ಅಮೆರಿಕದ ಪ್ರಸಿದ್ಧ ಹಾಗೂ ಪ್ರಖ್ಯಾತ ಕಂಪನಿಗಳಿಗೆ ಭಾರತೀಯರು ಸಿಇಒ ಆಗಿದ್ದಾರೆ. ಈಗ ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿರುವ ಎರಿಕ್ ಗಾರ್ಸೆಟ್ಟಿ ಕೂಡ ಇತ್ತೀಚೆಗೆ ತಮಾಷೆಯಾಗಿ ಇದೇ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ನವದೆಹಲಿ (ಏ.29):  ಭಾರತೀಯನಾಗಿದ್ದಲ್ಲಿ ಆ ವ್ಯಕ್ತಿ ಅಮರಿಕದಲ್ಲಿ ಕಂಪನಿಗಳಿಗೆ ಸಿಇಒ ಆಗಲು ಸಾಧ್ಯವಿಲ್ಲ ಎನ್ನುವ ಹಳೇ ಜೋಕ್‌ ಈಗ ಸಂಪೂರ್ಣವಾಗಿ ಬದಲಾಗಿದೆ ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್‌ ಗಾರ್ಸೆಟ್ಟಿ ಹೇಳಿದ್ದಾರೆ. ಆಧುನಿಕ ಕಾಲದಲ್ಲಿ ವ್ಯಕ್ತಿಯೊಬ್ಬ ಭಾರತೀಯನಾಗಿರದೇ ಇದ್ದಲ್ಲಿ ಅಥವಾ ಭಾರತೀಯ ಮೂಲದ ವ್ಯಕ್ತಿಯಾಗಿರದೇ ಇದ್ದಲ್ಲಿ ಆತ ಅಮೆರಿಕದ ಕಂಪನಿಗಳಿಗೆ ಸಿಇಒ ಆಗೋದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ 2024 ರ ಇಂಡಿಯಾಸ್ಪೊರಾ ಎಐ ಶೃಂಗಸಭೆಯಲ್ಲಿ ಮಾತನಾಡಿದ ಎರಿಕ್ ಗಾರ್ಸೆಟ್ಟಿ ತಮಾಷೆ ಮಾಡುತ್ತಾ, "ಯಶಸ್ಸುಗಳು ಸಂಭವಿಸಿವೆ, ಫಾರ್ಚೂನ್ 500 ಕಂಪನಿಗಳ 10 ಸಿಇಒಗಳಲ್ಲಿ 1 ಕ್ಕಿಂತ ಹೆಚ್ಚು ಯುಎಸ್‌ನಲ್ಲಿ ಅಧ್ಯಯನ ಮಾಡಿದ ಭಾರತೀಯ ವಲಸಿಗರು. ಈ ಹಂತದಲ್ಲಿ ಹಳೆಯ ಜೋಕ್‌ ಒಂದಿತ್ತು. ನೀವು ಭಾರತೀಯರಾಗಿದ್ದಲ್ಲಿ ಅಮೆರಿಕದ ಕಂಪನಿಗಳಿಗೆ ಸಿಇಒ ಆಗಲು ಸಾಧ್ಯವಿಲ್ಲ ಅನ್ನೋದು. ಆದರೆ, ಅದೇ ಜೋಕ್‌ ಈಗ, ನೀವು ಭಾರತೀಯರಾಗಿರದೇ ಇದ್ದಲ್ಲಿ ಅಮೆರಿಕದ ಕಂಪನಿಗಳಿಗೆ ಸಿಇಒ ಆಗಲು ಸಾಧ್ಯವಿಲ್ಲ ಎಂದು ಬದಲಾಗಿದೆ. ಅದು ಗೂಗಲ್‌ ಆಗಿರಲಿ, ಮೈಕ್ರೋಸಾಫ್ಟ್‌, ಸ್ಟಾರ್‌ಬಕ್ಸ್‌ ಆಗಿರಲಿ, ಭಾರತದಿಂದ ಬಂದ ಪ್ರಜೆಗಳು ಬಹಳ ಬದಲಾವಣೆಗಳನ್ನು ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಪಂಚದಾದ್ಯಂತ ಇರುವ ಭಾರತೀಯ ಸಿಇಒಗಳು: ಪ್ರಪಂಚದಾದ್ಯಂತ, ಕಂಪನಿಗಳನ್ನು ಭಾರತೀಯ ಸಿಇಒಗಳು ಮುನ್ನಡೆಸುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ ಆಲ್ಫಾಬೆಟ್ ಮುಖ್ಯಸ್ಥ ಸುಂದರ್ ಪಿಚೈ, ಮೈಕ್ರೋಸಾಫ್ಟ್, ಯೂಟ್ಯೂಬ್ ಮತ್ತು ಅಡೋಬ್ ಮುಖ್ಯಸ್ಥರಾಗಿರುವ ಸತ್ಯ ನಾಡೆಲ್ಲಾ, ನೀಲ್ ಮೋಹನ್ ಮತ್ತು ಶಾಂತನು ನಾರಾಯಣ್‌ರನ್ನು ಒಳಗೊಂದಿದೆ. ಮಾಜಿ ಮಾಸ್ಟರ್‌ಕಾರ್ಡ್ ಸಿಇಒ ಅಜಯ್ ಬಂಗಾ ಅವರು ವಿಶ್ವ ಬ್ಯಾಂಕ್ ಗ್ರೂಪ್‌ನ 14 ನೇ ಅಧ್ಯಕ್ಷರಾಗಿದ್ದಾರೆ. ಇತರ ಭಾರತೀಯ ಸಿಇಒಗಳು ಲಕ್ಷ್ಮಣ್ ನರಸಿಂಹನ್, ರವಿ ಕುಮಾರ್ ಎಸ್ ಮತ್ತು ಸಂಜಯ್ ಮೆಹ್ರೋತ್ರಾ, ಕ್ರಮವಾಗಿ ಸ್ಟಾರ್‌ಬಕ್ಸ್, ಕಾಗ್ನಿಜೆಂಟ್ ಮತ್ತು ಮೈಕ್ರಾನ್ ಟೆಕ್ನಾಲಜಿಯ ಮುಖ್ಯಸ್ಥರಾಗಿದ್ದಾರೆ.

ಬಾಳೆ ಎಲೆ ಊಟ ಮಾಡಿ ಎಲೆ ಅಡಿಕೆ ತಿಂದ ಅಮೆರಿಕಾ ಅಂಬಾಸಿಡರ್‌: ದಕ್ಷಿಣ ಭಾರತದ ಊಟಕ್ಕೆ ಫುಲ್ ಫಿದಾ

"ಜಾಗತಿಕ ವೇದಿಕೆಯಲ್ಲಿ ಇಂದು ಭಾರತವನ್ನು ವಿಭಿನ್ನವಾಗಿ ಗ್ರಹಿಸಲಾಗುತ್ತಿದೆ. ಇದು ನಾವೀನ್ಯತೆಯ ಸ್ಥಳವಾಗಿದೆ. ಇದು ಮಾನವ ಬಂಡವಾಳದ ದೇಶವಾಗಿದೆ. ಇದು ಪ್ರಗತಿ ಮತ್ತು ನಾವೀನ್ಯತೆಯ ಸ್ಥಳವಾಗಿದೆ. ಮೋದಿ ಈ ವಿಚಾರದಲ್ಲಿ ದೊಡ್ಡ ಮಟ್ಟದ ಕೆಲಸ ಮಾಡಿದ್ದಾರೆ ಎಂದು ಇನ್ಫಾರ್ಮ್ಯಾಟಿಕಾ ಸಿಇಒ ಅಮಿತ್ ವಾಲಿಯಾ ಸಮಾರಂಭದಲ್ಲಿ ಹೇಳಿದ್ದಾರೆ.

ಪ್ರಮುಖ ವಲಯಗಳಲ್ಲಿ ಅಮೇರಿಕ- ಭಾರತ ಬಲಗೊಳ್ಳುತ್ತಿವೆ: ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ