆ ಆದರೆ ಪುಟ್ಟ ಹುಡುಗ ಕೈಯಲ್ಲಿ ಇದ್ದ ಪುಸ್ತಕವನ್ನು ಕಾರಿನ ಕೆಳಗೆ ಎಸೆದು ಕೈಯಲ್ಲಿದ್ದ 100 ರೂಪಾಯಿ ಹಣವನ್ನು ಕಿತ್ತುಕೊಂಡು ಓಡಿ ಹೋಗಿದ್ದಾನೆ. 

ಕನಕಪುರದಲ್ಲಿ ಫಾರ್ಮ್‌ಹೌಸ್‌ ಗೃಹಪ್ರವೇಶ ಮಾಡಿದ ಶಿವರಾಜ್‌ಕುಮಾರ್; ಫೋಟೋ ವೈರಲ್

100 ರೂಪಾಯಿ ಮುಖ್ಯವಲ್ಲ ಆದರೆ ಪುಟ್ಟ ಹುಡುಗನ ವರ್ತನೆ ನಿಜಕ್ಕೂ ಬೇಸರ ಆಗಿದೆ ಎಂದು ನಿವೇತಾ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ. 100 ರೂಪಾಯಿ ಕೊಡಲು ಅಷ್ಟೋಂದು ಲೆಕ್ಕಾಚಾರ ಮಾಡಿರುವುದಕ್ಕೆ ನಿವೇತಾ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ ಆದರೆ ಇನ್ನೂ ಕೆಲವರು ನೀವು ಆತನನ್ನು ಹಿಡಿಯಬೇಕಿತ್ತು ನೀವು ಇದಕ್ಕೆ ಸಪೋರ್ಟ್ ಮಾಡಬಾರದು ಎಂದು ಕಾಮೆಂಟ್ ಮಾಡಿದ್ದಾರೆ. 

ನನ್ನ ಹೆಂಡತಿ ಮೊನಾಲಿಸಾ, ಮಿಸ್ ಇಂಡಿಯಾ ಮಿಸ್ ಯೂನಿವರ್ಸ್‌; ಮಾನಸ ಕಾಲೆಳೆದ

'ಓರು ನಾಲ್ ಕೂತು' ಚಿತ್ರದ ಮೂಲಕ ಬಣ್ಣದ ಜರ್ನಿ ಆರಂಭಿಸಿದ ನಿವೇತಾ ಟಿಕ್‌ ಟಿಕ್‌ ಟಿಕ್‌, ಚಿತ್ರಲಹರಿ, ಸಂಗತಮಿಳನ್, ಅಲಾ ವೈಕುಂಠಪುರಂಲೋ, ರೆಡ್‌, ಪಾಗಲ್, ದಸ್ ಕಾ ದಮ್ಮಿ, ಪಾರ್ಟಿ ಸೇರಿದಂತೆ ಬಿಗ್ ಬಜೆಟ್ ಸೂಪರ್ ಹಿಟ್ ಸಿನಿಮಾಗಳಲ್ಲಿ ನಿವೇತಾ ನಟಿಸಿದ್ದಾರೆ.