ಚೀನಾ ವಿರುದ್ಧ ನಿಂತ ಭಾರತದ ಬಗ್ಗೆ ಹೆಮ್ಮೆ ಇದೆ: ಅಮೆರಿಕದ ಸೆನೆಟರ್ ಕೆನಡಿ!

ಚೀನಾ ವಿರುದ್ಧ ನಿಂತ ಭಾರತದ ಬಗ್ಗೆ ನನಗೆ ಹೆಮ್ಮೆ ಇದೆ| ಭಾರತವನ್ನು ಹಾಡಿ ಹೊಗಳಿದ ಅಮೆರಿಕದ ಸೆನೆಟರ್| ಚೀನಾವನ್ನು ಯಾವ ರಾ‍fಟ್ರಗಳು ನಂಬುವುದಿಲ್ಲ, ಆದರೆ ಹೆದರುತ್ತವೆ|

US Senator lauds PM Modi for standing up to China calls for joining forces

ವಾಷಿಂಗ್ಟನ್(ಜು.10): ಚೀನಾ ಭಾರತ ನಡುವಿನ ಸಂಘರ್ಷ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದೆ. ಲಡಾಖ್ ಗಡಿಯಲ್ಲಿ ಉಭಯ ದೇಶದ ಸೈನಿಕರ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತದ ಇಪ್ಪತ್ತು ಯೋಧರು ಹುತಾತ್ಮರಾಗಿದ್ದರು. ಈ ಘಟನೆ ಬೆನ್ನಲ್ಲೇ ಭಾರತ ತೆಗೆದುಕೊಂಡ ಕ್ರಮ ಇಡೀ ವಿಶ್ವದ ಗಮನ ಸೆಳೆದಿತ್ತು. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕದ ಸೆನೆಟರ್ ಜಾನ್ ಕೆನಡಿ ಮೋದಿಯನ್ನು ಹೊಗಳಿದ್ದು, ಚೀನಾ ವಿರುದ್ಧ ಧೈರ್ಯವಾಗಿ ನಿಲ್ಲುವಂತೆ ಇತರ ದೇಶಗಳಿಗೆ ಕರೆ ನೀಡಿದ್ದಾರೆ.

ಹೌದು ಭಾರತ ಹಾಗೂ ಚೀನಾ ಯೋಧರ ಸಂಘರ್ಷದಲ್ಲಿ ಭಾರತೀಯ ಸೇನೆಯ ಇಪ್ಪತ್ತು ಯೋಧರು ಹಹುತಾತ್ಮರಾದ ಬೆನ್ನಲ್ಲೇ ಭಾರತೀಯ ಸೇನೆ ಗಡಿಗೆ ಮತ್ತಷ್ಟು ಸೈನಿಕರನ್ನು ರವಾನಿಸಿ ಯುದ್ಧಕ್ಕೆ ಬೇಕಾದ ಸಿದ್ಧತೆ ನಡೆಸಿದ್ದರೆ, ಇತ್ತ ದೇಶದೊಳಗೆ ಚೀನಾ ನಿರ್ಮಿತ ವಸ್ತುಗಳನ್ನು ಬಹಿಷ್ಕರಿಸುವ ಅಭಿಯಾನ ಆರಂಭವಾಗಿದೆ. ಅಲ್ಲದೇ ಸರ್ಕಾರವೂ ಚೀನಾ ವಿರುದ್ಧ ಕಠಿಣ ಕ್ರಮ ಕೈಗೊಂಡು ಟಿಕ್‌ಟಾಕ್ ಸೇರಿ ಒಟ್ಟು 59 Appಗಳನ್ನು ಬ್ಯಾನ್ ಮಾಡಿತ್ತು. ಅಲ್ಲದೇ ಸ್ವದೇಶೀ ನಿರ್ಮಿತ ವಸ್ತುಗಳಿಗೆ ಹೆಚ್ಚು ಒತ್ತು ನೀಡಿದ ಸರ್ಕಾರ ಯೋಜನೆಗಳಿಗೆ ಚೀನೀ ಕಂಪನಿಗಳಿಗೆ ಗುತ್ತಿಗೆ ನೀಡದಂತೆ ಕ್ರಮ ವಹಿಸಿದೆ. ಭಾರತದ ಈ ನಡೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗಿತ್ತು.

ಫೇಸ್‌ಬುಕ್‌ ಸೇರಿದಂತೆ 89 ಆ್ಯಪ್‌ ಡಿಲೀಟ್‌ಗೆ ಸೇನಾ ಸಿಬ್ಬಂದಿಗೆ ಸೂಚನೆ

ಸದ್ಯ ಮಾಧ್ಯಮಗಳಲ್ಲಿ ಈ ಸಂಬಂಧ  ಮಾತನಾಡಿರುವ ಸೆನೆಟರ್ ಜಾನ್ ಕೆನಡಿ 'ಚೀನಾ ಎದುರಿಸಲು ಧೃಡವಾಗಿ ನಿಂತಿರುವ ಭಾರತದ ಪ್ರಧಾನಿ ಮೋದಿ ಬಗ್ಗೆ ನನಗೆ ಹೆಮ್ಮೆ ಇದೆ. ಜೊತೆಗೆ ಕೆನಡಾ ಯಾವ ನಡೆ ಅನುಸರಿಸಿದೆಯೋ ಆ ಬಗ್ಗೆಯೂ ನನಗೆ ಹೆಮ್ಮೆ ಇದೆ. ಎಲ್ಲಾ ರಾಷ್ಟ್ರಗಳು ಈ ವಿಚಾರದಲ್ಲಿ ಪಲಾಯನ ಮಾಡುತ್ತಿಲ್ಲ' ಎಂದಿದ್ದಾರೆ.

ಈಗ ಅಮೆರಿಕವನ್ನು ಹೊರತುಪಡಿಸಿ ಎಷ್ಟು ರಾಷ್ಟ್ರಗಳು ಚೀನಾವನ್ನು ನಂಬುತ್ತವೆ? ಒಂದೂ ಇಲ್ಲ, ಶೂನ್ಯ. ಆದರೆ ಅವರೆಲ್ಲರೂ ಹೆದರುತ್ತಾರೆ. ಚೀನಾ ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕತೆಯ ದೇಶ. ತನ್ನ ಆರ್ಥಿಕ ಹಿಡಿತದಿಂದ ಇತರ ರಾಷ್ಟ್ರಗಳನ್ನು ನಿಯಂತ್ರಿಸಲು ಯತ್ನಿಸುತ್ತದೆ. ಹೀಗಾಗಿ ಯಾವುದೇ ರಾಷ್ಟ್ರ ಅದನ್ನು ಎದುರಿಸಲು ತಯಾರಿಲ್ಲ ಎಂದೂ ಕೆನಡಿ ಹೇಳಿದ್ದಾರೆ.

ಧೋವಲ್ ಮಿಂಚಿನ ಮಾತುಕತೆ: ಗಡಿಯಿಂದ 2 ಕಿ.ಮೀ. ಹಿಂದೆ ಸರಿದ ಚೀನಾ ಸೇನೆ

ಈ ಹೋರಾಟದಲ್ಲಿ ಆಸ್ಟ್ರೇಲಿಯಾ, ಭಾರತ, ಕೆನಡಾ ಇವೆಲ್ಲವೂ ಚೀನಾ ವಿರುದ್ಧ ಎದ್ದು ನಿಂತಿವೆ. ಹೀಗಿರುವಾಗ ಈ ಸಮರಕ್ಕೆ ಇನ್ನಷ್ಟು ರಾಷ್ಟ್ರಗಳು ಒಗ್ಗೂಡಬೇಕು. ಈ ಮೂಲಕ ನಮ್ಮನ್ನು ಆಳಲು ನಿಮಗೆ ಅವಕಾಶ ನೀಡುವುದಿಲ್ಲ ಎಂಬುವುದನ್ನು ಅವರಿಗೆ ಮನವರಿಕೆಯಾಘುವಂತೆ ಮಾಡಬೇಕು ಎಂದಿದ್ದಾರೆ.

Latest Videos
Follow Us:
Download App:
  • android
  • ios