ಉಭಯ ದೇಶಗಳ ನಡುವಿನ ಸಂಬಂಧವನ್ನು ಉತ್ತಮಗೊಳಿಸುವ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಅಹಮದಾಬಾದ್‌ಗಳಲ್ಲಿ ಅಮೆರಿಕ ಹಾಗೂ ಸಿಯಾಟಲ್‌ನಲ್ಲಿ (Seattle) ಭಾರತ ತಮ್ಮ ದೂತವಾಸ ಕಚೇರಿಗಳನ್ನು ತೆರೆಯಲಿವೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಾಷಿಂಗ್ಟನ್‌: ಉಭಯ ದೇಶಗಳ ನಡುವಿನ ಸಂಬಂಧವನ್ನು ಉತ್ತಮಗೊಳಿಸುವ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಅಹಮದಾಬಾದ್‌ಗಳಲ್ಲಿ ಅಮೆರಿಕ ಹಾಗೂ ಸಿಯಾಟಲ್‌ನಲ್ಲಿ (Seattle) ಭಾರತ ತಮ್ಮ ದೂತವಾಸ ಕಚೇರಿಗಳನ್ನು ತೆರೆಯಲಿವೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದ​ರಿಂದಾಗಿ ಕರ್ನಾ​ಟ​ಕದ ಜನ​ತೆಗೆ ಇನ್ನು ಬೆಂಗ​ಳೂ​ರಿ​ನಲ್ಲೇ ಅಮೆ​ರಿ​ಕದ ವೀಸಾ ಪಡೆ​ಯಲು ಅನು​ಕೂ​ಲ​ವಾ​ಗ​ಲಿದೆ. ಈವ​ರೆಗೆ ಕನ್ನ​ಡಿ​ಗರು ಅಮೆ​ರಿ​ಕದ ವೀಸಾಗೆ ಚೆನ್ನೈಗೆ ಹೋಗ​ಬೇ​ಕಿ​ತ್ತು.

ಕಳೆದ ವರ್ಷ 1.25 ಲಕ್ಷ ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ವೀಸಾ (Visa) ನೀಡಿದೆ. ಪ್ರಸ್ತುತ ಅಮೆರಿಕದಲ್ಲಿರುವ ವಿದೇಶಿ ವಿದ್ಯಾರ್ಥಿಗಳಲ್ಲಿ ಭಾರತೀಯರು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಈಗ ಈ ಸಂಬಂಧವನ್ನು ಮತ್ತಷ್ಟು ಬಲಿಷ್ಠಗೊಳಿಸುವುದಕ್ಕಾಗಿ ಬೆಂಗಳೂರು ಮತ್ತು ಅಹಮದಾಬಾದ್‌ಗಳಲ್ಲಿ (Ahmedabad) ಹೊಸ ರಾಯಭಾರ ಕಚೇರಿಗಳನ್ನು ತೆರೆಯಲು ಅಮೆರಿಕ ಮುಂದಾಗಿದೆ. ಇದಕ್ಕೆ ಪ್ರತಿ​ಯಾ​ಗಿ ಸಿಯಾಟಲ್‌ನಲ್ಲಿ ಭಾರತ ತನ್ನ ರಾಯಭಾರ ಕಚೇರಿಯನ್ನು ತೆರೆಯಲಿದೆ. ಸದ್ಯ ದಿಲ್ಲಿ​ಯಲ್ಲಿ ಅಮೆ​ರಿಕ ರಾಯ​ಭಾರ ಕಚೇರಿ ಇದ್ದು, ಮುಂಬೈ, ಕೋಲ್ಕತಾ, ಚೆನ್ನೈ ಹಾಗೂ ಹೈದ​ರಾ​ಬಾ​ದ್‌​ನಲ್ಲಿ ದೂತಾ​ವಾ​ಸ​ಗ​ಳಿ​ವೆ.

ಎಚ್‌1ಬಿ ವೀಸಾ ನಿಯಮ ಬದ​ಲು: ಭಾರ​ತೀಯ ಟೆಕ್ಕಿ​ಗ​ಳಿಗೆ ಅನು​ಕೂ​ಲ

ವಾಷಿಂಗ್ಟ​ನ್‌: ಭಾರ​ತದ ಪ್ರಧಾನಿ ನರೇಂದ್ರ ಮೋದಿ ಭೇಟಿಯ ವೇಳೆ ಅಮೆ​ರಿಕ ಸರ್ಕಾರ (America Govt) ಎಚ್‌1ಬಿ ವೀಸಾ ನೀತಿ​ಯಲ್ಲಿ (H1B visa) ಬದ​ಲಾ​ವಣೆ ಮಾಡಿದ್ದು, ಇದ​ರಿಂದ ಇದೇ ವೀಸಾ ಅಡಿ​ಯಲ್ಲಿ ಅಮೆ​ರಿ​ಕ​ದಲ್ಲಿ ನೌಕರಿ ಮಾಡು​ತ್ತಿ​ರುವ ಟೆಕ್ಕಿ​ಗಳು ಹಾಗೂ ಇತರ ನೌಕ​ರ​ರಿಗೆ ಭಾರಿ ಅನು​ಕೂ​ಲ​ವಾಗ​ಲಿ​ದೆ. ಎಚ್‌1ಬಿ ವೀಸಾ​ 3 ವರ್ಷದ ಅವ​ಧಿ​ಯ​ದ್ದಾ​ಗಿದ್ದು, ವೀಸಾ ಅವಧಿ ಮುಗಿ​ಯುವ ವೇಳೆ ಅದರ ನವೀ​ಕ​ರ​ಣ​ಕ್ಕಾಗಿ ವೀಸಾ​ದಾ​ರರು ಸ್ವದೇ​ಶಕ್ಕೇ ಹೋಗ​ಬೇ​ಕಿತ್ತು. ಅಂದರೆ ಭಾರ​ತದ ಟೆಕ್ಕಿ​ಗಳು ಭಾರ​ತಕ್ಕೇ ಹೋಗಿ ಅದರ ನವೀ​ಕ​ರಣ ಮಾಡಿ​ಕೊ​ಳ್ಳ​ಬೇ​ಕಿತ್ತು. ಈ ನಿಯ​ಮ​ವನ್ನು ಬದ​ಲಿ​ಸಿ​ರುವ ಬೈಡೆನ್‌ ಸರ್ಕಾರ, ಈಗ ಅಮೆ​ರಿ​ಕ​ದಲ್ಲೇ ವೀಸಾ ನವೀ​ಕ​ರಣ ಮಾಡಿ​ಕೊ​ಳ್ಳಲು ಅನು​ಮತಿ ನೀಡಿ​ದೆ. 2022ರಲ್ಲಿ 4.42 ಲಕ್ಷ ಎಚ್‌1ಬಿ ವೀಸಾ​ದಾ​ರರು ಅಮೆ​ರಿ​ಕ​ದ​ಲ್ಲಿದ್ದು, ಇವ​ರಲ್ಲಿ ಭಾರ​ತೀ​ಯರ ಪಾಲು ಶೇ.73 ಆಗಿ​ದೆ. ಕಳೆದ ವರ್ಷ 1.25 ಲಕ್ಷ ಭಾರ​ತೀಯರಿಗೆ ಎಚ್‌1ಬಿ ವೀಸಾ ನೀಡ​ಲಾ​ಗಿ​ತ್ತು.

ಭಾರತದಲ್ಲೇ ಎಂಜಿನ್‌ ಉತ್ಪಾದನೆ ಒಪ್ಪಂದ

ವಾಷಿಂಗ್ಟನ್‌: ಸ್ವದೇಶಿ ತೇಜಸ್‌ ಯುದ್ಧ ವಿಮಾನಗಳಿಗೆ ಭಾರತದಲ್ಲೇ ಎಂಜಿನ್‌ ಉತ್ಪಾದನೆ ಮಾಡುವ ಐತಿಹಾಸಿಕ ತಿಳುವಳಿಕೆ ಪತ್ರಕ್ಕೆ ಭಾರತ ಮತ್ತು ಅಮೆರಿಕ ಸಹಿಹಾಕಿವೆ. 
ಇದರನ್ವಯ ಬೆಂಗಳೂರು ಮೂಲದ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿ. (ಎಚ್‌ಎಎಲ್‌) ಜೊತೆಗೂಡಿ ಎಂಜಿನ್‌ ಉತ್ಪಾದಿಸಲು ಅಮೆರಿಕದ ಜನರಲ್‌ ಎಲೆಕ್ಟ್ರಿಕಲ್ಸ್‌ ಏರೋಸ್ಪೇಸ್‌ ಸಮ್ಮತಿಸಿದೆ. ಭಾರ​ತದ ಪ್ರಧಾನಿ ನರೇಂದ್ರ ಮೋದಿ ಅಮೆ​ರಿಕ ಪ್ರವಾಸ ಕೈಗೊಂಡಿದ್ದು, ಇದರ ಫಲ​ವಾಗಿ ಈ ಒಪ್ಪಂದ ಏರ್ಪ​ಟ್ಟಿ​ದೆ. ಈ ತಿಳುವಳಿಕೆ ಪತ್ರದ ಅನ್ವಯ ಭಾರತದ 99 ಎಲ್‌ಸಿಎ ಮ್ಯಾಕ್‌ 2 ಯುದ್ಧ ವಿಮಾನಗಳಿಗೆ ಭಾರತದಲ್ಲೇ ಎಫ್‌ 414 ಎಂಜಿನ್‌ಗಳನ್ನು ಉತ್ಪಾದಿಸಲಾಗುವುದು. ಹಾಲಿ ತೇಜಸ್‌ ವಿಮಾನಗಳಿಗೆ ಎಫ್‌ 404 ಎಂಜಿನ್‌ ಬಳಸಲಾಗುತ್ತಿದ್ದು, ಎಫ್‌ 414 ಇನ್ನಷ್ಟು ಆಧುನಿಕ ಎಂಜಿನ್‌ ಆಗಿದೆ.

ಭಾರತ-ಅಮೆರಿಕ ನಡುವೆ ಮಹಾ ಒಪ್ಪಂದ: ಬಾಹ್ಯಾಕಾಶ, ರಕ್ಷಣೆ ಸೇರಿ ಹಲವು ಕ್ಷೇತ್ರಗಳಲ್ಲಿ ಸಹಭಾಗಿತ್ವ