ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ ಪತ್ನಿ ಉಷಾ ಜೊತೆ ನಾಲ್ಕು ದಿನಗಳ ಭಾರತ ಪ್ರವಾಸಕ್ಕೆ ಆಗಮಿಸಿದ್ದಾರೆ. ಪ್ರಧಾನಿ ಮೋದಿ ಜೊತೆ ವ್ಯಾಪಾರ ಒಪ್ಪಂದ ಕುರಿತು ಮಾತುಕತೆ ನಡೆಸಲಿದ್ದಾರೆ. ದೆಹಲಿ, ಆಗ್ರಾ, ಜೈಪುರಕ್ಕೆ ಭೇಟಿ ನೀಡಲಿದ್ದು, ರಾಜತಾಂತ್ರಿಕ ಸಂಬಂಧ ಗಟ್ಟಿಗೊಳಿಸುವ ಉದ್ದೇಶ ಹೊಂದಿದ್ದಾರೆ.

ನವದೆಹಲಿ: ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ ಅವರು ತಮ್ಮ ಭಾರತ ಮೂಲದ ಪತ್ನಿ ಉಷಾ ಜತೆ 4 ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದು, ಸೋಮವಾರ ದಿಲ್ಲಿಗೆ ಆಗಮಿಸಲಿದ್ದಾರೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಜತೆ ಮಾತುಕತೆ ನಡೆಸಲಿದ್ದಾರೆ. ಅಮೆರಿಕದೊಂದಿಗೆ ಭಾರತ ವ್ಯಾಪಾರ ಒಪ್ಪಂದದ ಮಾತುಕತೆಗೆ ಸಿದ್ಧತೆ ನಡೆಸುತ್ತಿರುವ ಹೊತ್ತಿನಲ್ಲೇ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.

ಸೋಮವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಮಾತುಕತೆ ನಡೆಯಲಿದ್ದು, ಇದರಲ್ಲಿ ಅಮೆರಿಕದ 5 ಹಿರಿಯ ಅಧಿಕಾರಿಗಳು ಭಾಗವಹಿಸುವ ನಿರೀಕ್ಷೆಯಿದೆ. ಅಂತೆಯೇ, ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌, ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ, ಅಮೆರಿಕಕ್ಕೆ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಕೂಡ ಭಾಗವಹಿಸಲಿದ್ದಾರೆ. ಬಳಿಕ ಭೋಜನ ಕೂಟವನ್ನೂ ಆಯೋಜಿಸಲಾಗಿದೆ. ಬಳಿಕ ವ್ಯಾನ್ಸ್‌ ಅವರ ಪರಿವಾರ ಆಗ್ರಾ ಹಾಗೂ ಜೈಪುರಕ್ಕೆ ತೆರಳಲಿದೆ.

ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಭಾರತ ಭೇಟಿ: ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ತಮ್ಮ ಪತ್ನಿ ಮತ್ತು ಮೂರು ಮಕ್ಕಳೊಂದಿಗೆ ಇಂದು ಭಾರತಕ್ಕೆ ಆಗಮಿಸುತ್ತಿದ್ದಾರೆ. ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿರುವ ವ್ಯಾನ್ಸ್ ಇಂದು ಏಪ್ರಿಲ್ 24 ರವರೆಗೆ ಭಾರತದಲ್ಲಿ ಉಳಿದುಕೊಳ್ಳಲಿದ್ದಾರೆ.

ಭಾರತದ ಮೇಲೆ ಅಮೆರಿಕದ ತೆರಿಗೆ:
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ದೀರ್ಘಕಾಲದ ಸಂಬಂಧದ ನಂತರ ಎರಡೂ ದೇಶಗಳ ನಡುವೆ ವ್ಯಾಪಾರ ಒಪ್ಪಂದ ಏರ್ಪಡುವ ನಿರೀಕ್ಷೆಯಿದೆ. ಭಾರತದ ಮೇಲೆ ಅಮೆರಿಕ ವಿಧಿಸಿರುವ 26% ತೆರಿಗೆಯ ಹಿನ್ನೆಲೆಯಲ್ಲಿ ವ್ಯಾನ್ಸ್ ಭೇಟಿ ಮಹತ್ವ ಪಡೆದುಕೊಂಡಿದೆ. ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಭಾರತ ಮತ್ತು ಅಮೆರಿಕದ ನಡುವೆ ಉತ್ತಮ ಸಂಬಂಧವಿತ್ತು. 'ಹೌಡಿ ಮೋದಿ' ಮತ್ತು 'ನಮಸ್ತೆ ಟ್ರಂಪ್' ನಂತಹ ಕಾರ್ಯಕ್ರಮಗಳು ಎರಡೂ ದೇಶಗಳಲ್ಲಿ ನಡೆದವು.

ಭಾರತದ ರಾಜತಾಂತ್ರಿಕತೆ ಮತ್ತು MIGA, MAGA ಯೋಜನೆಗಳು:
ಅಮೆರಿಕದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ, ಅದು ರಿಪಬ್ಲಿಕನ್ ಪಕ್ಷವಾಗಲಿ ಅಥವಾ ಡೆಮಾಕ್ರಟಿಕ್ ಪಕ್ಷವಾಗಲಿ, ಭಾರತ ಅವರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಂಡು ಬಂದಿದೆ. ಮೋದಿ ಮತ್ತು ಟ್ರಂಪ್ ಇಬ್ಬರೂ ತಮ್ಮ ದೇಶಗಳ ಹಿತಾಸಕ್ತಿಗಳನ್ನು ಮುಂದಿಟ್ಟುಕೊಂಡು ಮಾತುಕತೆಗಳಲ್ಲಿ ತೊಡಗಿದ್ದರು. ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಿ ಮೋದಿ ಮೊದಲ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡಿದ್ದರು. ಇದರ ಮುಂದುವರಿಕೆಯಾಗಿ ಎರಡೂ ದೇಶಗಳ ನಡುವೆ ವ್ಯಾಪಾರ ಮಾತುಕತೆಗಳು ನಡೆಯುತ್ತಿವೆ. ಪ್ರಧಾನಿ ಮೋದಿ ಅಮೆರಿಕಕ್ಕೆ ಭೇಟಿ ನೀಡಿದಾಗ MIGA, MAGA ಯೋಜನೆಗಳನ್ನು ಮುಂದಿಡಲಾಯಿತು. ಅಂದರೆ ''Make India Great Again'', ''Make America Great Again''.

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ:
ಈಗ ಭಾರತ-ಅಮೆರಿಕ ಸಂಬಂಧಗಳಲ್ಲಿ ಉಪಾಧ್ಯಕ್ಷ ವ್ಯಾನ್ಸ್ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಅವರ ಪತ್ನಿ ಉಷಾ ಭಾರತೀಯ ಮೂಲದವರಾಗಿರುವುದು ಇನ್ನಷ್ಟು ಮಹತ್ವವನ್ನು ನೀಡುತ್ತದೆ. ಮೋದಿ ಅಮೆರಿಕಕ್ಕೆ ಭೇಟಿ ನೀಡಿದಾಗ ಮೋದಿ ಮತ್ತು ಟ್ರಂಪ್ ಜಂಟಿ ಹೇಳಿಕೆ ನೀಡಿದ್ದರು. ರಕ್ಷಣಾ ತಂತ್ರಜ್ಞಾನ, ಇಂಧನ, ಕೃತಕ ಬುದ್ಧಿಮತ್ತೆ, ನಿರ್ಣಾಯಕ ಖನಿಜಗಳು, ಅರೆವಾಹಕಗಳು, ಬಾಹ್ಯಾಕಾಶ ಸಹಕಾರ ಮತ್ತು ಜನರ ನಡುವಿನ ವಿನಿಮಯದ ಕುರಿತು ಎರಡೂ ದೇಶಗಳ ನಡುವೆ ಒಪ್ಪಂದ ಮಾಡಿಕೊಳ್ಳಲಾಯಿತು. ಇದರ ಮುಂದುವರಿಕೆಯಾಗಿ ಇಂದು ವ್ಯಾನ್ಸ್ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.


ಭಾರತದಲ್ಲಿ ಜೆ.ಡಿ. ವ್ಯಾನ್ಸ್ ಪ್ರಯಾಣದ ವಿವರ ಹೀಗಿದೆ
ವ್ಯಾನ್ಸ್ ತಮ್ಮ ಪತ್ನಿ ಉಷಾ ಅವರೊಂದಿಗೆ ಇಂದು ಭಾರತಕ್ಕೆ ಆಗಮಿಸುತ್ತಿದ್ದಾರೆ. ಭಾರತದಲ್ಲಿ ನಾಲ್ಕು ದಿನಗಳ ಕಾಲ ಉಳಿದುಕೊಂಡು ವಿವಿಧ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.

  • ಇಂದು ಬೆಳಗ್ಗೆ 9.30ಕ್ಕೆ ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಾರೆ.
  • ಬೆಳಗ್ಗೆ 10 ಗಂಟೆಗೆ ಅವರಿಗೆ ಸರ್ಕಾರಿ ಗೌರವ ಸಲ್ಲಿಸಲಾಗುತ್ತದೆ. ನಂತರ ಸಂಜೆ 6.30ಕ್ಕೆ ಪ್ರಧಾನಿ ಮೋದಿಯವರನ್ನು ಲೋಕ್ ಕಲ್ಯಾಣ ಮಾರ್ಗ್ ನಿವಾಸದಲ್ಲಿ ಭೇಟಿಯಾಗುತ್ತಾರೆ. ವ್ಯಾನ್ಸ್ ಮತ್ತು ಉಷಾ ದಂಪತಿಗಳಿಗೆ ಪ್ರಧಾನಿ ಮೋದಿ ಭೋಜನಕೂಟ ಏರ್ಪಡಿಸಿದ್ದಾರೆ.
  • ಭೇಟಿಯ ಸಂದರ್ಭದಲ್ಲಿ ಎರಡೂ ದೇಶಗಳ ನಡುವಿನ ಸಂಬಂಧಗಳ ಕುರಿತು ಚರ್ಚಿಸಲಾಗುವುದು.
  • ಏಪ್ರಿಲ್ 22-23 ರಂದು ಪ್ರಧಾನಿ ಮೋದಿ ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಮೋದಿಯವರೊಂದಿಗೆ ವಿದೇಶಾಂಗ ಸಚಿವ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಅಮೆರಿಕದಲ್ಲಿ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
  • ವ್ಯಾನ್ಸ್ ಕುಟುಂಬ ಸ್ವಾಮಿನಾರಾಯಣ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡಲಿದೆ.
  • ಸೋಮವಾರ ರಾತ್ರಿ ವ್ಯಾನ್ಸ್ ಕುಟುಂಬ ಜೈಪುರಕ್ಕೆ ತೆರಳಲಿದೆ. ಅಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅವರನ್ನು ಸ್ವಾಗತಿಸಲಿದ್ದಾರೆ. ಐತಿಹಾಸಿಕ ರಾಂಬಾಗ್ ಅರಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಇದನ್ನೂ ಓದಿ: ಟ್ರಂಪ್ ಬೆದರಿಕೆಯಿಂದ ಭಾರತದ ಸಖ್ಯ ಬಯಸಿದ ಚೀನಾ, 85,000 ಭಾರತೀಯರಿಗೆ ವೀಸಾ ಗ್ರ್ಯಾಂಟ್

ಎರಡನೇ ದಿನ:
ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಅಮೆರ್ ಕೋಟೆಗೆ ವ್ಯಾನ್ಸ್ ಕುಟುಂಬ ಭೇಟಿ ನೀಡಲಿದೆ.

ಮೂರನೇ ದಿನ:
ಏಪ್ರಿಲ್ 23 ರಂದು ಆಗ್ರಾದಲ್ಲಿರುವ ತಾಜ್ ಮಹಲ್ ಗೆ ಭೇಟಿ ನೀಡಲಿದ್ದಾರೆ. ಅದೇ ದಿನ ಸಂಜೆ ಜೈಪುರಕ್ಕೆ ಮರಳಲಿದ್ದಾರೆ.

ನಾಲ್ಕನೇ ದಿನ:
ಏಪ್ರಿಲ್ 24 ರಂದು ಜೈಪುರದಿಂದ ವ್ಯಾನ್ಸ್ ಕುಟುಂಬ ಅಮೆರಿಕಕ್ಕೆ ಹಿಂದಿರುಗಲಿದೆ.

ಇದನ್ನೂ ಓದಿ: ಚೀನಾ ಮುಖ ಕೆಂಪಗಾಗಿಸಿದ ಉಕ್ರೇನ್‌ ನಡೆ: ತಟಸ್ಥ ನಿಲುವು ಎಂದಿದ್ದ ಚೀನಾಗೆ ಮುಖಭಂಗ