ಅಂಗಡಿಯೊಂದರ ಮುಂದೆ ನಿಲ್ಲಿಸಿದ ಟ್ರಾಕ್ಟರೊಂದು ಚಾಲಕನಿಲ್ಲದಿದ್ದಾಗ ಏಕಾಏಕಿ ಚಲಿಸಲು ಆರಂಭಿಸಿ ಸಮೀಪದ ಅಂಗಡಿಯೊಂದರ ಗ್ಲಾಸ್ ಮುರಿದು ಒಳನುಗ್ಗಿದ ಘಟನೆ ಉತ್ತರಪ್ರದೇಶದ (Uttar Pradesh) ಬಿಜ್ನೋರ್‌ನಲ್ಲಿ ನಡೆದಿದೆ.
ಬಿಜ್ನೋರ್:ಅಪಘಾತದ ಹಲವು ವಿಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ಆಗಾಗ ನೋಡುತ್ತಿರುತ್ತೇವೆ. ಕೆಲವು ಅಪಘಾತಗಳು ಮಾನವ ನಿರ್ಮಿತ ತಪ್ಪಿನಿಂದಾದಾರೆ ಮತ್ತೆ ಕೆಲವು ಅಪಘಾತಗಳು ಅಚಾನಕ್ ಆಗಿ ಸಂಭವಿಸುತ್ತೇವೆ. ನಿಂತಿದ್ದ ವಾಹನಗಳು ಇದ್ದಕ್ಕಿದ್ದಂತೆ ಚಲಿಸಲು ಆರಂಭಿಸಿ ಅಪಘಾತಗಳಾದ ಹಲವು ಘಟನೆಗಳು ನಡೆದಿವೆ. ಅದೇ ರೀತಿ ಈಗ ನಿಂತಿದ್ದ ಟ್ರಾಕ್ಟರೊಂದು ಏಕಾಏಕಿ ಚಲಿಸಿದ್ದು ಯಾವುದೇ ಜೀವಹಾನಿಯಾಗಿಲ್ಲ. ಅಂಗಡಿಯೊಂದರ ಮುಂದೆ ನಿಲ್ಲಿಸಿದ ಟ್ರಾಕ್ಟರೊಂದು ಚಾಲಕನಿಲ್ಲದಿದ್ದಾಗ ಏಕಾಏಕಿ ಚಲಿಸಲು ಆರಂಭಿಸಿ ಸಮೀಪದ ಅಂಗಡಿಯೊಂದರ ಗ್ಲಾಸ್ ಮುರಿದು ಒಳನುಗ್ಗಿದ ಘಟನೆ ಉತ್ತರಪ್ರದೇಶದ (Uttar Pradesh) ಬಿಜ್ನೋರ್‌ನಲ್ಲಿ ನಡೆದಿದೆ.
ಟ್ರಾಕ್ಟರೊಂದು ಬಿಜ್ನೋರ್‌ನ ಪ್ರಸಿದ್ಧ ಶೂ ಸ್ಟೋರ್ (Shoe store) ಹೊರಗೆ ನಿಲ್ಲಿಸಿ ಚಾಲಕ ಎಲ್ಲೋ ಹೊರಟು ಹೋಗಿದ್ದ ಈ ವೇಳೆ ಏಕಾಏಕಿ ಟ್ರಾಕ್ಟರ್ ತನ್ನಷ್ಟಕ್ಕೆ ಚಲಿಸಲಾರಂಭಿಸಿದ್ದು, ಮುಂದಿದ ಅಂಗಡಿಯ ಗ್ಲಾಸ್ ಮುರಿದು ಒಳನುಗ್ಗಿದೆ. ಈ ವೇಳೆ ಒಳಗಿದ್ದ ಅಂಗಡಿಯವರು ಗಾಬರಿಯಿಂದ ಹೊರಗೋಡಿ ಬಂದು ಟ್ರಾಕ್ಟರ್‌ನ್ನು ನಿಲ್ಲಿಸಲು ಯತ್ನಿಸಿದ್ದರಾದರೂ, ಅಷ್ಟರಲ್ಲಾಗಲೇ ಟ್ರಾಕ್ಟರ್ ಗ್ಲಾಸ್ (Tractor glass) ಮುರಿದು ಒಳನುಗ್ಗಿದೆ. ಈ ವೇಳೆ ಅಲ್ಲಿದ್ದ ಇತರರು ದೂರ ಸರಿಯುವ ಮೂಲಕ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಈ ಘಟನೆಯಲ್ಲಿ ಅಂಗಡಿಗೆ ಮಾತ್ರ ಭಾರಿ ಹಾನಿಯಾಗಿದೆ. ಅಂಗಡಿ ಮುಂದಿನ ಗ್ಲಾಸ್ ಡೋರ್ (Glass dore) ಒಡೆದು ಹೋಗಿದೆ.
ಕಿರುಚಾಟ ಕೇಳಿ ಬೆಚ್ಚಿ ಬಿದ್ದ ರೈಲು ಚಾಲಕ: ಇಂಜಿನ್ ಅಡಿಯೇ 190 ಕಿಮೀ ಚಲಿಸಿದ ಯುವಕ
ಕೆಲ ಸ್ಥಳೀಯ ಮಾಹಿತಿ ಪ್ರಕಾರ, ಮುಂಬರುವ ಹೋಳಿ ಹಬ್ಬದ ಆಚರಣೆಗೆ ಸಿದ್ಧತೆಗಾಗಿ ನಗರದಲ್ಲಿ ಪೊಲೀಸರು ಶಾಂತಿ ಸಭೆ ನಡೆಸಿದ್ದರು. ಬಿಜ್ನೋರ್ ಪೊಲೀಸ್ ಠಾಣೆಯಲ್ಲಿ ನಡೆದ ಈ ಸಭೆಯಲ್ಲಿ ಭಾಗವಹಿಸಲು ಟ್ರಾಕ್ಟರ್ ಮಾಲೀಕ ಕೃಷ್ಣಕುಮಾರ್ (Krishnakumar) ತಮ್ಮ ಟ್ರಾಕ್ಟರ್ ನಿಲ್ಲಿಸಿ ಅಲ್ಲಿಗೆ ಹೋಗಿದ್ದರು. ಇದಾಗಿ ಸುಮಾರು ಒಂದು ಗಂಟೆಯ ಬಳಿಕ ಈ ಟ್ರಾಕ್ಟರ್ ತನ್ನಷ್ಟಕ್ಕೆ ಚಲಿಸಲು ಆರಂಭಿಸಿ, ಸಮೀಪದ ಶೂ ಶೋ ರೋಮ್‌ನ ದಪ್ಪದ ಗಾಜನ್ನು ಒಡೆದು ಒಳನುಗ್ಗಿದೆ. ಘಟನೆಗೆ ಸಂಬಂಧಿಸಿದಂತೆ ಶೂ ಶೋರೂಮ್‌ನ ಮಾಲೀಕ ಪೊಲೀಸರಿಗೆ ದೂರು ನೀಡಿದ್ದು, ಟ್ರಾಕ್ಟರ್ ಅಪಘಾತದಿಂದ ಅಂಗಡಿಗೆ ಆದ ಹಾನಿಗೆ ಟ್ರಾಕ್ಟರ್ ಮಾಲೀಕನಿಂದ ಪರಿಹಾರ ಕೊಡಿಸುವಂತೆ ಆಗ್ರಹಿಸಿದ್ದಾರೆ.
Dharwad: ಹಳಿ ಬಿಟ್ಟ ಸರಕು ಸಾಗಾಣಿಕೆ ರೈಲು: ತಪ್ಪಿದ ಭಾರೀ ದುರಂತ
ಚಾಲಕನಿಲ್ಲದೇ ಚಲಿಸಿದ ಕಂಟೈನರ್ ಲಾರಿ: ತಪ್ಪಿದ ಭಾರೀ ಅನಾಹುತ
ಹ್ಯಾಂಡ್ ಬ್ರೇಕ್ ಕೈಕೊಟ್ಟ ಪರಿಣಾಮ ಚಹಾ ಕುಡಿಯಲು ತೆರಳಿದ್ದ ಚಾಲಕನ ಬಿಟ್ಟು ಕಂಟೈನರ್ ಲಾರಿ ಒಂದು ಕಿ.ಮೀ ವರೆಗೂ ಹಿಂಬದಿ ಚಲಿಸಿರುವ ಘಟನೆ ಕಳೆದ ವರ್ಷ ಏಪ್ರಿಲ್‌ನಲ್ಲಿ ಮಂಗಳೂರಿನಲ್ಲಿ ನಡೆದಿತ್ತು. ಕಂಟೈನರ್ ಹಿಂಬದಿ ಚಲಿಸಿ ಟೋಲ್ ಗೇಟ್ ಗಳಿಗೆ ಗುದ್ದಿ ಹಾನಿಗೊಳಿಸಿ, ಸೆಕ್ಯುರಿಟಿ ಗಾಡ್೯ ಸಹಿತ, ದಂಪತಿ ಪವಾಡಸದೃಶವಾಗಿ ಪಾರಾಗಿದ್ದರು. ಮಂಗಳೂರಿನ ತಲಪಾಡಿ ಟೋಲ್ ಗೇಟ್ ನಲ್ಲಿ ಈ ಘಟನೆ ನಡೆದಿತ್ತು.
ದೆಹಲಿಯಿಂದ ಕೊಚ್ಚಿಗೆ ಫ್ರಿಡ್ಜ್ ಸಾಗಾಟ ನಡೆಸುತ್ತಿದ್ದ ಗಣಪತಿ ಲಾಜಿಸ್ಟಿಕ್ಸ್ ಸಂಸ್ಥೆಗೆ ಸೇರಿದ ಲಾರಿಯ ಚಾಲಕ ಜೈವೀರ್ ಸಿಂಗ್ ತಲಪಾಡಿ ಟೋಲ್ ದಾಟಿ ಚಹಾ ಕುಡಿಯಲು ಕಂಟೈನರ್ ಲಾರಿಯನ್ನು ರಾ.ಹೆ. ಬಳಿ ನಿಲ್ಲಿಸಿದ್ದರು. ಚಹಾ ಕುಡಿಯುತ್ತಿದ್ದಂತೆ ತನ್ನಿಂತಾನೇ ಲಾರಿ ಹಿಂಬದಿ ಚಲಿಸಿ ನಿಲ್ಲಿಸಲಾಗಿದ್ದ ರಿಕ್ಷಾ ಹಾಗೂ ಬೈಕ್ ವೊಂದಕ್ಕೆ ಡಿಕ್ಕಿಯಾಗಿದೆ. ನಂತರ ಟೋಲ್ ಗೇಟ್ ನಲ್ಲಿರುವ ಸೆನ್ಸರ್ ಕಂಬ, ಸೆಕ್ಯುರಿಟಿ ಚೇರ್ ಹಾಗೂ ತಡೆಗಲ್ಲಿಗೆ ಗುದ್ದಿ ನಿಂತಿದೆ. ಈ ನಡುವೆ ಟೋಲ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೆಕ್ಯುರಿಟಿ ಸತೀಶ್ ನಾರ್ಲಪಡೀಲು, ಅಶೋಕ್ ಹಾಗೂ ಕೇರಳ ಕಡೆಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ದಂಪತಿ ಪವಾಡಸದೃಶವಾಗಿ ಪಾರಾಗಿದ್ದಾರೆ. ಹ್ಯಾಂಡ್ ಬ್ರೇಕ್ ಕೈಕೊಟ್ಟ ಪರಿಣಾಮ ಲಾರಿ ಹಿಂಬದಿ ಚಲಿಸಿರುವುದಾಗಿ ಚಾಲಕ ತಿಳಿಸಿದ್ದಾರೆ. ಘಟನೆಯಿಂದ ಒಂದು ಲಕ್ಷದಷ್ಟು ನಷ್ಟ ಉಂಟಾಗಿದೆ.
