Asianet Suvarna News Asianet Suvarna News

ಹುಡುಗಿ ಹುಡುಕಲು ಹೇಳಿದವನಿಗೆ ಕೂಡಿ ಬಂತು ಕಂಕಣ: ಮದ್ವೆಗೆ ಪ್ರಧಾನಿ, ಸಿಎಂಗೆ ಆಹ್ವಾನ

ಉತ್ತರಪ್ರದೇಶದ 2.3 ಅಡಿ ಉದ್ದದ ವ್ಯಕ್ತಿಯೊಬ್ಬರು ತಮ್ಮ ಮದುವೆಗೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಆಹ್ವಾನಿಸುವ ಮೂಲಕ ಸುದ್ದಿಯಾಗಿದ್ದಾರೆ.

Uttar Pradesh 2.3 foot Tall man Azeem Mansuri set to marry on November 7th, wants to invite PM and CM on his Marriage akb
Author
First Published Oct 30, 2022, 11:43 AM IST

ಲಕ್ನೋ: ಉತ್ತರಪ್ರದೇಶದ 2.3 ಅಡಿ ಉದ್ದದ ವ್ಯಕ್ತಿಯೊಬ್ಬರು ತಮ್ಮ ಮದುವೆಗೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಆಹ್ವಾನಿಸುವ ಮೂಲಕ ಸುದ್ದಿಯಾಗಿದ್ದಾರೆ. ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ನಿವಾಸಿಯಾಗಿರುವ 2.3 ಅಡಿ ಉದ್ದದ ಅಜೀಮ್ ಮನ್ಸೂರಿ ಅವರು ಇದೇ ನವಂಬರ್ 7 ರಂದು ಬುಶ್ರಾ ಅವರೊಂದಿಗೆ ಹಸೆಮಣೆ ಏರಲಿದ್ದಾರೆ. ಈ ಶುಭ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆತ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಆಹ್ವಾನ ನೀಡಿದ್ದಾರೆ. 

ನಾನು ನವಂಬರ್ 7ರಂದು ಹಸೆಮಣೆ ಏರಲಿದ್ದು, ನನ್ನ ಮದುವೆಗೆ ಆಗಮಿಸಲು ಪ್ರಧಾನಿ ನರೇಂದ್ರ ಮೋದಿ (PM Narendra MOdi) ಹಾಗೂ ಯೋಗಿ ಆದಿತ್ಯನಾಥ್ (Yogi Adityanath) ಅವರಿಗೆ ಆಹ್ವಾನ ಪತ್ರಿಕೆ ನೀಡಲಿದ್ದೇನೆ. ಇದಕ್ಕಾಗಿ ನಾನು ದೆಹಲಿಗೆ (Delhi) ತೆರಳಲಿದ್ದೇನೆ ಎಂದು ಅಜೀಮ್ ಮನ್ಸೂರಿ (Azim Mansuri) ಸುದ್ದಿಸಂಸ್ಥೆ ಎಎನ್‌ಐ ಜೊತೆ ಹೇಳಿಕೊಂಡಿದ್ದಾರೆ. ಮನ್ಸೂರಿ ಅವರು ವಿವಾಹಕ್ಕಾಗಿ ಹಲವು ವರ್ಷಗಳಿಂದ ಹೆಣ್ಣು ಹುಡುಕುತ್ತಿದ್ದರು. ಆದರೆ ಅವರ ಕುಬ್ಜತೆಯಿಂದಾಗಿ ಅವರಿಗೆ ಸರಿಯಾದ ವಧು ಹುಡುಕುವುದಕ್ಕೆ ಬಹಳ ಕಷ್ಟವಾಗಿತ್ತು. ಆದರೆ ಈಗ ಸುಮಾರು ವರ್ಷಗಳ ಶ್ರಮದ ಬಳಿಕ ಅವರಿಗೆ ಹೆಣ್ಣು ಸಿಕ್ಕಿ ಮದುವೆ ಸೆಟ್ ಆಗಿದೆ.

ಈ ಹಿಂದೆ ಮನ್ಸೂರಿ ಅವರು ತಮಗೊಂದು ವಧು ಹುಡುಕಲು ಸಹಾಯ ಮಾಡುವಂತೆ ಸರ್ಕಾರಿ ಅಧಿಕಾರಿಗಳು ಹಾಗೂ ಅಂದಿನ ಸಿಎಂ ಅಖಿಲೇಶ್ ಯಾದವ್ (Akhilesh Yadav) ಅವರಿಗೂ ಮನವಿ ಮಾಡಿದ್ದರು. ಕುಳ್ಳಗಿರುವ ಕಾರಣಕ್ಕೆ ಮನ್ಸೂರಿ ಅವರಿಗೆ ಸರಿಸಾಟಿಯಾದ ಹುಡುಗಿಯನ್ನು ಹುಡುಕುವುದು ಬಲು ಕಷ್ಟದ ಕೆಲಸವಾಗಿತ್ತು. ಆದರೆ ಈಗ ಕೊನೆಗೂ ಅವರಿಗೆ ಕಂಕಣಭಾಗ್ಯ ಕೂಡಿ ಬಂದಿದ್ದು, ಹಾಪುರದ ವಧುವಿನೊಂದಿಗೆ ಅವರ ವಿವಾಹ ನಿಶ್ಚಯವಾಗಿದೆ. 

ಐದನೇ ತರಗತಿಯವರೆಗೆ ಓದಿರುವ ಮನ್ಸೂರಿ ಮಾರ್ಚ್‌ 2021ರಲ್ಲಿ ತನ್ನ ಕನಸಿನ ಚೆಲುವೆ ಬುಶ್ರಾ (Bushra) ಅವರನ್ನು ಭೇಟಿಯಾದರು. 3 ಅಡಿ ಎತ್ತರವಿರುವ ಬುಶ್ರಾ ಅವರೊಂದಿಗೆ 2021ರ ಏಪ್ರಿಲ್‌ನಲ್ಲಿ ಅಜೀಮ್ ಮನ್ಸೂರಿ ಅವರ ನಿಶ್ಚಿತಾರ್ಥ ನಡೆದಿತ್ತು. ಆದರೆ ಬುಶ್ರಾ ತನ್ನ ಪದವಿ ಶಿಕ್ಷಣವನ್ನು ಪೂರೈಸಿದ ನಂತರ ವಿವಾಹವಾಗಲು ಈ ಜೋಡಿ ನಿರ್ಧರಿಸಿದ್ದರು.

ತಂದೆಯ ಕಷ್ಟಕ್ಕೆ ನೆರವಾಗದ ಅಸಹಾಯಕತೆ: ತನ್ನ ಪರಿಸ್ಥಿಗೆ ಮಮ್ಮಲ ಮರುಗಿ ಕಣ್ಣೀರಿಡುತ್ತಿರೋ ಕುಬ್ಜ..!

ನವೆಂಬರ್ 7 ರಂದು ಈ ಕುಬ್ಜ ಜೋಡಿಯ ವಿವಾಹ ನಡೆಯಲಿದ್ದು, ಮದುವೆಗಾಗಿ ಮನ್ಸೂರ್ ವಿಶೇಷವಾದ ಶೇರ್ವಾನಿ (Sheravani) ಹಾಗೂ ಮೂರು ಜೊತೆ ಶೂಟ್ ಅನ್ನು ಸ್ವತಃ ಅವರೇ ಹೊಲಿದಿದ್ದಾರಂತೆ. ಮನ್ಸೂರಿ ಅವರು ಸೌಂದರ್ಯ ವರ್ಧಕಗಳ ಅಂಗಡಿಯನ್ನು ನಡೆಸುತ್ತಿದ್ದು, ಒಳ್ಳೆಯ ಸಂಪಾದನೆ ಇದೆ. ಐವರು ಒಡಹುಟ್ಟಿದವರಲ್ಲಿ ಅತ್ಯಂತ ಕಿರಿಯವರಾಗಿದ್ದಾರೆ. 

ಕುಬ್ಜ ಯುವಕನ ವರಿಸಿದ ರುಕ್ಮಿಣಿ.. ಬಾಗಲಕೋಟೆಯ ಹೊಸ ಜೋಡಿಗೆ ಶುಭಾಶಯ

Follow Us:
Download App:
  • android
  • ios