ಬೆಂಗಳೂರಿನಲ್ಲಿ ದೂತವಾಸ ಕಚೇರಿಯನ್ನು ಹೊಂದಿರದ ಏಕೈಕ ದೇಶ ಅಮೆರಿಕವಾಗಿತ್ತು, ಆದರೆ ಈಗ ಕಚೇರಿ ಸ್ಥಾಪನೆಗೆ ನಾವು ಈ ಬಗ್ಗೆ ಶ್ರಮಿಸುತ್ತಿದ್ದೇವೆ. ಶೀಘ್ರದಲ್ಲಿಯೇ ಒಳ್ಳೆಯ ಸುದ್ದಿಗಳನ್ನು ಘೋಷಿಸುತ್ತೇವೆ: ಭಾರತದಲ್ಲಿರುವ ಅಮೆರಿಕದ ರಾಯಭಾರಿ ಎರಿಕ್‌ ಗಾರ್ಸೆಟ್ಟಿ 

ನವದೆಹಲಿ(ಡಿ.20): ಬೆಂಗಳೂರಿನಲ್ಲಿ ಮುಂದಿನ ತಿಂಗಳಿನಿಂದ ಅಮೆರಿಕ ಕಾನ್ಸುಲೇಟ್ ಕಚೇರಿ ಆರಂಭವಾಗಲಿದೆ. ಕಚೇರಿ ಆರಂಭಿಸುವ ನಿಟ್ಟಿನಲ್ಲಿ ಅಮೆರಿಕ ಕಾರ್ಯನಿರತವಾಗಿದೆ ಎಂದು ಭಾರತದಲ್ಲಿರುವ ಅಮೆರಿಕದ ರಾಯಭಾರಿ ಎರಿಕ್‌ ಗಾರ್ಸೆಟ್ಟಿ ಹೇಳಿದ್ದಾರೆ. 

ಅಮೆರಿಕ ಮತ್ತು ಭಾರತ ಬಿಸಿನೆಸ್ ಕೌನ್ಸಿಲ್ (ಯುಎಸ್‌ಐಬಿಸಿ) ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ದೂತವಾಸ ಕಚೇರಿಯನ್ನು ಹೊಂದಿರದ ಏಕೈಕ ದೇಶ ಅಮೆರಿಕವಾಗಿತ್ತು, ಆದರೆ ಈಗ ಕಚೇರಿ ಸ್ಥಾಪನೆಗೆ ನಾವು ಈ ಬಗ್ಗೆ ಶ್ರಮಿಸುತ್ತಿದ್ದೇವೆ. ಶೀಘ್ರದಲ್ಲಿಯೇ ಒಳ್ಳೆಯ ಸುದ್ದಿಗಳನ್ನು ಘೋಷಿಸುತ್ತೇವೆ' ಎಂದರು. 

ಭಾರತೀಯನಾಗದೇ ಹೋದ್ರೆ ಅಮೆರಿಕ ಕಂಪನಿಗೆ ಸಿಇಒ ಆಗೋದು ಕಷ್ಟ: ಅಮೆರಿಕ ರಾಯಭಾರಿ

'ನಾವು ಬೆಂಗಳೂರಿನಲ್ಲಿ ಈಗಾಗಲೇ ವಿದೇಶಿ ವಾಣಿಜ್ಯವನ್ನು ಹೊಂದಿದ್ದೇವೆ. ನಮ್ಮ ಬದ್ಧತೆಯಂತೆ ಜನವರಿಯಲ್ಲಿ ಬೆಂಗಳೂರಿನಲ್ಲಿ ಕಾನ್ಸುಲೇಟ್ ಕಚೇರಿಯನ್ನು ತೆರೆಯುವುದನ್ನು ಎದುರು ನೋಡುತ್ತಿದ್ದೇವೆ' ಎಂದೂ ಹೇಳಿದರು. 
ಅಮೆರಿಕ ಈ ಹಿಂದೆಯೇ ಅಹಮದಾಬಾದ್ ಮತ್ತು ಬೆಂಗಳೂರಿನಲ್ಲಿ ಕಾನ್ಸುಲೇಟ್ ಕಚೇರಿಯನ್ನು ಪ್ರಾರಂಭಿಸುವುದಾಗಿ ಘೋಷಿಸಿತ್ತು. ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ.

ಪ್ರಜಾಪ್ರಭುತ್ವದಲ್ಲಿ ನಮಗಿಂತ ಭಾರತ ಉತ್ತಮ: ಅಮೆರಿಕ

ವಾಷಿಂಗ್ಟನ್‌: ಭಾರತದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಕೆಲವು ವಲಯಗಳಲ್ಲಿ ಎದ್ದಿರುವ ಆಕ್ಷೇಪಗಳನ್ನು ಗುರುವಾರ ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್‌ ಗಾರ್ಸೆಟಿ ತಳ್ಳಿಹಾಕಿದ್ದಾರೆ ಮತ್ತು ಪ್ರಜಾಪ್ರಭುತ್ವ ವಿಚಾರದಲ್ಲಿ ಅನೇಕ ರೀತಿಯಲ್ಲಿ ಭಾರತೀಯರು ಅಮೆರಿಕನ್ನರಿಗಿಂತ ಉತ್ತಮರು ಎಂದು ಹೇಳಿದ್ದಾರೆ. ಸಮಾರಂಭವೊಂದರಲ್ಲಿ ಗುರುವಾರ ಮಾತನಾಡಿದ ಅವರು, ‘10 ವರ್ಷಗಳ ನಂತರ ಭಾರತವು ಇಂದಿನಂತೆಯೇ ಪ್ರಜ್ವಲಿಸುವ ಪ್ರಜಾಪ್ರಭುತ್ವ ದೇಶವಾಗೇ ಉಳಿಯಲಿದೆ. ಏಕೆಂದರೆ . ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ನಿಯಮ ಅಲ್ಲಿವೆ’ ಎಂದಿದ್ದರು. 

ಭಾರತದ ಚುನಾವಣೆಯಲ್ಲಿ ಕೆಲವು ನಿಯಮ ಇವೆ. ಯಾವುದೇ ವ್ಯಕ್ತಿ ಮತ ಹಾಕಲು 2 ಕಿ.ಮೀ.ಗಿಂತ ಹೆಚ್ಚು ಹೋಗುವಂತಿಲ್ಲ. ಅಲ್ಲದೆ, ಪರ್ವತದಲ್ಲಿ ಒಬ್ಬ ಸನ್ಯಾಸಿ ಇದ್ದು, ಆತನಿಗಾಗಿ ಮತಗಟ್ಟೆ ಸ್ಥಾಪಿಸಲು ಚುನಾವಣಾ ಸಿಬ್ಬಂದಿ ಕಾಲ್ನಡಿಗೆಯಲ್ಲಿ ಸಾಗುತ್ತಾರೆ. ಅಲ್ಲದೆ, ಚುನಾವಣೆ ವೇಳೆ ಹಣದ ಸಾಗಣೆ ಮೇಲೆ ನಿಗಾಗೆ ವಾಹನ ಪರಿಶೀಲಿಸಲಾಗುತ್ತದೆ. ಹೀಗಾಗಿ ಪ್ರಜಾಸತ್ತೆ ವಿಷಯದಲ್ಲಿ ಅಮೆರಿಕಕ್ಕಿಂತ ಭಾರತೀಯರು ಉತ್ತಮ ಸ್ಥಿತಿಯಲ್ಲಿದ್ದಾರೆ’ ಎಂದು ಶ್ಲಾಘಿಸಿದರು. ಇದೇ ವೇಳೆ, ‘ಅವಕಾಶ ಸಿಕ್ಕರೆ ಅಮೆರಿಕನ್ನರು ಅಮೆರಿಕಕ್ಕಿಂತ ಭಾರತದಲ್ಲಿ ಉತ್ತಮ ಮತದಾನ ಮಾಡಬಲ್ಲರು’ ಎಂದು ಗಾರ್ಸೆಟಿ ಚಟಾಕಿ ಹಾರಿಸಿದ್ದರು.